newsics.com
ರಾಜಸ್ಥಾನ: ಸಾಲ ಮಾಡಿ ತಂದಿದ್ದ ಒಂಟೆಯೊಂದು ತನ್ನ ಯಜಮಾನನನ್ನೇ ಕಚ್ಚಿ ಕೊಂದ ಭಯಾನಕ ಘಟನೆ ಚುರು ಜಿಲ್ಲೆಯಲ್ಲಿ ನಡೆದಿದೆ.
ಚುರು ಜಿಲ್ಲೆಯ ಅಜೀತ್‌ಸರ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ರಾಮ್‌ಲಾಲ್ ಎಂಬ ರೈತ ತನ್ನ ಕುಟುಂಬ ನಿರ್ವಹಣೆಗಾಗಿ ಈ ಒಂಟೆಯನ್ನು ಖರೀದಿಸಿದ್ದ.
ಒಂಟೆಯನ್ನು ಕಟ್ಟಿ ಹಾಕುವಾಗ, ಒಂಟೆ ಇದ್ದಕ್ಕಿದ್ದಂತೆ ಕೋಪಗೊಂಡು ಆತನ ತಲೆಯನ್ನು ತನ್ನ ದವಡೆಯಲ್ಲಿ ಸಿಕ್ಕಿಸಿಕೊಂಡು ಭೀಕರವಾಗಿ ದಾಳಿ ಮಾಡಿದೆ. ರಾಮ್‌ಲಾಲ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಈ ದೃಶ್ಯವನ್ನು ನೋಡಿದ ಕುಟುಂಬಸ್ಥರು ಆಘಾತಕ್ಕೆ ಒಳಗಾಗಿದ್ದಾರೆ.
ಸದ್ಯಕ್ಕೆ ಈ ಒಂಟೆಯನ್ನು ಮರಕ್ಕೆ ಕಟ್ಟಲಾಗಿದೆ. ಆದರೆ, ಕುಟುಂಬಸ್ಥರು ಅದನ್ನು ಕೊಲ್ಲಲು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ. ರಾಮ್‌ಲಾಲ್ ಅವರಿಗೆ ಮೂವರು ಮಕ್ಕಳಿದ್ದು, ಈ ಘಟನೆ ಅವರ ಕುಟುಂಬಕ್ಕೆ ದೊಡ್ಡ ಆಘಾತವನ್ನುಂಟುಮಾಡಿದೆ.
ಈ ಹಿಂದೆ ಕೂಡ ಇಂತಹ ಘಟನೆಗಳು ನಡೆದಿವೆ. ಕೆಲ ತಿಂಗಳ ಹಿಂದೆ ಬಿಕಾನೇರ್‌ನಲ್ಲೂ ಒಂಟೆಯೊಂದು ತನ್ನ ಯಜಮಾನನನ್ನು ಕೊಂದಿತ್ತು. ಒಂಟೆಗಳು ಬಹಳ ಸೂಕ್ಷ್ಮ ಪ್ರಾಣಿಗಳಾಗಿದ್ದು, ಅವು ಕೋಪಗೊಂಡರೆ ಅವುಗಳನ್ನು ನಿಯಂತ್ರಿಸುವುದು ಕಷ್ಟ ಎಂಬುದು ಸ್ಥಳೀಯರ ಅಭಿಪ್ರಾಯ.
Namma Metro ನಾಳೆಯಿಂದಲೇ ಮೆಟ್ರೋ ಪ್ರಯಾಣ ದುಬಾರಿ, ಎಷ್ಟು ರೂಪಾಯಿ ಹೆಚ್ಚಳವಾಯ್ತು?
ಉದ್ಯಮಿಗೆ 25 ಕೋಟಿ ವಂಚನೆ: ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್ ಆರೋಪಿ ವಿರುದ್ಧ FIR ದಾಖಲು
Delhi assembly elections ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಜಯ