Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಮಹಾಲಕ್ಷ್ಮಿ ಕೊಲೆಗೇನು ಕಾರಣ? ಕೊಲೆ ಮಾಡಿದ್ದು ಹೇಗೆ? ಪೊಲೀಸರ ತನಿಖೆಯಲ್ಲಿ ಎಲ್ಲವೂ ಬಹಿರಂಗ!
ಕರ್ನಾಟಕಪ್ರಮುಖ

ಮಹಾಲಕ್ಷ್ಮಿ ಕೊಲೆಗೇನು ಕಾರಣ? ಕೊಲೆ ಮಾಡಿದ್ದು ಹೇಗೆ? ಪೊಲೀಸರ ತನಿಖೆಯಲ್ಲಿ ಎಲ್ಲವೂ ಬಹಿರಂಗ!

Share
4 Min Read
SHARE

newsics.com

ಬೆಂಗಳೂರು: ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ವೈಯಾಲಿಕಾವಲ್ ನಿವಾಸಿ ಮಹಾಲಕ್ಷ್ಮೀ ಕೊಲೆ ಪ್ರಕರಣದ ತನಿಖೆ ನಡೆಸಿರುವ ಬೆಂಗಳೂರು ಪೊಲೀಸರು, ಬರ್ಬರ ಕೊಲೆ ಹಿಂದಿನ ಕಾರಣವನ್ನು ಪತ್ತೆ ಹಚ್ಚಿದ್ದಾರೆ.

ಪೊಲೀಸರ ತನಿಖೆಯಲ್ಲಿ ಆರೋಪಿ ಮುಕ್ತಿರಂಜನ್ ರಾಯ್ ಮಹಾಲಕ್ಷ್ಮೀಯನ್ನು ಕೊಲೆ ಮಾಡಿದ್ದು ಏಕೆ? ಆಕೆಯ ದೇಹವನ್ನು ತುಂಡರಿಸಿದ್ದು ಏಕೆ ಎಂಬ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.

ತಾನು ಮದುವೆಯಾದ ವಿಚಾರವನ್ನು‌ ಮುಚ್ಚಿಟ್ಟಿದ್ದು, ಮದುವೆಯಾಗುವಂತೆ ಮುಕ್ತಿರಂಜನ್ ರಾಯ್‌ಗೆ ಬ್ಲ್ಯಾಕ್‌ಮೇಲ್ ಮಾಡಿದ್ದು ಕೊಲೆಗೆ ಕಾರಣ ಎಂಬುದು ಸ್ಪಷ್ಟವಾಗಿದೆ.

ಮಹಾಲಕ್ಷ್ಮೀ ಎಂಟು ತಿಂಗಳ ಹಿಂದೆ ಪತಿಯ ಜತೆ ಜಗಳವಾಡಿ ನೆಲಮಂಗಲ ಬಿಟ್ಟು ಬೆಂಗಳೂರಿಗೆ ಬಂದು ನೆಲೆಸಿ, ಕೆಲಸಕ್ಕೆ ಸೇರಿದ್ದಳು. ಮಹಾಲಕ್ಷ್ಮೀ ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ಮುಕ್ತಿರಂಜನ್ ರಾಯ್ ಫ್ಲೋರ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ.

ದಿನ ಕಳೆದಂತೆ ಇಬ್ಬರೂ ಸ್ನೇಹಿತರಾಗಿದ್ದಾರೆ. ಸ್ನೇಹದಲ್ಲಿ ಮುಕ್ತಿರಂಜನ್ ರಾಯ್ ಒಮ್ಮೊಮ್ಮೆ ಮಹಾಲಕ್ಷ್ಮಿಯನ್ನು ಮನೆವರೆಗೂ ಬಿಟ್ಟು ಹೋಗುತ್ತಿದ್ದ. ಕ್ರಮೇಣ ಸ್ನೇಹ ಪ್ರೀತಿಗೆ ತಿರುಗಿದೆ. ಆದರೆ, ಮಹಾಲಕ್ಷ್ಮೀ ಮಾತ್ರ ತನಗೆ ಈಗಾಗಲೆ ಒಂದು ಮದುವೆಯಾಗಿರುವ ಮತ್ತು ಮಗು ಇರುವ ಬಗ್ಗೆ ಮುಕ್ತಿರಂಜನ್ ರಾಯ್‌ಗೆ ಹೇಳಿರಲಿಲ್ಲ. ಮುಕ್ತಿರಂಜನ್ ರಾಯ್ ಮದುವೆ ಪ್ರಸ್ತಾಪವನ್ನು ಮಹಾಲಕ್ಷ್ಮೀ ಮುಂದೆ ಇಟ್ಟಿದ್ದಾನೆ. ಮಹಾಲಕ್ಷ್ಮಿಯೂ ಈ ಮದುವೆಗೆ ಒಪ್ಪಿಕೊಂಡಿದ್ದಾಳೆ.

ಮುಕ್ತಿರಂಜನ್ ರಾಯ್‌ಗೆ ಇಬ್ಬರು ಸಹೋದರರು ಇದ್ದಾರೆ. ಓರ್ವ ಬೆಂಗಳೂರಿನ ಹೆಬ್ಬಗೋಡಿಯಲ್ಲಿ ಮುಕ್ತಿರಂಜನ್ ರಾಯ್ ಜೊತೆಗೆ ವಾಸವಾಗಿದ್ದನು. ಮತ್ತೋರ್ವ ಒಡಿಶಾದ ಗಂಜಂನಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಾನೆ. ತನ್ನ ಇಬ್ಬರು ತಮ್ಮಂದಿರ ಬಳಿ ತಾನು ಮದುವೆ ಆಗುತ್ತಿರುವ ಬಗ್ಗೆ ಹೇಳಿದ್ದಾನೆ.

ಮುಂದಿನ ದಿನಗಳಲ್ಲಿ ಮುಕ್ತಿರಂಜನ್‌ಗೆ ಮಹಾಲಕ್ಷ್ಮೀ ನಡವಳಿಕೆ ಮೇಲೆ ಅನುಮಾನ ಹುಟ್ಟಿದೆ. ಮಹಾಲಕ್ಷ್ಮೀ ಬೇರೆ ಯುವಕನ ಜತೆಗೆ ಸಂಪರ್ಕ ಹೊಂದಿದ್ದಾಳೆ ಎಂದು ಅನುಮಾನಗೊಂಡು ಆಕೆಯ ಮೊಬೈಲ್ ಪರಿಶೀಲನೆ ಮಾಡಿದಾಗ, ಆಕೆಗೆ ಮದುವೆಯಾಗಿ ಮಗು ಇರುವ ವಿಚಾರ ಗೊತ್ತಾಗಿದೆ.

ಎಲ್ಲ ವಿಚಾರ ತಿಳಿದ ಬಳಿಕ ಮುಕ್ತಿರಂಜನ್ ರಾಯ್ ಮಹಾಲಕ್ಷ್ಮಿಯಿಂದ ಅಂತರ ಕಾಯ್ದುಕೊಂಡಿದ್ದಾನೆ. ನಂತರ, ತಾನು ಕೆಲಸ ಮಾಡುವ ಕಂಪನಿಯಲ್ಲೇ ಬೇರೆ ಯುವತಿಯ ಜತೆ ಮುಕ್ತಿರಂಜನ್ ರಾಯ್ ಸ್ನೇಹ ಬೆಳೆಸಿದ್ದಾನೆ. ಇದನ್ನು ಕಂಡ ಮಹಾಲಕ್ಷ್ಮೀ ಆ ಯುವತಿ ಜತೆ ಜಗಳವಾಡಿ ಇನ್ಮೇಲೆ ಮುಕ್ತಿರಂಜನ್ ಜತೆ ಮಾತನಾಡದಂತೆ ಎಚ್ಚರಿಕೆ ನೀಡಿದ್ದಾಳೆ. ಈ ವಿಚಾರ ಗೊತ್ತಾಗಿ ಮುಕ್ತಿರಂಜನ್ ಮಹಾಲಕ್ಷ್ಮಿ ಜತೆ ಜಗಳವಾಡಿದ್ದ.

ನೀನು ಮದುವೆ ಆಗಿರುವ ವಿಚಾರ ನನ್ನಿಂದ ಮುಚ್ಚಿಟ್ಟಿದ್ದೆ. ಹೀಗಾಗಿ ನಾನು ನಿನ್ನ ಮದುವೆ ಆಗಲ್ಲ ಎಂದು ಮುಕ್ತಿರಂಜನ್ ರಾಯ್ ಮಹಾಲಕ್ಷ್ಮೀಗೆ ಹೇಳಿದ್ದಾನೆ. ಆಗ ಮಹಾಲಕ್ಷ್ಮೀ ನನ್ನ ಪತಿಗೆ ವಿಚ್ಛೇದನ ನೀಡುತ್ತೇನೆ ಎಂದು ಹೇಳಿದ್ದಾಳೆ. ಒಂದು ವೇಳೆ ನೀನು ನನ್ನ ಮದುವೆ ಆಗಿಲ್ಲ ಅಂದ್ರೆ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಮಹಾಲಕ್ಷ್ಮೀ ಮುಕ್ತಿರಂಜನ್ ರಾಯ್‌ಗೆ ಬೆದರಿಕೆ ಹಾಕಿದ್ದಾಳೆ. ಇದರಿಂದ ಮುಕ್ತಿರಂಜನ್ ರಾಯ್ ಸುಮ್ಮನಾಗಿದ್ದಾನೆ.

ಮಹಾಲಕ್ಷ್ಮೀ ಕೊಲೆಯಾದ ಹಿಂದಿನ ದಿನ‌ ಮುಕ್ತಿರಂಜನ್‌ಗೆ ವಾರದ ರಜೆ ಇತ್ತು. ಹೀಗಾಗಿ, ಮಹಾಲಕ್ಷ್ಮೀ ಹೆಬ್ಬಗೋಡಿಯಲ್ಲಿನ ಮುಕ್ತಿರಂಜನ್ ಮನೆಗೆ ಹೋಗಿದ್ದಳು. ಮಹಾಲಕ್ಷ್ಮೀ ಎಷ್ಟೇ ಬಾಗಿಲು ಬಡಿದರೂ ಮುಕ್ತಿರಂಜನ್ ರಾಯ್ ತೆಗೆಯಲಿಲ್ಲ. ಕೊನೆಗೆ ಮಹಾಲಕ್ಷ್ಮಿ ಮಾತಿಗೆ ಮಣಿದು ಮುಕ್ತಿರಂಜನ್ ಬಾಗಿಲು ತೆರೆದಿದ್ದಾನೆ. ಇಲ್ಲಿ, ಇಬ್ಬರೂ ಕೂತು ಮಾತನಾಡಿ ಕಾಂಪ್ರಮೈಸ್ ಆಗಿದ್ದಾರೆ. ಆಗಿದ್ದು ಆಗೋಯ್ತು ಇನ್ಮುಂದೆ ಚೆನ್ನಾಗಿ ಇರೋಣ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

ಅಂದು ರಾತ್ರಿ ಮಹಾಲಕ್ಷ್ಮಿ ಮುಕ್ತಿರಂಜನ್ ಜತೆ ಉಳಿದುಕೊಂಡಿದ್ದಾಳೆ. ಮರುದಿನ ಇಬ್ಬರೂ ವಾಪಸ್ ವೈಯಾಲಿಕಾವಲ್ ಮಹಾಲಕ್ಷ್ಮಿ ರೂಮ್‌ಗೆ ಬಂದಿದ್ದಾರೆ. ಅಂದು ರಾತ್ರಿ ಮತ್ತೆ ಇಬ್ಬರ ಮಧ್ಯೆ ಜಗಳವಾಗಿದೆ. ಜಗಳದ ನಡುವೆ ಮಹಾಲಕ್ಷ್ಮಿ ಆರೋಪಿ ಮುಕ್ತಿರಂಜನ್ ರಾಯ್‌ಗೆ ಹೊಡೆದಿದ್ದಾಳೆ.

ಇದರಿಂದ ಸಿಟ್ಟಾದ ಮುಕ್ತಿರಂಜನ್ ಆಕೆಯ ಮುಖಕ್ಕೆ ಹೊಡೆದಿದ್ದಾನೆ. ಇದರಿಂದ ಮಹಾಲಕ್ಷ್ಮೀ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಬಳಿಕ ಮುಕ್ತಿರಂಜನ್ ರಾಯ್ ಮಹಾಲಕ್ಷ್ಮಿ ಮುಖದ ಮೇಲೆ ದಿಂಬು ಇಟ್ಟು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ಹೇಗೆ ಪಾರಾಗುವುದು ಎಂದು ಯೋಚಿಸಿದ್ದಾನೆ. ಮೃತದೇಹ ಹೀಗೇ ಬಿಟ್ಟರೆ ವಾಸನೆ ಬರುತ್ತದೆ ಎಂದು ಯೋಚಿಸಿದ್ದಾನೆ.

ಮೃತದೇಹವನ್ನು ಹೇಗೆ ವಿಲೇವಾರಿ ಮಾಡುವುದು ಎಂದು ಇಂಟರ್ನೆಟ್ನಲ್ಲಿ ವಿಡಿಯೋ ನೋಡಿದ್ದಾನೆ. ಕೊನೆಗೆ ಫ್ರಿಡ್ಜ್ ಒಳಗೆ ಇಟ್ಟರೆ ವಾಸನೆ ಬರಲ್ಲ ಎಂಬುದು ಗೊತ್ತಾಗಿದೆ. ತಕ್ಷಣವೇ ಮುಕ್ತಿರಂಜನ್ ರಾಯ್ ಹೊರಗಡೆ ಹೋಗಿ ಒಂದು ಮಚ್ಚು ಖರೀದಿಸಿ ತಂದಿದ್ದಾನೆ. ಮೃತದೇಹವನ್ನು ವಾಶ್ ರೂಮ್‌ಗೆ ತೆಗೆದುಕೊಂಡು ಹೋಗಿ, 57 ತುಂಡು ಮಾಡಿ ಫ್ರಿಡ್ಜ್ನಲ್ಲಿ ಇಟ್ಟಿದ್ದಾನೆ. ಬಳಿಕ ವಾಶ್ ರೂಮ್‌ನಲ್ಲಿ ಆ್ಯಸಿಡ್ ಹಾಕಿ ರಕ್ತದ ಕಲೆಗಳನ್ನು ಸ್ವಚ್ಛ ಮಾಡಿದ್ದಾನೆ. ಮಧ್ಯರಾತ್ರಿ ಹೊತ್ತಿಗೆ ಇಷ್ಟೆಲ್ಲ ಮಾಡಿ ಮುಗಿಸಿದ್ದ.

ಬೆಳಗಾಗುತ್ತಿದ್ದಂತೆ ಹೆಬ್ಬಗೋಡಿಯ ತನ್ನ ರೂಮ್‌ಗೆ ವಾಪಾಸ್ ಹೋಗಿದ್ದ ಮುಕ್ತಿರಂಜನ್ ರಾಯ್ ತನ್ನ ತಮ್ಮನಿಗೆ ತಕ್ಷಣವೇ ರೂಮ್ ಖಾಲಿ ಮಾಡಿಕೊಂಡು ಬೇರೆ ಕಡೆ ಹೋಗು, ತಾನು ಮಹಾಲಕ್ಷ್ಮಿಯನ್ನು ಕೊಲೆ ಮಾಡಿ ಬಂದಿದ್ದೀನಿ ಎಂದು ಹೇಳಿದ್ದಾನೆ. ತಮ್ಮನ ಬಳಿ ಇದ್ದ ಹಣ ಸಹ ತೆಗೆದುಕೊಂಡು ಬೈಕ್ನಲ್ಲಿ ಊರಿನತ್ತ ಪ್ರಯಾಣ ಬೆಳೆಸಿದ್ದಾನೆ. ಊರು ತಲುಪಿದ ಬಳಿಕ ಬಾಂಗ್ಲಾದೇಶಕ್ಕೆ ಹೋಗಿ ತಲೆಮರೆಸಿಕೊಳ್ಳುವ ಪ್ಲಾನ್ ಮಾಡಿದ್ದ.

ಪ್ಲಾಟಿನಂ ಬೈಕ್ ಚಲಾಯಿಸಿಕೊಂಡು 1660 ಕಿಮೀ ದೂರದಲ್ಲಿರುವ ಭದ್ರಕ್ ತಲುಪಿದ್ದಾನೆ. ಊರಿಗೆ ಹೋದ ಬಳಿಕ ತಾಯಿಯ ಬಳಿ ತಾನು‌ ಕೊಲೆ ಮಾಡಿರುವ ವಿಚಾರ ತಿಳಿಸಿದ್ದಾನೆ. ಆಗ ತಾಯಿ ಒಡಿಶಾದ ಗಂಜಂನಲ್ಲಿ ಇರುವ ತಮ್ಮನ ಜತೆ ಇರುವಂತೆ ಸಲಹೆ ನೀಡಿದ್ದಾಳೆ. ತಾಯಿಯ ಸಲಹೆಯಂತೆ ವಿದ್ಯಾಭ್ಯಾಸ ಮಾಡುತ್ತಿದ್ದ ತಮ್ಮನ ರೂಮ್ ಸೇರಿಕೊಂಡಿದ್ದಾನೆ.

ತಮ್ಮನ ಮೊಬೈಲ್ನಲ್ಲಿ ಪ್ರತಿದಿನ ಕನ್ನಡ ನ್ಯೂಸ್ ಚಾನಲ್ ಲೈವ್ ನೋಡುತ್ತಿದ್ದ. ಕೊನೆಗೊಂದು ದಿನ ಮಹಾಲಕ್ಷ್ಮಿ ಕೊಲೆ ವಿಚಾರ ಚಾನಲ್‌ಗಳಲ್ಲಿ ಬಂದಿದೆ. ತನಿಖಾ ತಂಡಗಳು ಆಂಧ್ರ, ಪಶ್ಚಿಮ ಬಂಗಾಳ ಮೊದಲಾದ ಕಡೆ ಹುಡುಕಾಟ ನಡೆಸುತ್ತಿರುವ ವಿಚಾರ ಗೊತ್ತಾಗಿದೆ. ಇನ್ನು, ಪೊಲೀಸರ ಕೈಗೆ ತಾನು ಸಿಕ್ಕಿಹಾಕಿಕೊಳ್ಳುತ್ತೇನೆ. ತಪ್ಪಿಸಿಕೊಳ್ಳಲು ಆಗಲ್ಲ ಎಂಬುದು ಅರಿವಾಗಿ, ಗಂಜಂನಿಂದ ದ್ವಿಚಕ್ರ ವಾಹನದಲ್ಲಿ ವಾಪಸ್ ಭದ್ರಕ್‌ಗೆ ಬಂದಿದ್ದಾನೆ. ಬಳಿಕ, ಊರ ಹೊರಭಾಗದಲ್ಲಿ ಡೆತ್ ನೋಟ್ ಬರೆದಿಟ್ಟು ಮುಕ್ತಿರಂಜನ್ ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹೀಗೆ ಒಂದು ಪ್ರೇಮ ಕಥೆ ಇಬ್ಬರನ್ನೂ ಬಲಿ ಪಡೆದಿದೆ.

ಮಹಿಳೆಯರ ಒಳ ಉಡುಪಿನ ಬಗ್ಗೆ ಲಾಯರ್ ಜಗದೀಶ್ ಮಾತು; ಏನಿದು ವಿವಾದ?

ನನ್ನ ಮೃತ ದೇಹವನ್ನು ಪೋಸ್ಟ್ ಮಾರ್ಟಂ ಮಾಡಬೇಡಿ: ಡೆತ್ ನೋಟ್ ಬರೆದಿಟ್ಟು ಯುವತಿ ಆತ್ಮಹತ್ಯೆ

ಬಿಗ್ ಬಾಸ್ ಮನೆಯ ಮಹಿಳಾ ಸ್ಪರ್ಧಿಗಳ ಖಾಸಗಿತನಕ್ಕೆ ಧಕ್ಕೆ?

ವಾರದಲ್ಲಿ ದಂಪತಿ ಎಷ್ಟು ಬಾರಿ ಲೈಂಗಿಕ ಸಂಪರ್ಕ ಹೊಂದಬಹುದು? ಅಧ್ಯಯನ ವರದಿ ಹೇಳೋದೇನು?

TAGGED:What is the reason for the murder of Mahalakshmi? How was the murder done? Everything is revealed in the police investigation!
Share This Article
Facebook Twitter Copy Link Print
Previous Article ಮುನಿರತ್ನ ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ
Next Article ಪಾಕಿಸ್ತಾನಕ್ಕೆ ಹೋಗುತ್ತಿರುವುದು  ಬಹುಪಕ್ಷೀಯ ಕಾರ್ಯಕ್ರಮಕ್ಕೆ: ಜೈಶಂಕರ್

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?