newsics.com
ಧಾರವಾಡ: ಅಣ್ಣನ ಹೆಂಡತಿ ಮೇಲೆ ಮೈದುನ ಎಲ್ಲೆಂದರಲ್ಲಿ ಕಚ್ಚಿ ಮೃಗೀಯ ವರ್ತನೆ ತೋರಿರುವ ಘಟನೆ ಧಾರವಾಡದ ಕುಂದಗೋಳ ತಾಲೂಕಿನ ಹೊಸ ಕಟ್ಟಿ ಗ್ರಾಮದಲ್ಲಿ ನಡೆದಿದೆ,
ಸ್ವಂತ ಅತ್ತಿಗೆಯನ್ನ ಮಂಚಕ್ಕೆ ಕರೆದಿದ್ದಾನೆ. ಆದ್ರೆ, ಇದಕ್ಕೆ ಅತ್ತಿಗೆ ಸವಿತಾ ಬಸಪ್ಪ ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ರಮೇಶ್, ಅತ್ತಿಗೆಯನ್ನು ಹಿಡಿದುಕೊಂಡು ಎಲ್ಲೆಂದರಲ್ಲಿ ಕಚ್ಚಿದ್ದಾನೆ. ಮುಖ, ಎದೆ ಭಾಗ , ಗಲ್ಲಕ್ಕೆ ಕಚ್ಚಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಬಳಿಕ ಮೈದುನನಿಂದ ತಪ್ಪಿಸಿಕೊಂಡು ಮನೆಯಿಂದ ಕೈಗಾಡಿಕೊಂಡು ಹೊರಗೆ ಬಂದಿದ್ದಾಳೆ. ಆಗ ಅಕ್ಕಪಕ್ಕದ ಜನರು ಏನಾಯ್ತು ಎಂದು ಓಡೋಡಿ ಬಂದಿದ್ದು, ಗಾಯಗೊಂಡಿದ್ದ ಸವಿತಾಳನ್ನ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಸವಿತಾ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಇತ್ತ ಕಾಮುಕ ಮೈದುನ ಪರಾರಿಯಾಗಿದ್ದಾನೆ.
ಹೊಸಕಟ್ಟಿ ಗ್ರಾಮದಲ್ಲಿ ಸಹೋದರಾರ ಬಸಪ್ಪ ಹಾಗೂ ರಮೇಶ್ ಇಬ್ಬರು ಕೂಲಿಕೆಲಸ ಮಾಡಿಕೊಂಡು ಜೀವನ ಮಾಡತಿದ್ದರು. ಇಬ್ಬರಿಗೂ ಹೆಚ್ಚು ಕಡಿಮೆ ಹತ್ತು ವರ್ಷದ ಹಿಂದೆ ಮದುವೆಯಾಗಿದ್ದು, ಒಂದೇ ಮನೆಯಲ್ಲಿ ವಾಸವಾಗಿದ್ದು. ಇನ್ನು ಬಸಪ್ಪನ ಪತ್ನಿ ಸವಿತಾ ಗಾರ್ಮೆಂಟ್ಸ್ ಕೆಲಸ ಮಾಡತಿದ್ದಳು. ಒಂದೇ ಮನೆಯಲ್ಲಿ ಇದ್ದ ಕಾರಣ, ಸವಿತಾ ಮೇಲೆ ಮೈದುನ ರಮೇಶ್ ಕಣ್ಣು ಹಾಕಿದ್ದ, ಯಾರೂ ಇಲ್ಲದ ವೇಳೆ ಜಗಳ ತಗೆದು ನನ್ನ ಜೊತೆ ಬಾ ಎಂದು ಮೃಗೀಯ ವರ್ತನೆ ತೋರಿದ್ದಾನೆ. ಇನ್ನು ಸವಿತಾ ಸಂಬಂಧಿಕರು ಕುಂದಗೋಳ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ.