newsics.com
ಹುಟ್ಟಿದ ದಿನವು ನಮ್ಮ ಜೀವನದಲ್ಲಿ ಭಾರೀ ಪ್ರಭಾವ ಬೀರುತ್ತದೆ. ನಮ್ಮ ನಕ್ಷತ್ರ, ರಾಶಿ, ಗೋತ್ರ ಎಲ್ಲವೂ ನಮ್ಮ ಸ್ವಭಾವವನ್ನು ನಿರ್ಧರಿಸುತ್ತವೆ. ಇವು ನಾವು ಸಾಯುವವರೆಗೂ ನಮ್ಮ ಮೇಲೆ ಪರಿಣಾಮ ಬೀರುತ್ತಲೇ ಇರುತ್ತವೆ.
ಸಂಖ್ಯಾಶಾಸ್ತ್ರದಲ್ಲೂ ನಮ್ಮ ಹುಟ್ಟಿದ ದಿನ, ತಿಂಗಳು, ವರ್ಷ ಎಲ್ಲವೂ ಬಹಳ ಮುಖ್ಯವಾಗಿರುತ್ತದೆ. ನಮ್ಮ ಮುಂದಿನ ಜೀವನ ಆರ್ಥಿಕ ಸ್ಥಿತಿ, ಕೌಟುಂಬಿಕ ಜೀವನ ಹೀಗೆ ಎಲ್ಲವೂ ಇದರಿಂದ ನಿರ್ಧಾರವಾಗುತ್ತದೆ.
ಹಾಗಾದ್ರೆ ನಿಮ್ಮ ಜನ್ಮ ತಿಂಗಳು ನಿಮ್ಮ ಗುಣಗಳ ಬಗ್ಗೆ ಏನು ಹೇಳುತ್ತದೆ. ನೀವು ಹುಟ್ಟಿದ ತಿಂಗಳಿಗೂ ನಿಮ್ಮ ಗುಣಗಳಿಗೂ ಇರುವ ಸಂಬಂಧವೇನು? ನೀವು ಯಾವ ಗುಪ್ತ ಗುಣಗಳನ್ನು ಹೊಂದಿದ್ದೀರಿ?
ಜನವರಿ
ವರ್ಷದ ಮೊದಲ ತಿಂಗಳಾಗಿರುವ ಜನವರಿಯಲ್ಲಿ ನೀವು ಜನಿಸಿದ್ದರೆ ನೀವು ಯಾವುದಕ್ಕೂ ಹೆದರಿಕೊಳ್ಳದ ಗುಣಗಳನ್ನು ಹೊಂದಿರುತ್ತೀರಿ. ನೀವು ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಹಾಗೂ ಅಭಿಪ್ರಾಯವನ್ನು ಬೇರೆಯರ ಮಾತು ಕೇಳಿ ಬದಲಾಯಿಸಿಕೊಳ್ಳುವುದಿಲ್ಲ. ನಾಯಕತ್ವ ಗುಣಗಳನ್ನು ನೀವು ಹೊಂದಿರುತ್ತೀರಿ. ಎಲ್ಲಾ ಹೋರಾಟಗಳಿಗೂ ನೀವು ಸಿದ್ಧರಿರುತ್ತೀರಿ.
ಫೆಬ್ರವರಿ
ಫೆಬ್ರವರಿ ತಿಂಗಳಲ್ಲಿ ನೀವು ಜನಿಸಿದ್ದರೆ ಸ್ವತಂತ್ರ ಜೀವನದ ಕನಸು ಕಾಣುವವರಾಗಿರುತ್ತೀರಿ. ಸಾಹಸಮಯ ಜೀವನ ಇಷ್ಟಪಡುತ್ತೀರಿ. ನೀವು ಹೆಚ್ಚು ನಿಷ್ಠಾವಂತರು ಹಾಗೆ ನಿಮ್ಮನ್ನು ಇಷ್ಟಪಡುವವರನ್ನು, ಕುಟುಂಬದವರ ಮೇಲೆ ಯಾವಾಗಲೂ ಕಾಳಜಿ ಹೊಂದಿರುತ್ತೀರಿ. ನಿಮಗೆ ಉದ್ಯೋಗ ಕ್ಷೇತ್ರದಲ್ಲಿ ಯಾವಾಗಲೂ ಯಶಸ್ಸು ಸಿಗುತ್ತಿರುತ್ತದೆ.
ಮಾರ್ಚ್
ಮಾರ್ಚ್‌ನಲ್ಲಿ ಜನಿಸಿದ ನಿಮಗೆ ತುಂಬಾ ತಾಳ್ಮೆ, ನಾಚಿಕೆ, ಕಲಾತ್ಮಕ ಗುಣಗಳನ್ನು ಹೊಂದಿರುತ್ತೀರಿ. ಹೆಚ್ಚು ಸ್ವಾಭಿಮಾನಿಗಳು, ಬುದ್ಧಿವಂತರು. ಭಾವನೆಗಳಿಗೆ ಹೆಚ್ಚು ಒತ್ತು ನೀಡುವ ನೀವು ಎಲ್ಲರಿಗೂ ಒಳಿತು ಬಯಸುವವರಾಗಿರುತ್ತೀರಿ. ಶಾಂತಿ ಪ್ರಿಯರು, ಸಹಾನುಭೂತಿ ಹೊಂದಿರುವವಾಗಿರುತ್ತೀರಿ. ನಿಮ್ಮನ್ನು ನೀವೇ ಹೆಚ್ಚು ಇಷ್ಟಪಡುತ್ತೀರಿ.
ಏಪ್ರಿಲ್
ಏಪ್ರಿಲ್ ತಿಂಗಳಲ್ಲಿ ಜನಿಸಿದ್ದರೆ ನೀವು ಹೆಚ್ಚು ಬಲಶಾಲಿಗಳು. ನೀವು ಮೇಲ್ನೋಟಕ್ಕೆ ಕಾಣುವುದಕ್ಕಿಂತ ತುಂಬಾ ಹೆಚ್ಚು ದೃಢಶಾಲಿಗಳು, ನಿಮ್ಮ ಮನೋಬಲದಿಂದ ಯಾವ ವಿಚಾರವನ್ನು ಬೇಕಾದರೂ ಜಯಿಸುವ ಮನೋಭಾವದವರು. ನೀವು ಬೇರೆಯವರ ಬಗ್ಗೆ ಹೆಚ್ಚು ಆಲೋಚಿಸುವುದಿಲ್ಲ. ನೀವು ಎಂತಹ ರಿಸ್ಕ್ ಬೇಕಾದರೂ ತೆಗೆದುಕೊಳ್ಳಲು ಸಿದ್ಧರಿರುವ ಮಂದಿಯಾಗಿರುತ್ತೀರಿ.
ಮೇ
ಮೇ ತಿಂಗಳಲ್ಲಿ ಜನಿಸಿದ ನಿಮಗೆ ಕಲಾತ್ಮಕ ವಿಚಾರಗಳಲ್ಲಿ ಹೆಚ್ಚಿನ ಆಸಕ್ತಿ ಇರಲಿದೆ. ನಿಮಗೆ ಹೆಚ್ಚಿನ ಮಂದಿ ಸ್ನೇಹಿತರ ಬಳಗವೇ ಇರಲಿದೆ. ನೀವು ಯಾವಾಗಲೂ ಏನಾದರೂ ಕೆಲಸ ಮಾಡುತ್ತಲೇ ಇರಬೇಕು ಎಂಬ ವರ್ಗಕ್ಕೆ ಸೇರಿದವರು. ನೀವು ಕಷ್ಟದ ಸಮಯದಲ್ಲೂ ಆತ್ಮಸ್ಥೈರ್ಯ ಕಳೆದುಕೊಳ್ಳದ ಮಂದಿಯಾಗಿರುತ್ತೀರಿ.
ಜೂನ್
ಜೂನ್‌ನಲ್ಲಿ ಜನಿಸಿದ ನೀವು ತುಂಬಾ ಭಾವನಾತ್ಮಕ ಜೀವಿಗಳಾಗಿರುತ್ತೀರಿ. ಬೇರೆಯವರಿಗೆ ನೋವಾಗುವಂತೆ ನಡೆದುಕೊಳ್ಳದ ಮನೋಭಾವದವರು. ಯಾರಿಗಾದರೂ ಕಷ್ಟ ಎಂದರೆ ಅವರ ಸಹಾಯಕ್ಕೆ ಮೊದಲು ಬರುವ ವ್ಯಕ್ತಿಗಳಾಗಿರುತ್ತೀರಿ. ಎಲ್ಲ ಸಮಯದಲ್ಲೂ ನೀವು ಧನಾತ್ಮಕ ವಿಚಾರಗಳ ಕುರಿತು ಯೋಚಿಸುತ್ತೀರಿ.
ಜುಲೈ
ನೀವು ಜುಲೈನಲ್ಲಿ ಜನಿಸಿದವರಾಗಿದ್ದರೆ ಬಹುಬೇಗ ಕೋಪಗೊಂಡರೂ ಅಷ್ಟೇ ಬೇಗ ಶಾಂತರಾಗಿ ಎಲ್ಲವನ್ನೂ ನಿಭಾಯಿಸುವ ಗುಣ ಹೊಂದಿದವರಾಗಿರುತ್ತೀರಿ. ನಿಮ್ಮ ಕುಟುಂಬಕ್ಕಾಗಿ ನೀವು ಯಾವುದೇ ರೀತಿಯ ಕಷ್ಟಗಳನ್ನೂ ಎದುರಿಸುವ ಮನಸ್ಸಿನವರು. ಬಹುಬೇಗ ಎಲ್ಲಾ ವಿಚಾರಗಳನ್ನು ಕಲಿಯುವವರು.
ಆಗಸ್ಟ್
ಆಗಸ್ಟ್‌ನಲ್ಲಿ ಜನಿಸಿದ್ದರೆ ನೀವು ಎಲ್ಲರನ್ನೂ ಪ್ರೀತಿಸುವ ಗುಣ ಹೊಂದಿರುವವರು. ಅಧ್ಯಾತ್ಮದ ಕಡೆಗೆ ಹೆಚ್ಚು ಒಲವು ಹೊಂದಿರುವವರು. ಕಷ್ಟಪಟ್ಟು ದುಡಿಯುವ ವರ್ಗಕ್ಕೆ ಸೇರಿದ ವ್ಯಕ್ತಿ. ನಿಮ್ಮಲ್ಲಿ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳುವ ಗುಣ ಹೊಂದಿರುತ್ತೀರಿ. ಹಿರಿಯರಿಗೆ, ಪ್ರೀತಿಪಾತ್ರರಲ್ಲಿ ನೀವು ವಿನಯದಿಂದ ನಡೆದುಕೊಳ್ಳುವ ಗುಣ ಹೊಂದಿದ್ದೀರಿ.
ಸೆಪ್ಟೆಂಬರ್
ಸೆಪ್ಟೆಂಬರ್ ತಿಂಗಳಲ್ಲಿ ಜನಿಸಿದ್ದರೆ ನಿಮ್ಮ ಆಲೋಚನೆಗಳನ್ನು ನೀವು ದೃಢವಾಗಿ ನಂಬುವವರಾಗಿರುತ್ತೀರಿ. ಬೇರೆಯವರ ಮಾತಿಗಿಂತ ನಿಮ್ಮ ಮೇಲೆ ನಿಮಗೇ ನಂಬಿಕೆ ಹೆಚ್ಚಾಗಿರುತ್ತದೆ. ನೀವು ಮಾಡುವ ಕೆಲಸದಲ್ಲಿ ನಿಮಗೆ ನಂಬಿಕೆ ಇರಲಿದೆ. ನಿಮಗೆ ನಾಯಕತ್ವದ ಗುಣವಿರುತ್ತದೆ.
ಅಕ್ಟೋಬರ್
ಅಕ್ಟೋಬರ್‌ನಲ್ಲಿ ಜನಿಸಿದ ನೀವು ಹೆಚ್ಚು ಪ್ರಾಮಾಣಿಕರು, ಬುದ್ಧಿವಂತರು, ನಿಮ್ಮ ಗುರಿ ಕಡೆಗೆ ನೀವು ಯಾವಾಗಲು ಯೋಚಿಸುವವರು. ನಿಮ್ಮೆದುರು ವಾದ ಮಾಡುವುದು ಬಹಳ ಕಷ್ಟ. ಹೆಚ್ಚು ಹೆಚ್ಚು ವಿಚಾರಗಳನ್ನು ತಿಳಿಯಲು ನೀವು ಯಾವಾಗಲು ಮುಂದಾಗುತ್ತೀರಿ. ಸಾಹಿತ್ಯ ಪ್ರೇಮಿಗಳಾಗಿರುತ್ತೀರಿ.
ನವೆಂಬರ್
ನವೆಂಬರ್‌ನಲ್ಲಿ ಜನಿಸಿದ ನೀವು ದಾನ ಧರ್ಮದಲ್ಲಿ ಹೆಚ್ಚು ನಂಬಿಕೆ ಇಟ್ಟವರು. ಧೈರ್ಯಶಾಲಿಗಳು, ಸಮಾಜಮುಖಿ ಕಾರ್ಯದಲ್ಲಿ ನಂಬಿಕೆ ಇಟ್ಟವರು. ಯಾರನ್ನಾದರೂ ನೀವು ಒಮ್ಮೆ ನಂಬಿದರೆ ಕುರುಡಾಗಿ ಅವರನ್ನೇ ಹಿಂಬಾಲಿಸುವವರು. ನಿಮ್ಮ ಕುಟುಂಬಕ್ಕಾಗಿ ನೀವು ಯಾವುದೇ ಹಂತದಲ್ಲಿ ಕೆಲಸ ಮಾಡಲು ತಯಾರಿರುವವರು.
ಡಿಸೆಂಬರ್
ಡಿಸೆಂಬರ್ ತಿಂಗಳಲ್ಲಿ ಜನಿಸಿದ ನಿಮ್ಮ ಉದ್ಯೋಗ ಕ್ಷೇತ್ರ ಹಾಗೂ ಹಣಕಾಸು ಸ್ಥಿತಿಯ ಬಗ್ಗೆ ನೀವು ಹೆಚ್ಚು ತಲೆಕೆಡಿಸಿಕೊಳ್ಳುವವರಲ್ಲ. ನೀವು ಯಾವುದೇ ವಿಚಾರದಲ್ಲಿ ಮಾತನಾಡಲು, ಕೆಲಸ ಮಾಡಲೂ ಹಿಂಜರಿಯುವವರಲ್ಲ. ನಿಮ್ಮ ಪ್ರೀತಿ ಉಳಿಸಿಕೊಳ್ಳಲು ಎಂತಹ ರಿಸ್ಕ್ ಆದರೂ ತೆಗೆದುಕೊಳ್ಳುತ್ತೀರಿ. ನಿಮ್ಮಲ್ಲಿ ದೃಢಸಂಕಲ್ಪದ ಗುಣ ಇರುತ್ತದೆ. ಬೇರೆಯವರಿಗೆ ನೀವು ಸಹಾಯ ಮಾಡಲು ಯಾವಾಗಲೂ ಮುಂದಿರುತ್ತೀರಿ.
ಮಲಗುವಾಗಲಾದರೂ ಮೊಬೈಲ್‌ನಿಂದ ದೂರವಿರಿ, ಇಲ್ಲದಿದ್ದರೆ ನಿಮಗೆ ಹೀಗೆಲ್ಲ ಅಪಾಯವಾಗಬಹುದು…