ನವದೆಹಲಿ: ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಹೆಚ್ಚೆಚ್ಚು ಪ್ರಬಲಗೊಂಡಂತೆ ಮನುಷ್ಯರ ಶ್ರಮ ಕಡಿಮೆ ಆಗುತ್ತದೆ. ಹಾಗೆಯೇ, ಮನುಷ್ಯರ ಉದ್ಯೋಗಕ್ಕೂ ಕುತ್ತು ಬರುತ್ತದೆ ಎನ್ನುವ ಹಲವರ ಭಯ ನಿಜವಾಗುತ್ತಿದೆ.
ಬ್ಲೂಮ್ಬರ್ಗ್ ಇಂಟೆಲಿಜೆನ್ಸ್ನ ವರದಿ ಪ್ರಕಾರ, ಮುಂದಿನ ಮೂರರಿಂದ ಐದು ವರ್ಷದಲ್ಲಿ ಜಾಗತಿಕವಾಗಿ 2 ಲಕ್ಷ ಬ್ಯಾಂಕ್ ಉದ್ಯೋಗಗಳು ಎಐ ಪಾಲಾಗಲಿವೆ ಎನ್ನಲಾಗಿದೆ.
ಜಾಗತಿಕ ಬ್ಯಾಂಕುಗಳ ಸಿಬ್ಬಂದಿ ಸಂಖ್ಯೆಯಲ್ಲಿ ಶೇ. 3ರಷ್ಟು ಇಳಿಕೆ ಆಗಲು ಎಐ ಕಾರಣವಾಗಬಹುದು ಎಂದು ಈ ವರದಿಯಲ್ಲಿ ಅಂದಾಜಿಸಲಾಗಿದೆ. ಕೆಲ ಬ್ಯಾಂಕುಗಳು ಶೇ. 5ರಿಂದ 10ರಷ್ಟು ಸಿಬ್ಬಂದಿವರ್ಗ ಸಂಖ್ಯೆ ಮೊಟಕುಗೊಳ್ಳುವ ಸಾಧ್ಯತೆ ಇದೆ.
ಬ್ಯಾಂಕುಗಳಲ್ಲಿ ಬ್ಯಾಕ್ ಆಫೀಸ್, ಮಿಡಲ್ ಆಫೀಸ್ ಮತ್ತು ಆಪರೇಶನ್ಸ್ ಉದ್ಯೋಗಗಳು ಎಐ ಪಾಲಾಗುವ ಸಾಧ್ಯತೆ ಹೆಚ್ಚಿದೆ. ಕೆಲ ಗ್ರಾಹಕ ಸೇವೆಗಳೂ ಪರಿವರ್ತನೆ ಹೊಂದಬಹುದು. ಎಐ ಚಾಲಿತ ಬೋಟ್ಗಳು ಗ್ರಾಹಕರ ಅನುಮಾನಗಳನ್ನು ಪರಿಹರಿಸುವ ವ್ಯವಸ್ಥೆ ಹೆಚ್ಚಬಹುದು. ಬ್ಯಾಂಕುಗಳ ಕೆವೈಸಿ ಕ್ರಮಗಳ ಹೊಣೆಯನ್ನು ಎಐ ಬೋಟ್ಗಳಿಗೆ ವಹಿಸಬಹುದು ಎಂದು ವರದಿ ಹೇಳಿದೆ.