newsics.com
ನವದೆಹಲಿ : ಎಟಿಎಂ ಕಾರ್ಡ್ ಬಳಸುವ ಗ್ರಾಹಕರಿಗೆ ಆಘಾತ ಸುದ್ದಿಯೊಂದು ಹೊರ ಬಿದ್ದಿದೆ. ಆರ್‌ಬಿಐಯು ಎಟಿಎಂ ಇಂಟರ್‌ಚೇಂಜ್ ಶುಲ್ಕ ಹೆಚ್ಚಳ ಮಾಡಿದೆ.
ಈ ಹೊಸ ನಿಯಮ ಮೇ 1ರಿಂದ ಜಾರಿಗೆ ಬರಲಿದೆ. ಎಟಿಎಂ ಶುಲ್ಕ ಹಣಕಾಸು ವಹಿವಾಟುಗಳಿಗೆ ರೂ.2, ಹಣಕಾಸೇತರ ವಹಿವಾಟುಗಳಿಗೆ ರೂ.1ಹೆಚ್ಚಿಸಲು ಮುಂದಾಗಿದೆ.
ATM ಟ್ರಾನ್ಸಾಕ್ಷನ್ ಚಾರ್ಜ್ ಜಾಸ್ತಿ ಮಾಡೋಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅನುಮತಿಯನ್ನು ನೀಡಿದೆ. ಈ ಚೇಂಜಸ್ ಇಂದ ಸಣ್ಣ ಬ್ಯಾಂಕುಗಳಿಗೆ ಲಾಸ್ ಆಗುತ್ತೆ, ಯಾಕಂದ್ರೆ ಅವರ ATM ನೆಟ್ವರ್ಕ್ ಕಮ್ಮಿ ಇರುತ್ತೆ.
ಇನ್ಮುಂದೆ ಫೈನಾನ್ಸಿಯಲ್ ಟ್ರಾನ್ಸಾಕ್ಷನ್ ಗೆ 2 ರೂಪಾಯಿ ಜಾಸ್ತಿ ಚಾರ್ಜ್, ಹಾಗು ಫೈನಾನ್ಸಿಯಲ್ ಅಲ್ಲದ ಟ್ರಾನ್ಸಾಕ್ಷನ್ ಗೆ 1 ರೂಪಾಯಿ ಜಾಸ್ತಿ ಚಾರ್ಜ್ ಹಾಕ್ತಾರೆ. ಈ ಹೊಸ ರೂಲ್ಸ್ ಮುಂದಿನ ತಿಂಗಳು ಮೇ 1ರಿಂದ ಜಾರಿಗೆ ಬರಲಿದೆ.
ಹೊಸ ರೂಲ್ಸ್ ಪ್ರಕಾರ, ಫೈನಾನ್ಸಿಯಲ್ ಟ್ರಾನ್ಸಾಕ್ಷನ್ ಅಂದ್ರೆ ದುಡ್ಡು ತಗೋಳೋಕೆ ಟ್ರಾನ್ಸಾಕ್ಷನ್ ಚಾರ್ಜ್ 17 ರೂಪಾಯಿಂದ 19 ರೂಪಾಯಿಗೆ ಹೆಚ್ಚಳ ಆಗಿದೆ. ಫೈನಾನ್ಸಿಯಲ್ ಅಲ್ಲದ ಟ್ರಾನ್ಸಾಕ್ಷನ್ ಅಂದ್ರೆ ಬ್ಯಾಲೆನ್ಸ್ ಚೆಕ್ ಮಾಡೋದು ಅಥವಾ ಬೇರೆ ಸರ್ವಿಸ್ ಗೆ ಟ್ರಾನ್ಸಾಕ್ಷನ್ ಚಾರ್ಜ್ 6 ರೂಪಾಯಿಂದ 7 ರೂಪಾಯಿಗೆ ಜಾಸ್ತಿ ಆಗಿದೆ.