newsics.com
ಮಡಿಕೇರಿ(ಕೊಡಗು): ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯಗೆ ವಕೀಲ ವಿದ್ಯಾಧರ್ ಅವಮಾನ ಮಾಡಿದ್ದು, ವಿದ್ಯಾಧರ್ ಗಡಿಪಾರಿಗೆ ಒತ್ತಾಯಿಸಿ ಗುರುವಾರ(ಡಿ.12) ಕೊಡಗು ಬಂದ್ಗೆ ಕರೆ ನೀಡಲಾಗಿದೆ.
ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳಿಂದ ಬೆಂಬಲ ವ್ಯಕ್ತವಾಗಿದ್ದು, ಅನುದಾನರಹಿತ ಶಾಲೆಗಳಿಗೆ ಗುರುವಾರ ರಜೆ ಘೋಷಣೆ ಮಾಡಲಾಗಿದೆ.
ವೀರಸೇನಾನಿಗಳಿಗೆ ಅಪಮಾನ ಖಂಡಿಸಿ ಕೊಡಗು ಜಿಲ್ಲಾ ಸಮಾನ ಮನಸ್ಕರ ಒಕ್ಕೂಟದಿಂದ ನಾಳೆ ಬೆಳಗ್ಗೆ 6ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಬಂದ್ಗೆ ಕರೆ ನೀಡಲಾಗಿದೆ. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಅವರನ್ನು ಅಪಮಾನಿಸಿ ವಕೀಲ ವಿದ್ಯಾಧರ್ ಸೊಶೀಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಇದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.
ವೀರಸೇನಾನಿಗಳಿಗೆ ಅಪಮಾನದ ಬಳಿಕ ವಿದ್ಯಾಧರ್ ಅವರನ್ನು ನಂವೆಂಬರ್ 22ರಂದು ತಡರಾತ್ರಿ ಕೊಡಗು ಪೊಲೀಸರು ಬಂಧಿಸಿದ್ದರು. ಬಳಿಕ ಅವರನ್ನು ಮಡಿಕೇರಿಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಪ್ರಥಮ ದರ್ಜೆ (ಜೆಎಂಎಫ್ಸಿ) ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಅಲ್ಲಿ ಸರ್ಕಾರಿ ಅಭಿಯೋಜಕರು ಜಾಮೀನಿಗೆ ಆಕ್ಷೇಪ ವ್ಯಕ್ತಪಡಿಸಿದರು. ವಿರೋಧದ ನಡುವೆಯೂ ವಿದ್ಯಾಧರ್ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗಿದ್ದು, ಸಂಜೆ ವೇಳೆಗೆ ಬಿಡುಗಡೆಗೊಂಡಿದ್ದರು. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿತ್ತು.
ಭಿಕ್ಷೆ ಬೇಡಿಯೇ ಏಳೂವರೆ ಕೋಟಿ ನಗದು, ಒಂದೂವರೆ ಕೋಟಿ ಆಸ್ತಿ ಗಳಿಸಿದ ಈತ ವಿಶ್ವದ ಅತಿ ಶ್ರೀಮಂತ ಭಿಕ್ಷುಕ!
Supreme Court ಗಂಡ, ಅತ್ತೆ- ಮಾವಂದಿರಿಗೆ ಕಿರುಕುಳ: ವಿವಾಹಿತೆಯರಿಂದ ಕಾನೂನು ದುರ್ಬಳಕೆ- ಸುಪ್ರೀಂ ಕಳವಳ
Basava Jayamruthunjaya swamiji ಡಿ. 12ಕ್ಕೆ ರಾಜ್ಯಾದ್ಯಂತ ರಸ್ತೆ ತಡೆ ಹೋರಾಟಕ್ಕೆ ಕರೆ ನೀಡಿದ ಪಂಚಮಸಾಲಿ ಶ್ರೀ
Beauty Tips ತ್ವಚೆಯ ಸೌಂದರ್ಯ ಹೆಚ್ಚಿಸಲು ಫಾಲೋ ಮಾಡಿ ಈ ಬ್ಯೂಟಿ ಟಿಪ್ಸ್