ದೆಹಲಿ: ಇದೀಗ ಮೊಬೈಲ್ ಬಳಕೆದಾರರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ಕೆಲ ಆ್ಯಪ್ಗಳನ್ನು ನಿಮ್ಮ ಮೊಬೈಲ್ನಿಂದ ಡಿಲೀಟ್ ಮಾಡುವಂತೆ ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಏಜೆನ್ಸಿ ಸೈಬರ್ ದೋಸ್ತ್ ಸೂಚನೆ ನೀಡಿದೆ.
ಇತ್ತೀಚಿನ ದಿನಗಳಲ್ಲಿ ಸೈಬರ್ ಪ್ರಕರಣಗಳು ಹೆಚ್ಚುತ್ತಿವೆ. ಆನ್ಲೈನ್ ಮೂಲಕ ವಂಚನೆಗಳುನಡೆಯುತ್ತಿದ್ದು, ಇದರಿಂದಜಾಗೃತರಾಗಿರಿ ಎಂದು ಹೇಳಿದೆ. CashExpand-U ಫೈನಾನ್ಸ್ ಅಸಿಸ್ಟೆಂಟ್ ಲೋನ್ ಅಪ್ಲಿಕೇಷನ್ ಬಗ್ಗೆ ಜಾಗರೂಕರಾಗಿರಿ. ಇದು ವಿದೇಶಿ ಶತ್ರುಗಳಿಗೆ ಸಂಬಂಧಿಸಿರಬಹುದು ಎಂದು ಹೇಳಿದೆ.
ನಿಮ್ಮ ಮೊಬೈಲ್ನಲ್ಲಿ ಈ ಅಪ್ಲಿಕೇಷನ್ ಇದ್ದರೆ ಕೂಡಲೇ ಡಿಲಿಟ್ ಮಾಡಿ. ಇಲ್ಲದಿದ್ರೆ ನಿಮ್ಮ ಮೊಬೈಲ್ನಲ್ಲಿರುವ ದಾಖಲೆಗಳಿಗೆ ಹಾನಿ ಮಾಡಬಹುದು ಎಂದು ಎಚ್ಚರಿಕೆ ನೀಡಿದೆ.
ಈಗಾಗಲೇ ಈ ಅಪ್ಲಿಕೇಷನ್ನನ್ನು ಗೂಗಲ್ ಪ್ಲೇ ಸ್ಟೋರ್ನಿಂದ ತೆಗೆದು ಹಾಕಲಾಗಿದೆ. ಆದರೆ ಈಗಾಗಲೇ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಡೌನ್ಲೋಡ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಅಪ್ಲಿಕೇಷನ್ 4.4 ರೇಟ್ ಪಡೆದುಕೊಂಡಿದೆ. ಇದರ ಬಗ್ಗೆ 7.19 ಸಾವಿರ ಮಂದಿ ವಿಶ್ಲೇಷಣೆ ಮಾಡಿದ್ದಾರೆ. ಈ ಅಪ್ಲಿಕೇಷನ್ ಸಾಲ ಸೌಲಭ್ಯ ಒದಗಿಸುತ್ತಿತ್ತು, ಅದರ ಬಗ್ಗೆ ಹುಷಾರಾಗಿರಿ ಎಂದು ತಿಳಿಸಿದೆ.