newsics.com
ಕಲಬುರಗಿ: ಭಿಕ್ಷಾಟನೆ ಮಾಡುತ್ತಿದ ಯುವಕನೊಬ್ಬ 75 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ಕಲಬುರಗಿಯ ಚಂದ್ರಪಳ್ಳಿಯಲ್ಲಿ ನಡೆದಿದೆ.
ಫಕೀರ ತಯ್ಯಬ್ ವೃದ್ಧೆ ಮೇಲೆ ಅತ್ಯಾಚಾರವೆಸಗಿರುವ ವ್ಯಕ್ತಿ ಎಂದು ತಿಳಿದುಬಂದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿದ ಯುವಕ, ವೃದ್ಧೆ ಮೇಲೆ ಅಟ್ಟಾಹಾಸ ಮೆರೆದಿದ್ದಾನೆ. ಆರೋಪಿ ತಯ್ಯಬ್ ಭಿಕ್ಷಾಟನೆಗಾಗಿ ಊರೂರು ಸುತ್ತಾಡುತ್ತಿದ್ದ. ಇದೀಗ ವೃದ್ಧೆ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಗಂಭೀರ ಸ್ಥಿತಿಯಲ್ಲಿರುವ ವೃದ್ಧೆಯನ್ನು ಬೀದರ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಿಕೊಂಡಿರುವ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.