newsics.com
ಉತ್ತರ ಪ್ರದೇಶದ: ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕ ಶಿಕ್ಷಕಿ ನಡುವೆ ಗಲಾಟೆ ನಡೆದಿರುವ ಘಟನೆ ಉತ್ತರ ಪ್ರದೇಶದ ಮಥುರಾದ ಪ್ರಾಥಮಿಕ ಶಾಲೆಯೊಂದರಲ್ಲಿ ನಡೆದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿದೆ. ವಿದ್ಯಾರ್ಥಿಗಳಲ್ಲಿ ಶಾಲಾ ಶಿಕ್ಷಕಿಗೆ ಬೆಂಬಲವಾಗಿ ಅಂಗನವಾಡಿ ಕಾರ್ಯಕರ್ತೆಯ ಮೇಲೆ ಹಲ್ಲೆ ಮಾಡಿದ್ದಾರೆ.
ಅಂಗನವಾಡಿ ಕಾರ್ಯಕರ್ತೆ ಗಂಭೀರವಾಗಿ ಗಾಯಗೊಂಡಿದ್ದು, ಫರಿದಾಬಾದ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಡಿಯೋದಲ್ಲಿ, ಶಾಲಾ ಶಿಕ್ಷಕಿ ಮತ್ತು ಅಂಗನವಾಡಿ ಕಾರ್ಯಕರ್ತೆ ನೆಲದ ಮೇಲೆ ಬಿದ್ದು ಪರಸ್ಪರ ಕೂದಲನ್ನು ಎಳೆಯುವುದನ್ನು ಕಾಣಬಹುದು. ಅವರು ಪರಸ್ಪರ ಕಪಾಳಕ್ಕೆ ಹೊಡೆಯುವುದು ಮತ್ತು ಒದೆಯುವುದನ್ನು ಸಹ ಕಾಣಬಹುದು. ಶಾಲೆಯ ಚಿಕ್ಕ ಮಕ್ಕಳು ಸಹ ಹೊಡೆದಾಟದಲ್ಲಿ ಭಾಗವಹಿಸಿದ್ದಾರೆ. ಇಬ್ಬರೂ ನೆಲದ ಮೇಲೆ ಕೂದಲು ಎಳೆಯುತ್ತಿರುವಾಗ ಮಕ್ಕಳು ಅಂಗನವಾಡಿ ಕಾರ್ಯಕರ್ತೆಯನ್ನು ಹೊಡೆದಿದ್ದಾರೆ.