newsics.com
ಕೊಪ್ಪಳ: ಮದುವೆಯಾಗಿ ಆರು ತಿಂಗಳಲ್ಲೇ ಪತ್ನಿಯ ಶೀಲ ಶಂಕಿಸಿದ ಪತಿ ಆಕೆಯ ಕತ್ತು ಹಿಸುಕಿ ಕೊಂದ ಘಟನೆ ಕೊಪ್ಪಳ ಜಿಲ್ಲೆಯ ಭಾಗ್ಯನಗರದ ಜನತಾ ಕಾಲೋನಿಯಲ್ಲಿ ನಡೆದಿದೆ.
ರೇಣುಕಾ(25) ಮೃತ ಗೃಹಿಣಿ. ಪತಿ ಅನಿಲ್ ಸಂಗಟಿ ಪತ್ನಿಯನ್ನೇ ಕೊಲೆಗೈದ ಆರೋಪಿ. ಕಳೆದ ನಾಲ್ಕು ವರ್ಷಗಳ ಹಿಂದೆ ಭಾಗ್ಯನಗರದ ಅನಿಲ್ ಸಂಗಟಿ ಹಾಗೂ ಗದಗ ಜಿಲ್ಲೆಯ ತಿಮ್ಮಾಪುರದ ರೇಣುಕಾ ಮದುವೆಯಾಗಿದ್ದರು.
ಮದುವೆಯಾಗಿ ಆರು ತಿಂಗಳವರೆಗೆ ಚೆನ್ನಾಗಿಯೇ ನೋಡಿಕೊಂಡಿದ್ದ ಪತಿ ನಂತರ ನಿತ್ಯ ಕುಡಿದು ಬಂದು ಪತ್ನಿಯೊಂದಿಗೆ ಜಗಳ ಮಾಡಲು ಶುರು ಮಾಡಿದ್ದಾನೆ. ಅಲ್ಲದೇ ಬೇರೆ ಯಾರೊಂದಿಗೆ ಸಂಬಂಧ ಬೆಳೆಸಿದ್ದಿ ಎಂದು ಶೀಲ ಶಂಕಿಸಿ ಪತ್ನಿಗೆ ಬೈಯುವುದಲ್ಲದೆ ಹೊಡೆಯುವುದನ್ನು ಮಾಡಿದ್ದಾನೆ.
ಪ್ರತಿನಿತ್ಯ ಗಂಡನಿಂದ ದೈಹಿಕ, ಮಾನಸಿಕ ಕಿರುಕುಳದಿಂದ ಬೇಸತ್ತಿದ್ದ ಪತ್ನಿ ರೇಣುಕಾ ತಂದೆ-ತಾಯಿಗೆ ವಿಷಯ ತಿಳಿಸಿದ್ದಾಳೆ. ತಕ್ಷಣ ರೇಣುಕಾ ಪೋಷಕರು ಬಂದು ಕರೆದುಕೊಂಡು ಹೋಗಿದ್ದಾರೆ. ಪತ್ನಿ ತವರು ಮನೆಗೆ ಹೋದ ಬಳಿಕ ಮತ್ತೆ ಕೂಡಿ ಬಾಳೋಣ ಎಂದು ಪುಸಲಾಯಿಸಿ ಪತ್ನಿಯನ್ನು ತವರು ಮನೆಯಿಂದ ಕೊಪ್ಪಳದ ಭಾಗ್ಯನಗರಕ್ಕೆ ಕರೆದುಕೊಂಡು ಬಂದಿದ. ಗಂಡನ ಮನೆಗೆ ಬಂದ ಬಳಿಕ ಶನಿವಾರ ಸಂಜೆ ರೇಣುಕಾ ತಂದೆ-ತಾಯಿ ಜತೆ ವಿಡಿಯೋ ಕಾಲ್‌ನಲ್ಲಿ ಮಾತಾಡಿದ್ದಾಳೆ. ಆದರೆ ರಾತ್ರಿ ಅನಿಲ್ ಸಂಗಟಿ ಮತ್ತೆ ಕುಡಿದು ಬಂದು ರಾಕ್ಷಸನಂತೆ ರೇಣುಕಾ ಮೇಲೆ ಎರಗಿ ಹಲ್ಲೆ ನಡೆಸಿ ಕುತ್ತಿಗೆ ಹಿಸುಕಿದ್ದಾನೆ. ನಸುಕಿನ ಜಾವ 3 ಗಂಟೆ ಸುಮಾರಿಗೆ ತವರು ಮನೆಗೆ ಫೋನ್ ಮಾಡಿ ನಿಮ್ಮ ಮಗಳು ನೇಣುಹಾಕಿಕೊಂಡಿದ್ದಾಳೆ ಎಂದು ಗಂಡನ ಕಡೆಯವರು ತಿಳಿಸಿದ್ದಾರೆ.
ರೇಣುಕಾ ಪೋಷಕರು ಬಂದು ಮಗಳನ್ನು ನೋಡಿದಾಗ ಮಗಳು ಶವವಾಗಿದ್ದಳು. ಮಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ. ಗಂಡನೇ ಕೊಲೆ ಮಾಡಿದ್ದಾನೆ ಎಂದು ಪೋಷಕರು ದೂರಿದ್ದಾರೆ. ಸ್ಥಳಕ್ಕೆ ಎಸ್‌ಪಿ ಡಾ ಶ್ರೀರಾಮ ಅರೆಸಿದ್ದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.
Naxals ready to surrender ಸಿಎಂ ಸಿದ್ದರಾಮಯ್ಯ ಕರೆಗೆ ಓಗೊಟ್ಟು ಶರಣಾಗತಿಗೆ ಸಿದ್ಧರಾದ ಮೋಸ್ಟ್ ವಾಂಟೆಡ್ ನಕ್ಸಲರು
Parents beware! ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ಅಪ್ರಾಪ್ತನ ಜತೆ 10 ವರ್ಷದ ಬಾಲಕಿ ಪರಾರಿ, ಪೋಷಕರೇ ಎಚ್ಚರ!
ಕಾಡಿನಲ್ಲಿ ಸಿಂಹ, ಹುಲಿ, ಆನೆಗಳ ಜೊತೆ ಒಂಟಿಯಾಗಿ 5 ದಿನ ಕಳೆದ 8 ವರ್ಷದ ಬಾಲಕ
Special monkey ಚಪಾತಿ ಮಾಡುವ, ಪಾತ್ರೆ ತೊಳೆಯುವ ರಾಣಿ ಎಲ್ಲರಿಗೂ ಅಚ್ಚುಮೆಚ್ಚು! ವೈರಲ್ ವಿಡಿಯೋ ನೋಡಿ…
Marriage effect ಮದುವೆ ಆದ್ಮೇಲೆ ಹೆಣ್ಮಕ್ಕಳು ದಪ್ಪ ಆಗೋದ್ಯಾಕೆ? ತೂಕ ಹೆಚ್ವಿಸಿಕೊಳ್ಳೋದೇಕೆ?