newsics.com
ಮುಂಬೈ: ಮೂರು ದಿನಗಳ ಹಿಂದೆ, ತಮ್ಮ ಆರೋಗ್ಯ ಹದಗೆಟ್ಟಿದೆ ಎಂಬ ಸುದ್ದಿ ಬೆಳಕಿಗೆ ಬಂದಾಗ ರತನ್ ಟಾಟಾ ಅವರೇ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು. ದುರದೃಷ್ಟವಶಾತ್ ಈಗ ಅವರಿಲ್ಲ. ‘ನಾನು ಚೆನ್ನಾಗಿದ್ದೇನೆ’ ಎಂದು ಸ್ಪಷ್ಟನೆ ನೀಡಿದ್ದ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಅವರ ಕೊನೆಯ ಪೋಸ್ಟ್ ಆಗಿತ್ತು. ಸದ್ಯ ಇದು ಭಾರೀ ವೈರಲ್ ಆಗುತ್ತಿದೆ.
ತಮ್ಮ ಕೊನೆಯ ಪೋಸ್ಟ್‌ಗೆ ನನ್ನ ಬಗ್ಗೆ ಯೋಚಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಶೀರ್ಷಿಕೆ ನೀಡಿದ್ದ ರತನ್ ಟಾಟಾ, ಈ ಬಗ್ಗೆ ಮತ್ತಷ್ಟು ಬರೆದುಕೊಂಡಿದ್ದರು.
ನನ್ನ ಆರೋಗ್ಯದ ಬಗ್ಗೆ ಇತ್ತೀಚಿನ ವದಂತಿಗಳ ಬಗ್ಗೆ ನನಗೆ ತಿಳಿದಿದೆ ಮತ್ತು ಈ ವಿಚಾರ ಆಧಾರರಹಿತವೆಂದು ಎಲ್ಲರಿಗೂ ಭರವಸೆ ನೀಡಲು ಬಯಸುತ್ತೇನೆ. ನನ್ನ ವಯಸ್ಸು ಮತ್ತು ಸಂಬಂಧಿತ ವೈದ್ಯಕೀಯ ಪರಿಸ್ಥಿತಿಗಳಿಂದಾಗಿ ನಾನು ಪ್ರಸ್ತುತ ವೈದ್ಯಕೀಯ ತಪಾಸಣೆಗೆ ಒಳಗಾಗುತ್ತಿದ್ದೇನೆ. ಚಿಂತಿಸುವಂತಹ ಯಾವುದೇ ವಿಚಾರವಿಲ್ಲ. ನಾನು ಉತ್ತಮ ಮನಸ್ಥಿತಿಯಲ್ಲಿದ್ದೇನೆ ಮತ್ತು ಸಾರ್ವಜನಿಕರು ಮತ್ತು ಮಾಧ್ಯಮಗಳು ತಪ್ಪು ಮಾಹಿತಿಗಳನ್ನು ಹರಡುವುದನ್ನು ತಡೆಯಬೇಕೆಂದು ವಿನಂತಿಸುತ್ತೇನೆ ಎಂದಿದ್ದರು.
ರತನ್ ಟಾಟಾ ಅವರ ಅತ್ಯಂತ ವಿಶಿಷ್ಟವಾದ ಅಂಶವೆಂದರೆ ದೊಡ್ಡ ಕನಸುಗಳನ್ನು ಕಾಣುವ ಮತ್ತು ಇತರರಿಗೆ ಪ್ರೇರೇಪಿಸುವ ಅವರ ಉತ್ಸಾಹ. ಶಿಕ್ಷಣ, ಆರೋಗ್ಯ ರಕ್ಷಣೆ, ನೈರ್ಮಲ್ಯ, ಪ್ರಾಣಿ ಕಲ್ಯಾಣ ಮುಂತಾದ ವಿಷಯಗಳನ್ನು ಪ್ರೋತ್ಸಾಹಿಸುವಲ್ಲಿ ಅವರು ಮುಂಚೂಣಿಯಲ್ಲಿದ್ದರು.
https://x.com/RNTata2000/status/1843186838787526796?t=zptDiW2coeAReYGkhr-76Q&s=19
ಯುವತಿಯೊಬ್ಬಳ ಪ್ರೀತಿಗೆ ಮನಸೋತಿದ್ದ ರತನ್ ಟಾಟಾ; ರತನ್ ಪ್ರೀತಿಸಿದ ಹುಡುಗಿ ಯಾರು?
Reminiscence of Rathan Tata | ಪ್ರತಿ ಭಾರತೀಯನ ಬದುಕಲ್ಲಿ ಹಾಸುಹೊಕ್ಕಾಗಿರುವ ಟಾಟಾ ಬ್ರ್ಯಾಂಡ್