newsics.com
ನವದೆಹಲಿ: ಆಧ್ಯಾತ್ಮಿಕ ವಾಗ್ಮಿ ಜಯ ಕಿಶೋರಿ ಅವರ ದುಬಾರಿ ಜೀವನ ಶೈಲಿಗೆ ಇದೀಗ ಎಲ್ಲೆಡೆ ಸುದ್ದಿ ಯಾಗಿದೆ .
ಬರೋಬ್ಬರಿ 2.1 ಲಕ್ಷ ಮೌಲ್ಯದ ಬ್ಯಾಗ್ ಹಿಡಿದು ಕಿಶೋರಿ ನಡೆದಾಡಿದ ವಿಡಿಯೋ ವೈರಲ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
ವಾಗ್ಮಿ ಜಯ ಕಿಶೋರಿ ಜೀವನದಲ್ಲಿ ಕಾಂಟ್ರೋವರ್ಸಿ ಇದೇ ಮೊದಲಲ್ಲ. 13 ಲಕ್ಷದ ವಾಚ್ ಧರಿಸಿದ್ದ ಜಯ ಕಿಶೋರಿ ಸಾಕಷ್ಟು ಸುದ್ದಿಯಾಗಿದ್ದರು. ಇದೀಗ ಏರ್‌ಪೋರ್ಟ್‌ನಲ್ಲಿ ಕ್ರಿಶ್ಚಿಯನ್ ಡಿಯಾರ್ ಕಂಪನಿ ಬ್ಯಾಗ್ ಅನ್ನು ಕೈಯಲ್ಲಿ ಹಿಡಿದಿರುವ ಜಯ ಕಿಶೋರಿ ಮತ್ತೆ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.