newsics.com
ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಸಮಾರಂಭವೊಂದರಲ್ಲಿ ದೀಪ ಹಚ್ಚಿ ಸಮಾರಂಭ ಉದ್ಘಾಟಿಸಿದ್ದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ದೀಪದ ಬತ್ತಿಗಳನ್ನು ಚೆನ್ನಾಗಿ ಬೆಳಗುವಂತೆ ಎತ್ತಿ, ಎಣ್ಣೆ ಮೆತ್ತಿದ ಕೈಯ್ಯನ್ನು ತಮ್ಮ ಹಿಂದೆ ನಿಂತಿದ್ದ ಸಾಧು ಕೋಕಿಲ ಅವರ ತಲೆಗೆ ಒರಿಸಿದ್ದಾರೆ. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಡಿಯೋ ಸಖತ್ ವೈರಲ್ ಆಗಿದೆ. ಇದು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾೋಟನೆ ಸಮಾರಂಭದಲ್ಲಿ ನಡೆದ ದೃಶ್ಯಾವಳಿ ಎನ್ನಲಾಗಿದೆ. ದೀಪ ಹಚ್ಚುವ ವೇಳೆ ಡಿಸಿಎಂ ಡಿಕೆಶಿ ಕೈಗೆ ಎಣ್ಣೆ ಮೆತ್ತಿಕೊಳ್ಳುತ್ತದೆ, ಆಗ ಸ್ವಲ್ಪ ಎಣ್ಣೆಯನ್ನು ದೀಪಕ್ಕೆ ಒರೆಸುವ ಡಿಕೆಶಿ ನಂತರ ಕೈಯಲ್ಲಿ ಸ್ವಲ್ಪ ಉಳಿದ ಎಣ್ಣೆಯನ್ನು ಸಾಧು ಅವರ ತಲೆಗೆ ಒರೆಸುತ್ತಾರೆ.
ಬೇಸುರಾ ಥಾನ್ಸೇನ್ ಎಂಬುವವರು ಮಾಡಿರುವ ಈ ಟ್ವೀಟ್ ಗೆ ಭಾರಿ ಕಮೆಂಟ್ ಗಳು ಬರುತ್ತಿದೆ. ಕೆಲವರು ವ್ಯಂಗ್ಯಭರಿತ ಕಮೆಂಟ್ ಮಾಡಿದರೆ, ಕೆಲವರು ಗರಂ ಆಗಿ ಟೀಕೆ ವ್ಯಕ್ತಪಡಿಸಿದ್ದಾರೆ.
Reels ಲಾಂಗ್ ಹಿಡಿದು ರೀಲ್ಸ್ ಕೇಸ್ : ಬಿಗ್ ಬಾಸ್ ಖ್ಯಾತಿಯ ರಜತ್, ವಿನಯ್ ಗೌಡ ರಿಲೀಸ್.!
Private Bus Fare Hike ಹಬ್ಬಕ್ಕೆ ಊರಿಗೆ ಹೊರಡುವವರಿಗೆ ಬಿಗ್ ಶಾಕ್: ಬಸ್ ಟಿಕೆಟ್ ದರ ಭಾರಿ ಏರಿಕೆ