newsics.com
ದೆಹಲಿ: ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಮಗಳ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಹಿಂದೂ ದೇವರ ಫೋಟೋಗಳನ್ನು ಮುದ್ರಿಸಿ, ಹಂಚುವ ಮೂಲಕ ಬಾವೈಕ್ಯತೆ ಸಾರಿರುವ ಅಪರೂಪದ ಘಟನೆ ನಡೆದಿದೆ.
ಸದ್ಯ ಈ ಇನ್ವಿಟೇಷನ್ ಕಾರ್ಡ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.ಹೌದು, ಶಬ್ಬೀರ್ ಅಲಿಯಾಸ್ ಟೈಗರ್ ಅವರು ತಮ್ಮ ಮಗಳು ಸೈಮಾಳ ಮದುವೆಗೆ ವಿಭಿನ್ನವಾಗಿ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಿ ಹಂಚಿದ್ದಾರೆ.
ಪತ್ರಿಕೆಯಲ್ಲಿ, ನನ್ನ ಮಗಳು ಸೈಮಾ ಬಾನೊ ಸೆನ್ ಪುರ್ ಪೋಸ್ಟ್ ಸೋಥಿ ಮಹಾರಾಜ್ ಗಂಜ್ ರಾಯಬರೇಲಿ ಗ್ರಾಮದ ಅಬ್ದುಲ್ ಸತ್ತಾರ್ ಅವರ ಪುತ್ರ ಇರ್ಫಾನ್ ಅವರೊಂದಿಗೆ 8 ರಂದು ವಿವಾಹವಾಗಲಿದ್ದಾರೆ. ನನ್ನ ಹಿಂದೂ ಸಹೋದರರನ್ನು ಆಹ್ವಾನಿಸಲು ನಾನು ಹಿಂದೂ ಸಂಪ್ರದಾಯದ ಪ್ರಕಾರ ಮದುವೆ ಕಾರ್ಡ್ ಅನ್ನು ಮುದ್ರಿಸಿದ್ದೇನೆ ಎಂದು ಬರೆದಿದ್ದಾರೆ. ವಿಶೇಷವೆಂದರೆ ಪತ್ರಿಕೆಯಲ್ಲಿ ಹಿಂದೂ ದೇವತೆಗಳಾದ ಗಣೇಶ ಮತ್ತು ಶ್ರೀ ಕೃಷ್ಣನ ಫೋಟೋಗಳು ಕೂಡಾ ಇದೆ.