newsics.com
ಕನ್ನಡ ಚಿತ್ರರಂಗದ ಉದಯೋನ್ಮುಖ ತಾರೆ ಜೊತೆಗೆ ಬೋಲ್ಡ್ ಬ್ಯೂಟಿ ಅಂದ್ರೆ ಅದು ಚೈತ್ರಾ ಆಚಾರ್. ಈ ನಟಿ ಹೆಚ್ಚು ಸುದ್ದಿಯಲ್ಲಿರೋದೆ ತಮ್ಮ ಬೋಲ್ಡ್ ನೆಸ್ ನಿಂದ. ಇದೀಗ ಮತ್ತೊಮ್ಮೆ ಬೋಲ್ಡ್ ಅಂದ್ರೇನೆ ಚೈತ್ರಾ ಅನ್ನೋದನ್ನು ಸಾಬೀತು ಮಾಡಿದ್ದಾರೆ. ಸದ್ಯ ಚೆಂದದ ನಗುವಿನ ಒಂದಿಷ್ಟು ಫೋಟೋಗಳನ್ನ ಚೈತ್ರಾ ಎಲ್ಲರೊಟ್ಟಿಗೆ ಹಂಚಿಕೊಂಡಿದ್ದಾರೆ.

ಹೌದು, ಚೈತ್ರಾ ಆಚಾರ್ ಕಪ್ಪು ಬಣ್ಣದ ಡ್ರೆಸ್ ತೊಟ್ಟಿದ್ದಾರೆ. ಇದು ತೀರಾ ಬೋಲ್ಡ್ ಅನಿಸೋದಿಲ್ಲ. ತುಂಬಾನೆ ಗ್ರ್ಯಾಂಡ್ ಆಗಿಯೂ ಇಲ್ಲ. ಆದರೆ, ನೀಟ್ ಆಗಿದೆ. ಸಿಂಪಲ್ ಫೀಲ್ ಕೊಡುತ್ತದೆ. ಕಪ್ಪು ಬಣ್ಣ ಈ ಡ್ರೆಸ್ ಚೈತ್ರಾ ಆಚಾರ್ ಅವರಿಗೆ ತುಂಬಾನೆ ಒಪ್ಪುತ್ತದೆ ಅನ್ನೋ ಭಾವನೆ ಕೂಡ ಮೂಡುತ್ತದೆ.ಸಿಂಪಲ್ ಲುಕ್ ಅಲ್ಲಿಯೇ ಚೈತ್ರಾ ಆಚಾರ್ ಸೂಪರ್ ಅನ್ನುವ ಹಾಗೆ ಕಾಣಿಸುತ್ತಿದ್ದಾರೆ.
ಚೈತ್ರಾ ಆಚಾರ್ ಈ ಒಂದಷ್ಟು ಫೋಟೋಗಳಲ್ಲಿ ಒಂದೇ ಆ್ಯಂಗಲ್ನಲ್ಲಿಯೇ ಪೋಸ್ ಕೊಟ್ಟಿದ್ದಾರೆ. ಆದರೆ, ಪ್ರತಿ ನಗುವಿನಲ್ಲೂ ಒಂದು ಬದಲಾವಣೆ ಇದ್ದೇ ಇದೆ. ಇದರ ಹೊರತಾಗಿ ಈ ಫೋಟೋಗಳಲ್ಲಿ ಬೇರೆ ಏನೂ ಹೈಲೈಟ್ ಅನಿಸೋದಿಲ್ಲ. ಆದರೆ, ಚೈತ್ರಾ ನಗು ಇಲ್ಲಿ ಹೊಸ ಹೊಳಪನ್ನೆ ತಂದುಕೊಟ್ಟಂತೆ ಇದೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ಚೈತ್ರಾ, ಹೆಚ್ಚಾಗಿ ತಮ್ಮ ಫೋಟೋಗಳಿಂದಲೇ ಸುದ್ದಿಯಲ್ಲಿರುತ್ತಾರೆ.