newsics.com
ಗಂಡ-ಹೆಂಡತಿಯ ನಡುವಿನ ಬಾಂಧವ್ಯ ಗಟ್ಟಿಯಾಗುವುದೇ ಸೆಕ್ಸ್ನಿಂದ ಎಂಬುವುದನ್ನು ಯಾರಿಂದಲೂ ತಳ್ಳಿ ಹಾಕಲು ಸಾಧ್ಯವಿಲ್ಲ. ವಾರದಲ್ಲಿ ಎಷ್ಟು ಬಾರಿ ದಂಪತಿ ಸೇರಬೇಕು ಎಂಬುದನ್ನು ಅಧ್ಯಯನ ವರದಿ ಹೇಳಿದೆ.
2017ರಲ್ಲಿ Archives of Sexual Behaviorನಲ್ಲಿ ಒಂದು ಅಧ್ಯಯನ ವರದಿ ಪ್ರಕಟವಾಗುತ್ತದೆ. ಅದರಲ್ಲಿ ಬಹುತೇಕ ದಂಪತಿ ವರ್ಷದಲ್ಲಿ ಸರಿಸುಮಾರು 54 ಬಾರಿ ಲೈಂಗಿಕ ಸಂಪರ್ಕ ಹೊಂದುತ್ತಾರೆ ಎಂದಿದೆ. ವಾರದಲ್ಲಿ ಒಂದು ಬಾರಿ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗುತ್ತಾರೆ ಎಂದಿದೆ. Social Psychological and Personality Science ಎಂಬುದರಲ್ಲಿ ಮತ್ತೊಂದು ಅಧ್ಯಯನ ವರದಿ ಪ್ರಕಟವಾಗಿತ್ತು. ಈ ಅಧ್ಯಯನವನ್ನು 40 ವರ್ಷಗಳ ಮೂರು ಪ್ರತ್ಯೇಕ ಪ್ರಾಜೆಕ್ಟ್ನಲ್ಲಿ ಅಮೆರಿಕದಲ್ಲಿ ಅಧ್ಯಯನ ನಡೆಸಲಾಗಿತ್ತು. ತಿಂಗಳಿನಲ್ಲಿ ಒಮ್ಮೆ ಅಥವಾ ತುಂಬಾ ಕಡಿಮೆ ಲೈಂಗಿಕ ಕ್ರಿಯೆ ನಡೆಸುವವರಲ್ಲಿ ಅತೃಪ್ತಿ ಇದೆ ಎಂಬುದಾಗಿ ಈ ವರದಿ ಹೇಳಿದೆ.
ಲೈಂಗಿಕ ತೃಪ್ತಿಗಾಗಿ ಸಂವಹನ ತುಂಬಾ ಅವಶ್ಯಕ. ಇಬ್ಬರು ತಮ್ಮ ಭಾವನೆ ಹಾಗೂ ಬೇಡಿಕೆಗಳನ್ನು ಮನಸ್ಸು ಬಿಚ್ಚಿ ಹಂಚಿಕೊಳ್ಳಬೇಕು. ಆಗ ಮಾತ್ರ ಲೈಂಗಿಕ ತೃಪ್ತಿ ಪಡೆಯಬಹುದು ಎಂದು ಅಧ್ಯಯನ ಅಭಿಪ್ರಾಯಪಟ್ಟಿದೆ.
ಉದ್ಯೋಗದ ಕಾರಣದಿಂದ ದೂರ-ದೂರ ಇರುವ ದಂಪತಿಗಳಿಗೆ ಲೈಂಗಿಕ ಬದುಕು ಅಪರೂಪವಾಗಿರುತ್ತದೆ. ಹಾಗಂತ ಅವರ ಮಧ್ಯ ಪ್ರೀತಿ ಇರುವುದಿಲ್ಲವೇ ಎಂದು ನೀವು ಕೇಳಬಹುದು. ಇಲ್ಲಿ ಗಂಡ-ಹೆಂಡತಿ ದೂರವಿರಲಿ, ಹತ್ತಿರವಿರಲಿ ಆದರೆ ಲೈಂಗಿಕ ಚಟುವಟಿಕೆ ವೇಳೆ ಇಬ್ಬರಿಗೂ ಅದರಿಂದ ಖುಷಿ ಸಿಕ್ಕಿದೆಯೇ ಎಂಬುದು ಮುಖ್ಯವಾಗಿರುತ್ತದೆ ಎಂದು ಅಧ್ಯಯನ ಹೇಳಿದೆ.