newsics.com
ಬೆಂಗಳೂರು: ನಟಿ ರನ್ಯಾ ರಾವ್ ವಿರುದ್ಧದ ಚಿನ್ನ ಅಕ್ರಮ ಸಾಗಾಟ ಪ್ರಕರಣದಲ್ಲಿ ರಾಜಕಾರಣಿಗಳಲ್ಲದೆ ಸ್ವಾಮೀಜಿಯೊಬ್ಬರ ಹೆಸರೂ ಥಳುಕು ಹಾಕಿಕೊಂಡಿದೆ.
ಸ್ವಾಮೀಜಿ ದುಬೈನಲ್ಲಿ ಕಚೇರಿ ತೆರೆದು ವ್ಯವಹಾರ ಮಾಡುತ್ತಿದ್ದರು. ಹಣ ವಿನಿಮಯಕ್ಕಾಗಿ ಕ್ರಿಪ್ಟೋ ಕರೆನ್ಸಿ ಬಳಸುತ್ತಿದ್ದರು. ಅಲ್ಲದೇ ರಕ್ಷಣೆಗಾಗಿ ಸ್ವಾಮೀಜಿ ಪ್ರಭಾವಿ ರಾಜಕೀಯ ನಾಯಕರ ಜತೆ ನಿಕಟ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದೆ.
ರನ್ಯಾಗೆ ಸಚಿವರ ಬೆಂಬಲವಿದೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ ಬಿಜೆಪಿ, ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ.ಪರಮೇಶ್ವರ್ ರನ್ಯಾ ಮದುವೆಯಲ್ಲಿ ಭಾಗಿಯಾಗಿದ್ದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ಮತ್ತೊಂದೆಡೆ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ನೇತೃತ್ವದಲ್ಲಿ ರನ್ಯಾರಾವ್ ಪ್ರಕರಣದ ಶಂಕಿತ ಆರೋಪಿ ರನ್ಯಾ ಮಲತಂದೆ ರಾಮಚಂದ್ರರಾವ್ ಪಾತ್ರದ ಬಗ್ಗೆ ಪ್ರತ್ಯೇಕವಾಗಿ ತನಿಖೆ ಮಾಡಲು ರಾಜ್ಯ ಸರ್ಕಾರ ಆದೇಶಿಸಿತ್ತು. ಇನ್ನೊಂದೆಡೆ ರನ್ಯಾರಾವ್‌ಗೆ ಶಿಷ್ಟಾಚಾರ ಬಳಕೆಯಾಗಿರುವ ಬಗ್ಗೆ ತನಿಖೆಗೆ ಸಿಐಡಿಗೆ ಮಂಗಳವಾರ ಆದೇಶ ನೀಡಿತ್ತು. ಆ ಆದೇಶವನ್ನು ಬುಧವಾರ ಮತ್ತೆ ಹಿಂಪಡೆದಿದೆ.
ಜಾಮೀನು ಅರ್ಜಿ ವಿಚಾರಣೆ ಪೂರ್ಣ
ಈ ಮಧ್ಯೆ, ರನ್ಯಾ ರಾವ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಆರ್ಥಿಕ ಅಪರಾಧಗಳ ನ್ಯಾಯಾಲಯ ವಿಚಾರಣೆ ನಡೆಸಿ ಆದೇಶವನ್ನು ಮಾ.14ಕ್ಕೆ ಪ್ರಕಟಿಸುವುದಾಗಿ ತಿಳಿಸಿದೆ.
ವಿಚಾರಣೆ ವೇಳೆ ಡಿಆರ್‌ಐ ಅಧಿಕಾರಿಗಳ ಪರ ವಕೀಲ ಮಧು ಎನ್. ರಾವ್ ವಾದ ಮಂಡಿಸಿ, ಪ್ರೋಟೋಕಾಲ್ ಅಧಿಕಾರಿಗಳ ಸಹಾಯದಿಂದಲೇ ಚಿನ್ನ ಅಕ್ರಮ ಸಾಗಣೆ ಪ್ರಕ್ರಿಯೆ ನಡೆದಿದೆ. ಹೀಗಾಗಿ ಜಾಮೀನು ನೀಡಬಾರದು ಎಂದು ಮನವಿ ಮಾಡಿದ್ದಾರೆ.
ತಂದೆಯಿಂದಲೇ ಸ್ವಂತ ಮಗಳ ಮೇಲೆ ನಿರಂತರ ಅತ್ಯಾ*ಚಾರ, ಗರ್ಭಿಣಿಯಾದ ಯುವತಿ, ಆರೋಪಿ ಸೆರೆ
Know your personality ಚಿತ್ರದ ಮೂಲಕ ನಿಮ್ಮ ವ್ಯಕ್ತಿತ್ವ ತಿಳಿಯಿರಿ! ನಿಮ್ಮ ಆಯ್ಕೆಯ ವೃತ್ತ ಯಾವುದು? ನೀವೆಂಥವರು?
Honeytrap ಹನಿಟ್ರ್ಯಾಪ್‌ಗೆ ಸಿಲುಕಿದ ಗುಬ್ಬಿ ಪಪಂ ಸದಸ್ಯನ ಒದ್ದಾಟ, ಪೊಲೀಸರಿಗೆ ದೂರು, ವಂಚಕಿ ಗ್ಯಾಂಗ್ ಅರೆಸ್ಟ್