newsics.com
ನಾಗ್ಪುರ: ಕುಟುಂಬಸ್ಥರು ಮತ್ತು ಆಪ್ತರೊಂದಿಗೆ 26ನೇ ವಾರ್ಷಿಕೋತ್ಸವದ ಪಾರ್ಟಿ ಆಚರಿಸಿ ರಾತ್ರಿ ದಂಡ್ಯಾಮ್ಸನ್ಗುರುತಿಸಲಾಗಿದೆಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಾಗ್ಪುರದಲ್ಲಿ ನಡೆದಿದೆ.
ಮಂಗಳವಾರ ರಾತ್ರಿ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದು, ಸಾಯುವ ಮುನ್ನ ಜೋಡಿ ಕಳುಹಿಸಿದ ಸಂದೇಶದಿಂದಾಗಿ ಬುಧವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ.
ಜೆರಿಲ್ ಡ್ಯಾಮ್ಸನ್ ಆಸ್ಕರ್ (57) ಮತ್ತು ಆಯನ್ (46) ಎಂದು ಗುರುತಿಸಲಾಗಿದೆ. ಮಂಗಳವಾರವಷ್ಟೇ ಜೆರಿಲ್ ಮತ್ತು ಆಯನ್ ಅದ್ಧೂರಿಯಾಗಿ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಈ ವೇಳೆ 26 ವರ್ಷದ ಹಿಂದೆ ಮದುವೆ ದಿನ ಧರಿಸಿದ್ದ ಬಟ್ಟೆಯನ್ನೇ ಜೆರಿಲ್ ಮತ್ತು ಆಯನ್ ಧರಿಸಿದ್ದರು.
ಜೆರಿಲ್ ಅವರ ದೇಹ ಅಡುಗೆಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, ಆಯನ್ ಮೃತದೇಹ ಡ್ರಾಯಿಂಗ್ ರೂಮ್ನಲ್ಲಿ ಸಿಕ್ಕಿದೆ. ಮೊದಲು ಆಯನ್ ಕುತ್ತಿಗೆಗೆ ಹಗ್ಗದಿಂದ ಬಿಗಿದು ಸಾಯಿಸಲಾಗಿದೆ. ನಂತರ ಶವವನ್ನು ಬಟ್ಟೆಯಿಂದ ಮುಚ್ಚಿ ಹೂಗಳಿಂದ ಅಲಂಕರಿಸಿರುವ ಜೆರಿಲ್, ಅಡುಗೆಮನೆಯಲ್ಲಿ ಸ್ಕಾರ್ಫ್ ಬಳಸಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಜೆರಿಲ್ ಮತ್ತು ಆಯನ್ ದಂಪತಿಗೆ ಮಕ್ಕಳು ಇರಲಿಲ್ಲ. ಡೆತ್ನೋಟ್ನಲ್ಲಿ ತಮ್ಮ ಸಾವಿಗೆ ಯಾರೂ ಕಾರಣ ಅಲ್ಲ ಎಂಬುದನ್ನು ದಂಪತಿ ಸ್ಪಷ್ಟಪಡಿಸಿದ್ದಾರೆ. ಆದರೆ ಆತ್ಮಹತ್ಯೆಗೆ ಕಾರಣ ಏನು ಎಂಬುದನ್ನು ಡೆತ್ನೋಟ್ನಲ್ಲಿ ತಿಳಿಸಿಲ್ಲ. ಇದೆಲ್ಲದರ ಜತೆ ತಮ್ಮ ಆಸ್ತಿಯ ಕುರಿತ ಉಯಿಲನ್ನು ಜೆರಿಲ್ ಮತ್ತು ಆಯನ್ ದಂಪತಿ ಹಂಚಿಕೊಂಡಿದ್ದಾರೆ. ಮಧ್ಯರಾತ್ರಿಯವರೆಗೂ ಅದ್ಧೂರಿಯಾಗಿ ಬರ್ತ್ ಡೇ ಆಚರಿಸಿಕೊಂಡಿದ್ದ ದಂಪತಿ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಕಂಡು ಸಂಬಂಧಿಕರು ಮತ್ತು ನೆರೆಹೊರೆಯವರು ಆಘಾತಕ್ಕೆ ಒಳಗಾಗಿದ್ದಾರೆ.
ದಂಪತಿಯ ಆಸೆಯಂತೆಯೇ ಒಂದೇ ಶವಪೆಟ್ಟಿಗೆಯಲ್ಲಿ ಇಬ್ಬರನ್ನು ಮದುವೆ ಧಿರಿಸಿನಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಕಳೆದ ಮೂರು ತಲೆಮಾರುಗಳಿಂದ ಅಂತ್ಯಕ್ರಿಯೆ ನಡೆಸುವ ವಿಜಯ್ ಅಲಿಕ್ ಮೈಕೆಲ್ ಎಂಬುವರು ಮಾತನಾಡಿ, ಇದೇ ಮೊದಲ ಬಾರಿಗೆ ಇಬ್ಬರಿಗಾಗಿ ಒಂದೇ ಶವಪೆಟ್ಟಿಗೆ ಸಿದ್ಧಪಡಿಸಲಾಗಿದೆ ಎಂದು ಹೇಳಿದ್ದಾರೆ. ದಂಪತಿ ಕೈ ಹಿಡಿದುಕೊಂಡೇ ತಮ್ಮ ಅಂತ್ಯಸಂಸ್ಕಾರ ಆಗಬೇಕೆಂದು ಹೇಳಿಕೊಂಡಿದ್ದರು. ಇದೀಗ ಅದೇ ರೀತಿಯಲ್ಲಿ ನೆರವೇರಿಸಲಾಗಿದೆ ಎಂದು ಸಂಬಂಧಿಕರು ಹೇಳಿ ಕಣ್ಣೀರಿಟ್ಟಿದ್ದಾರೆ.
ಹೋಟೆಲ್ವೊಂದರಲ್ಲಿ ಮುಖ್ಯ ಬಾಣಸಿಗರಾಗಿ ಜೆರಿಲ್ ಕೆಲಸ ಮಾಡಿಕೊಂಡಿದ್ದರು. ಕೋವಿಡ್-19 ಕಾಲಘಟ್ಟದಲ್ಲಿ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿದ್ದರು. ಆದರೆ ಮತ್ತೆ ಕೆಲಸಕ್ಕೆ ಹಿಂದಿರುಗಿರಲಿಲ್ಲ. ಆಯನ್ ಗೃಹಿಣಿಯಾಗಿ ಮನೆಯಲ್ಲಿದ್ದರು. ಬೆಳಗ್ಗೆ 5.47ಕ್ಕೆ ಜೆರಿಲ್ ಮತ್ತು ಆಯನ್ ದಂಪತಿಯ ಪೋಸ್ಟ್ ನೋಡಿದ ಸಂಬಂಧಿಕರಿಬ್ಬರು ಎಲ್ಲರಿಗೂ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಹಾಗೆ ಸ್ಥಳೀಯ ಪೊಲೀಸರಿಗೂ ವಿಷಯ ತಿಳಿಸಿ ಜೆರಿಲ್ ನಿವಾಸಕ್ಕೆ ತೆರಳಿದಾಗ ಇಬ್ಬರ ಶವ ಪತ್ತೆಯಾಗಿದೆ.
ಈ ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಜರಿಪಟ್ಕಾ ಪೊಲೀಸ್ ಠಾಣೆಯ ಹಿರಿಯ ಇನ್ಸ್ಪೆಕ್ಟರ್ ಅರುಣ್ ಶಿರ್ಷತ್, ಪ್ರಾಥಮಿಕ ತನಿಖೆಯಲ್ಲಿ ಯಾವುದೇ ಅನುಮಾನಾಸ್ಪದ ಘಟನೆ ಕಂಡುಬಂದಿಲ್ಲ. ರಾತ್ರಿ ಪಾರ್ಟಿ ವೇಳೆ ದಂಪತಿ ತುಂಬಾ ಸಂತೋಷವಾಗಿದ್ದರು. ಇಬ್ಬರ ಮೊಬೈಲ್ಗಳನ್ನು ವಶಕ್ಕೆ ಪಡೆದುಕೊಂಡು, ಮರಣೋತ್ತರ ಶವ ಪರೀಕ್ಷೆ ಬಳಿಕ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಸದ್ಯ ಪ್ರಕರಣವನ್ನು ಆತ್ಮಹತ್ಯೆ ಎಂದು ಪರಿಗಣಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
Zero temperature in Ooty ಊಟಿಯಲ್ಲಿ ಶೂನ್ಯಕ್ಕಿಳಿದ ತಾಪಮಾನ, ಹೆಪ್ಪುಗಟ್ಟಿದ ಜಲಮೂಲಗಳು!
ರಸ್ತೆ ಅಪಘಾತದಲ್ಲಿ ಗಾಯಗೊಂಡರೆ ಕ್ಯಾಶ್ಲೆಸ್ ಟ್ರೀಟ್ಮೆಂಟ್: ಸಚಿವ ಗಡ್ಕರಿ ಘೋಷಣೆ
ram mandir watch : ಮಾರುಕಟ್ಟೆಗೆ ಬಂತು ರಾಮ ಮಂದಿರ ವಿನ್ಯಾಸದ ಸ್ಪೆಷಲ್ ವಾಚ್