newsics.com
ಗುರುಗ್ರಾಮ್: AAP ರಾಜ್ಯಸಭಾ ಸದಸ್ಯ ಸಂಜೀವ್ ಅರೋರಾ ಮತ್ತಿತರರ ವಿರುದ್ಧದ ಭೂ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಇಂದು ಜಲಂಧರ್, ಲೂಧಿಯಾನ, ಗುರುಗ್ರಾಮ್ ಮತ್ತು ದೆಹಲಿಯ ಅನೇಕ ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಲೂಧಿಯಾನ (ಪಂಜಾಬ್) ಮತ್ತು ಗುರುಗ್ರಾಮ್ ದಲ್ಲಿರುವ (ಹರಿಯಾಣ) 61 ವರ್ಷದ ಅರೋರಾ ಅವರ ಮನೆ ಸೇರಿದಂತೆ ಸುಮಾರು 16-17 ಕಡೆಗಳಲ್ಲಿ ಶೋಧಿಸಲಾಗುತ್ತಿದೆ. ಜಲಂಧರ್ನಲ್ಲಿರುವ ರಿಯಲ್ ಎಸ್ಟೇಟ್ ಉದ್ಯಮಿ ಹೇಮಂತ್ ಸೂದ್ ಮತ್ತು ಮತ್ತೊಬ್ಬ ವ್ಯಕ್ತಿ ಚಂದ್ರಶೇಖರ್ ಅಗರವಾಲ್ಗೆ ಸಂಬಂಧಿಸಿದ ಮನೆಗಳಲ್ಲಿಯೂ ಶೋಧ ಕಾರ್ಯ ನಡೆಸಲಾಗುತ್ತಿದೆ ಎನ್ನಲಾಗಿದೆ.