newsics.com
ಕೋಲಾರ: ಅನ್ಯರಿಂದ, ಕೆಟ್ಟ ದೃಷ್ಟಿಯಿಂದ ಮಗಳನ್ನು ಕಾಪಾಡಬೇಕಿದ್ದ ತಂದೆಯೇ ಪೈಶಾಚಿಕ ಕೃತ್ಯ ಎಸಗಿದ್ದಾನೆ. ತಂದೆಯಿಂದಲೇ ಮಗಳ ಮೇಲೆ ನಿರಂತರ ಅತ್ಯಾಚಾರ ನಡೆದಿದ್ದು, ಇದೀಗ ಆಕೆ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದೆ.
ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನಲ್ಲಿ ಈ ಪೈಶಾಚಿಕ ಕೃತ್ಯ ನಡೆದಿದೆ. ಅಪ್ಪಯ್ಯಪ್ಪ ಎನ್ನುವ ವ್ಯಕ್ತಿ ತನ್ನ 20 ವರ್ಷದ ಮಗಳ ಮೇಲೆ 5 ತಿಂಗಳಿನಿಂದ ನಿರಂತರ ಅತ್ಯಾಚಾರ ಎಸಗಿದ್ದಾನೆ. ಪರಿಣಾಮ ಮಗಳು ಗರ್ಭಿಣಿಯಾಗಿದ್ದಾಳೆ. ಯುವತಿ ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಹೋದಾಗ ತಂದೆಯ ವಿಕೃತ ಕಾಮ ಬೆಳಕಿಗೆ ಬಂದಿದೆ.
ಅಪ್ಪಯ್ಯಪ್ಪಗೆ ಮೂರು ಹೆಣ್ಣು ಒಂದು ಗಂಡು ಮಗು ಇದ್ದು, ತಾಯಿ ಇಲ್ಲದ ಮಕ್ಕಳನ್ನು ತಾನೇ ನೋಡಿಕೊಳ್ಳುತ್ತಿದ್ದ. ಮೊದಲ ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಕೊಟ್ಟಿದ್ದಾನೆ. ಆದ್ರೆ, 20 ವರ್ಷದ ಮೂರನೇ ಮಗಳ ಮೇಲೆ ತನ್ನ ಕಾಮತೃಷೆ ತೀರಿಸಿಕೊಂಡಿದ್ದಾನೆ.
ಮಗಳು ಎನ್ನುವುದನ್ನೂ ನೋಡದೇ ನಿರಂತರವಾಗಿ ಆಕೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇದರಿಂದ ಯುವತಿ ಗರ್ಭಿಣಿಯಾಗಿದ್ದಾಳೆ.
ಮಗಳ ತಂದೆ ಅಪ್ಪಯ್ಯಪ್ಪ ವಿರುದ್ಧ ದೂರು ನೀಡಿದ್ದು, ದೂರಿನ ಮೇರೆಗೆ ಕಾಮಸಮುದ್ರ ಪೊಲೀಸರು ಅಪ್ಪಯ್ಯಪ್ಪನನ್ನು ಬಂಧಿಸಿದ್ದಾರೆ.
Know your personality ಚಿತ್ರದ ಮೂಲಕ ನಿಮ್ಮ ವ್ಯಕ್ತಿತ್ವ ತಿಳಿಯಿರಿ! ನಿಮ್ಮ ಆಯ್ಕೆಯ ವೃತ್ತ ಯಾವುದು? ನೀವೆಂಥವರು?
Honeytrap ಹನಿಟ್ರ್ಯಾಪ್‌ಗೆ ಸಿಲುಕಿದ ಗುಬ್ಬಿ ಪಪಂ ಸದಸ್ಯನ ಒದ್ದಾಟ, ಪೊಲೀಸರಿಗೆ ದೂರು, ವಂಚಕಿ ಗ್ಯಾಂಗ್ ಅರೆಸ್ಟ್