Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Karwar News| 128 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಂತಾರಾಜ್ಯ ಕಳ್ಳನ ಬಂಧನ
ಕರ್ನಾಟಕದೇಶಪ್ರಮುಖ

Karwar News| 128 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಂತಾರಾಜ್ಯ ಕಳ್ಳನ ಬಂಧನ

Share
1 Min Read
SHARE

newsics.com

ಕಾರವಾರ(ಉತ್ತರ ಕನ್ನಡ): ಹಗಲು ಮನೆಗಳ್ಳತನ ಮಾಡಿದ ಮತ್ತು ರಾಜ್ಯ ಹಾಗೂ ಅಂತಾರಾಜ್ಯಗಳ 128 ಪ್ರಕರಣಗಳಲ್ಲಿ ತಲೆ ಮರೆಸಿಕೊಂಡ ಕಳ್ಳನನ್ನು ಕಾರವಾರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನ.7 ರಂದು ಕಾರವಾರ ನಗರದ ಆಶ್ರಮ ರಸ್ತೆಯ ಅಭಿಮಾನಶ್ರೀ ಅಪಾರ್ಟ್‌ಮೆಂಟಿನ ಫ್ಲ್ಯಾಟ್‌ನಲ್ಲಿ ಹಗಲು ಕಳ್ಳತನವಾದ ಬಗ್ಗೆ ಮಾಲೀಕ ಪ್ರಿಯಾ ಅಂತೋನಿ ಫರ್ನಾಂಡೀಸ್ ನೀಡಿದ್ದ ದೂರಿನಂತೆ ಪ್ರಕರಣ ದಾಖಲಿಸಿಕೊಂಡು 3 ತಂಡಗಳನ್ನು ರಚಿಸಿ ತನಿಖೆ ನಡೆಸಲಾಗಿತ್ತು.

ಕಾರವಾರ ಶಹರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರಮೇಶ ಹೂಗಾರ ನೇತೃತ್ವದ ತಂಡವು ಪಂಜಾಬದ ಜಲಂಧರ ಜಿಲ್ಲೆಯ ರಾಮಮಂಡಿ ಗ್ರಾಮದ ಸಮೀರ್ ಶರ್ಮಾ(40) ಎಂಬಾತನನ್ನು ಬಂಧಿಸಿದೆ.

ಈತ ಪ್ರತಿ ಬಾರಿಗುಲ್ಲು ,ಸ್ಯಾಮ್, ಜ್ಯಾಕ್ , ಜಾನ್ , ಸಮೀರ್ ಎಂದು ಹೆಸರು ಬದಲಿಸಿ ತನ್ನ ಕೃತ್ಯ ನಡೆಸುತ್ತಿದ್ದ. ಹೊನ್ನಾವರದ ದುರ್ಗಾಕೇರಿಯಲ್ಲಿ ಬಾಡಿಗೆ ಮನೆ ಮಾಡಿದ್ದ.
ಈತನನ್ನು ನ.11ರಂದು ಸೀನಿಮಯ ರೀತಿಯಲ್ಲಿ ಬೆನ್ನುಹತ್ತಿ ಪಂಜಾಬ್ ರಾಜ್ಯದ ಅಮೃತಸರ ಗೋಲ್ಡನ್ ಟೆಂಪಲ್ ಹತ್ತಿರ ಬಂಧಿಸಿ ಕಳವು ಮಾಡಿದ್ದ 34.026 ಗ್ರಾಂ. ಬಂಗಾರದ ಒಡವೆ, 3 ಲಕ್ಷ ರೂ. ನಗದು ಹಣ ಸೇರಿ ಸುಮಾರು 5 ಲಕ್ಷದಷ್ಟು ಮಾಲನ್ನು ವಶಪಡಿಸಿಕೊಳ್ಳಲಾಗಿದೆ.

ಈತನ ವಿರುದ್ಧ ಬೆಂಗಳೂರು ನಗರದ 11 ಪೊಲೀಸ್ ಠಾಣೆಗಳಲ್ಲಿ 106 ಪ್ರಕರಣಗಳು, ಗೋವಾ ರಾಜ್ಯದ 3 ಪೊಲೀಸ್ ಠಾಣೆಗಳಲ್ಲಿ 7 ಪ್ರಕರಣಗಳು, ಉತ್ತರ ಪ್ರದೇಶದ ನೋಯ್ದಾ ನಗರದಲ್ಲಿ 4 ಪೊಲೀಸ್ ಠಾಣೆಗಳಲ್ಲಿ 11 ಪ್ರಕರಣಗಳು, ಮತ್ತು ಪಂಜಾಬ್ ರಾಜ್ಯದ 2 ಪೊಲೀಸ್ ಠಾಣೆಗಳಲ್ಲಿ 4 ಪ್ರಕರಣಗಳು ಸೇರಿ ಒಟ್ಟು 128 ಪ್ರಕರಣಗಳು ದಾಖಲಾಗಿವೆ.

Sambhala violence| ಸಂಭಾಲಾದಲ್ಲಿ ಇನ್ನೂ ಉದ್ವಿಗ್ನ ಸ್ಥಿತಿ: ಸಂಸದ, ಶಾಸಕ ಸೇರಿ 2,500 ಮಂದಿ ವಿರುದ್ಧ ಎಫ್ಐಆರ್, ಮಾಸ್ಟರ್‌ಮೈಂಡ್‌ಗಾಗಿ ಶೋಧ

Husband and Wife|ಗಂಡ- ಹೆಂಡತಿ ನಡುವೆ ವಯಸ್ಸಿನ ಅಂತರ ಎಷ್ಟಿರಬೇಕು?

Health Alert| ಕಾಫಿ, ಟೀ ಪ್ರಿಯರೇ ಎಚ್ಚರ! ICMR ಹೀಗೆ ಹೇಳ್ತಿರೋದೇಕೆ?

TAGGED:Interstate thief involved in 128 cases arrested
Share This Article
Facebook Twitter Copy Link Print
Previous Article Sambhala violence| ಸಂಭಾಲಾದಲ್ಲಿ ಇನ್ನೂ ಉದ್ವಿಗ್ನ ಸ್ಥಿತಿ: ಸಂಸದ, ಶಾಸಕ ಸೇರಿ 2,500 ಮಂದಿ ವಿರುದ್ಧ ಎಫ್ಐಆರ್, ಮಾಸ್ಟರ್‌ಮೈಂಡ್‌ಗಾಗಿ ಶೋಧ
Next Article Today’s Almanac| ಶುಭೋದಯ, ಇಂದಿನ ಪಂಚಾಂಗ, ಕಾರ್ತೀಕ ಮಾಸ ಕೃಷ್ಣ ಪಕ್ಷ ಏಕಾದಶಿ, 26-11-2024, ಮಂಗಳವಾರ, ಉತ್ಪನ್ನ ಏಕಾದಶಿ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?