Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Karnataka police ಮತ್ತೆ ಐಪಿಎಸ್‌ಗಳ ಕದನ: ರೂಪಾ ಮೌದ್ಗಿಲ್ ವಿರುದ್ಧ DIG ವರ್ತಿಕಾ ದೂರು
ಕರ್ನಾಟಕಪ್ರಮುಖ

Karnataka police ಮತ್ತೆ ಐಪಿಎಸ್‌ಗಳ ಕದನ: ರೂಪಾ ಮೌದ್ಗಿಲ್ ವಿರುದ್ಧ DIG ವರ್ತಿಕಾ ದೂರು

Share
2 Min Read
SHARE

newsics.com

ಬೆಂಗಳೂರು: ರಾಜ್ಯದಲ್ಲಿ ಐಪಿಎಸ್‌ ಅಧಿಕಾರಿ ಡಿ. ರೂಪಾ ಮತ್ತು ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಆರೋಪ-ಪ್ರತ್ಯಾರೋಪದ ಬಳಿಕ ಈಗ ಡಿ. ರೂಪಾ ವಿರುದ್ಧ ಮಹಿಳಾ ಐಪಿಎಸ್‌ ಅಧಿಕಾರಿಯೊಬ್ಬರು ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

ಕೆಳಹಂತದ ಅಧಿಕಾರಿಯ ಕಚೇರಿಯನ್ನು ಅತಿಕ್ರಮವಾಗಿ ಪ್ರವೇಶಿಸಿದ ಆರೋಪಕ್ಕೆ ಆಂತರಿಕ ಭದ್ರತ ದಳ (ಐಎಸ್‌ಡಿ)ದ ಐಜಿಪಿ, ಹಿರಿಯ ಐಪಿಎಸ್‌ ಅಧಿಕಾರಿ ಡಿ.ರೂಪಾ ಗುರಿಯಾಗಿದ್ದು, ಈ ಸಂಬಂಧ ಐಎಸ್‌ಡಿ ಡಿಐಜಿಪಿ ವರ್ತಿಕಾ ಕಟಿಯಾರ್‌ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಪೊಲೀಸ್‌ ಮಹಾನಿರ್ದೇಶಕ ಮತ್ತು ಐಎಸ್‌ಡಿ ಡಿಜಿಪಿಗೂ ದೂರು ನೀಡಿದ್ದಾರೆ.

ಐಜಿಪಿ ರೂಪಾ ಅವರ ಆದೇಶದಂತೆ, 2024ರ ಸೆ. 6ರಂದು ಹೆಡ್‌ಕಾನ್‌ಸ್ಟೆಬಲ್‌ ಟಿ.ಎಸ್‌. ಮಂಜುನಾಥ್‌, ಐಜಿಪಿ ರೂಪಾ ಅವರ ಕಚೇರಿ ಸೆಂಟ್ರಿ ಆಗಿರುವ ಹೋಮ್‌ ಗಾರ್ಡ್‌ ಮಲ್ಲಿಕಾರ್ಜುನ್‌, ಕಂಟ್ರೋಲ್‌ ರೂಂನಿಂದ ನಮ್ಮ ಕಚೇರಿಯ ಕೀಯನ್ನು ತೆಗೆದುಕೊಂಡು ಬಂದು ನನ್ನ ಅನುಮತಿ ಇಲ್ಲದೆ, ಕಚೇರಿಯ ಬಾಗಿಲು ತೆರೆದಿದ್ದಾರೆ. ಅಲ್ಲದೆ ಮಲ್ಲಿಕಾರ್ಜುನ್‌ ಕೆಲವೊಂದು ಕಡತಗಳನ್ನು ನಮ್ಮ ಕಚೇರಿಯಲ್ಲಿ ಇರಿಸಿ, ಕಚೇರಿಯ ಫೋಟೋಗಳನ್ನು ತೆಗೆದು ಐಜಿಪಿ ರೂಪಾಗೆ ವಾಟ್ಸ್‌ಆಯಪ್‌ ಮೂಲಕ ಕಳುಹಿಸಿದ್ದಾರೆ.

ಅದಕ್ಕೂ ಮೊದಲು ನನ್ನ ಆಪ್ತಸಹಾಯಕ ಕಿರಣ್‌ಕುಮಾರ್‌ ಅವರು, ಮಂಜುನಾಥ್‌ಗೆ ಡಿಐಪಿ ಅವರ ಅನುಮತಿ ಇಲ್ಲದೆ ಕಚೇರಿ ಬಾಗಿಲು ತೆರೆಯುವಂತಿಲ್ಲ ಎಂದು ಎಚ್ಚರಿಕೆ ನೀಡಿದರೂ ಅತಿಕ್ರಮವಾಗಿ ಕಚೇರಿ ಪ್ರವೇಶಿದ್ದಲ್ಲದೆ, ಕಡತಗಳನ್ನು ಇರಿಸಿ ಫೋಟೋ ಕಳುಹಿಸಿದ್ದಾರೆ ಎಂದು ವರ್ತಿಕಾ ಕಟಿಯಾರ್‌ ದೂರಿನಲ್ಲಿ ಆರೋಪಿಸಿದ್ದಾರೆ.

ರೂಪಾ ಸೂಚನೆಯಂತೆ ಸಿಬಂದಿ ಕೆಲಸ
ನಮ್ಮ ಕಚೇರಿಯಲ್ಲಿ ಗೌಪ್ಯ ದಾಖಲೆಗಳು ಮತ್ತು ಇತರ ಕಚೇರಿಗೆ ಸಂಬಂಧಿಸಿದ ದಾಖಲೆಗಳನ್ನು ಇರಿಸಲಾಗಿದ್ದು, ಕಚೇರಿ ಅವಧಿ ಮುಗಿದ ಬಳಿಕ ಮತ್ತು ಅಧಿಕಾರಿಗಳು ಕೊಠಡಿಯಲ್ಲಿ ಇಲ್ಲದ ಸಮಯದಲ್ಲಿ ಹಾಗೂ ಅವರ ಅನುಮತಿ ಇಲ್ಲದೆ ನಮ್ಮ ಕಚೇರಿ ಕೊಠಡಿಯ ಬೀಗವನ್ನು ತೆಗೆದು ಅನಧಿಕೃತ ಪ್ರವೇಶ ಮಾಡಿಸಿರುವುದು ಅಕ್ಷಮ್ಯ ಅಪರಾಧವಾಗಿದೆ. ಇತ್ತೀಚೆಗಷ್ಟೇ ಈ ವಿಚಾರ ನಮ್ಮ ಗಮನಕ್ಕೆ ಬಂದಿದ್ದು, ಕೂಡಲೇ ನನ್ನ ಕಚೇರಿ ಆಪ್ತ ಸಹಾಯಕ ಕಿರಣ್‌ಕುಮಾರ್‌, ಮಂಜುನಾಥ್‌, ಮಲ್ಲಿಕಾರ್ಜುನ್‌ ಅವರನ್ನು ಕರೆದು ವಿಚಾರಿಸಿದಾಗ, ಡಿ. ರೂಪಾ ಅವರ ಸೂಚನೆ ಮೇರೆಗೆ ಕಚೇರಿ ತೆರೆದು, ಕಡತ ಇರಿಸಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ.

ಇದು ಕಾನೂನುಬಾಹಿರವಾಗಿದ್ದು, ಉದ್ದೇಶಪೂರ್ವಕ ವಾಗಿ ದುರ್ಬಳಕೆ ಮಾಡಿಕೊಂಡಿರುತ್ತಾರೆ. ಈ ಒಂದು ಘಟನೆ ನನ್ನ ಗಮನಕ್ಕೆ ಬಂದಿದ್ದು, ಈ ರೀತಿಯ ಎಷ್ಟೋ ಘಟನೆಗಳು ಈ ಹಿಂದೆ ನಡೆದಿದ್ದರೂ ಅದು ನನ್ನ ಗಮನಕ್ಕೆ ಬಂದಿರುವುದಿಲ್ಲ. ಮುಂದೆಯೂ ಈ ರೀತಿಯ ಘಟನೆಗಳು ನಡೆಯಬಹುದಾಗಿದೆ. ಈ ರೀತಿಯ ಘಟನೆಗಳು ಕಚೇರಿಯ ವಾತಾವರಣ ಮತ್ತು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ-ಸಿಬಂದಿ ಮನಸ್ಥಿತಿಗೆ ಹಾನಿ ಉುಂಟುಮಾಡುತ್ತವೆ. ಇನ್ನು ಮುಂದೆ ನನ್ನ ಕಚೇರಿ ಕೊಠಡಿಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಿದಲ್ಲಿ ಅದಕ್ಕೆ ಐಜಿಪಿ ಡಿ. ರೂಪಾ ಅವರೇ ನೇರ ಹೊಣೆಗಾರರಾಗಿರುತ್ತಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ನನ್ನ ವಾರ್ಷಿಕ ವರದಿ ಹಾಳು
ಮಾಡುವುದಾಗಿ ಬೆದರಿಕೆ
ನನ್ನ ಕಚೇರಿಯನ್ನು ಅತಿಕ್ರಮ ಪ್ರವೇಶಿಸಿರುವ ಡಿ. ರೂಪಾ ಅವರು ಈ ಘಟನೆಯನ್ನು ಯಾವ ರೀತಿ ಬೇಕಾದರೂ ನಮ್ಮ ವಿರುದ್ಧ ಸೇಡು ತೀರಿಸಿಕೊಳ್ಳಲು ದುರುಪಯೋಗಪಡಿಸಿಕೊಳ್ಳಬಹುದಾಗಿದೆ. ಆದ್ದರಿಂದ ಡಿ. ರೂಪಾ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಹಾಗೂ ನನಗೆ ನ್ಯಾಯ ಒದಗಿಸಬೇಕು ಎಂದು ಡಿಐಜಿಪಿ ವರ್ತಿಕಾ ಕಟಿಯಾರ್‌ ದೂರಿನಲ್ಲಿ ಉಲ್ಲೇಖೀಸಿದ್ದಾರೆ.

TAGGED:Karnataka: Battle of IPS again: DIG Varthika files complaint against IPS officer Rupa Maudgil
Share This Article
Facebook Twitter Copy Link Print
Previous Article DNA Test ಡಿಎನ್ಎ ಮೂಲಕ ಮಗುವನ್ನು ಹೇಗೆ ಗುರುತಿಸುವುದು?: ಇದರ ಬೆಲೆ ಎಷ್ಟು?
Next Article Viral video ನದಿ ನೀರಿನ ಮಟ್ಟ ದಿಢೀರ್ ಏರಿಕೆ; ಅರೆಬರೆ ಸುಟ್ಟ ದೇಹವನ್ನೇ ಹೊತ್ತೊಯ್ದ ಸಂಬಂಧಿಕರು!

Popular Posts

Ind vs Zim ಟೀಮ್ ಇಂಡಿಯಾದಲ್ಲಿ ಭಾರೀ ಸರ್ಜರಿ! 6 ಮಂದಿ ಔಟ್‌, ಯಾರೆಲ್ಲ ಸೇರಿದ್ರು?

2 Min Read

Relationship- Personal Health ಗಂಡಸರಲ್ಲಿ ಪುರುಷತ್ವ ತೀವ್ರ ಕುಸಿತ! ಟೆಸ್ಟೋಸ್ಟೆರಾನ್ ಥೆರಪಿಗೆ ಹೆಚ್ಚುತ್ತಿದೆ ಬೇಡಿಕೆ, ಯಾಕೆ ಹೀಗೆ?

3 Min Read

Toll Price Hike ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸವಾರರಿಗೆ ಶಾಕ್; ವರ್ಷದಲ್ಲೇ 2ನೇ ಬಾರಿ ಸದ್ದಿಲ್ಲದೇ ಟೋಲ್ ದರ ಹೆಚ್ಚಿಸಿದ ಹೆದ್ದಾರಿ ಪ್ರಾಧಿಕಾರ

1 Min Read

Scholl van tragedy ಶಾಲಾ ವಾಹನದ ಮೇಲೆ ಮರ ಬಿದ್ದು ಬಾಲಕಿ ಸಾವು, ಮಗು ಸ್ಥಿತಿ‌ ಗಂಭೀರ

1 Min Read

You Might Also Like

ಪ್ರಮುಖಕರ್ನಾಟಕ

Footpath Driving Fine ಫುಟ್‌ಪಾತ್‌ನಲ್ಲಿ ಗಾಡಿ ಓಡಿಸಿದರೆ ಬೀಳಲಿದೆ ₹5,000 ದಂಡ! ಸಾರಿಗೆ ಸಚಿವರಿಗೆ ಸಚಿವ ಕೃಷ್ಣ ಬೈರೇಗೌಡ ಪತ್ರ

1 Min Read
ಪ್ರಮುಖCrimeಕರ್ನಾಟಕ

Soujanya Case ಸೌಜನ್ಯ ಹತ್ಯೆ ಪ್ರಕರಣ; ಸಿಬಿಐ ತನಿಖೆಗೆ ಸುಪ್ರೀಂ ಅಸಮಾಧಾನ, ಮರುತನಿಖೆಯ ಆದೇಶ ಕಾಯ್ದಿರಿಸಿದ ಪೀಠ

1 Min Read
ಪ್ರಮುಖದೇಶ

Smriti Mandhana ಎಲ್‌ಎಸ್‌ಜಿ ಜರ್ಸಿಯಲ್ಲಿ ಆರ್‌ಸಿಬಿ ನಾಯಕಿ? ಸ್ಮೃತಿ ಮಂದಾನಾ ಹೊಸ ಫೋಟೋ ವೈರಲ್‌

1 Min Read
ಪ್ರಮುಖಲೈಫ್‌ಸ್ಟೈಲ್

Credit Card Limit ನಿಮಗೆ ಗೊತ್ತಾಗದಂತೆ ಕ್ರೆಡಿಟ್‌ ಕಾರ್ಡ್‌ ಲಿಮಿಟ್‌ ಕಟ್‌ ಆಯ್ತಾ? ಬ್ಯಾಂಕುಗಳ ಈ ನಿರ್ಧಾರಕ್ಕೆ ಅಸಲಿ ಕಾರಣ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?