newsics.com
ಬೆಂಗಳೂರು: 2025ರ ಜನವರಿಯಿಂದ ರಾಜ್ಯದಲ್ಲಿ ಸ್ಮಾರ್ಟ್ ಚಾಲನಾ ಪರವಾನಗಿ (ಡಿಎಲ್) ಮತ್ತು ವಾಹನಗಳ ನೋಂದಣಿ ಪ್ರಮಾಣಪತ್ರ (ಆರ್ಸಿ) ಲಭ್ಯವಾಗಲಿದೆ.
ಈ ಸ್ಮಾರ್ಟ್ ಕಾರ್ಡ್ ಕ್ಯೂಆರ್ ಕೋಡ್ ಮತ್ತು ಚಿಪ್ ಎರಡನ್ನೂ ಹೊಂದಿರಲಿದೆ. ಒಂದು ದೇಶ ಒಂದು ಕಾರ್ಡ್’ ಇರಬೇಕು ಎಂದು ಕೇಂದ್ರ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವಾಲಯವು 2019ರಲ್ಲಿ ಎಲ್ಲ ರಾಜ್ಯಗಳಿಗೆ ಸೂಚಿಸಿತ್ತು.
ಛತ್ತೀಸಗಢ, ಹಿಮಾಚಲ ಪ್ರದೇಶ, ತಮಿಳುನಾಡು ಸಹಿತ ಕೆಲವು ರಾಜ್ಯಗಳು ಈಗಾಗಲೇ ಜಾರಿಗೆ ತಂದಿವೆ. ರಾಜ್ಯದಲ್ಲಿ ಡಿಎಲ್, ಆರ್ಸಿ ಕಾರ್ಡ್ ಪೂರೈಕೆಗೆ ಹಿಂದೆ ನೀಡಿದ್ದ ಗುತ್ತಿಗೆ ಅವಧಿ 2024ರ ಫೆಬ್ರವರಿವರೆಗೆ ಇದ್ದುದರಿಂದ ನಂತರವಷ್ಟೇ ಹೊಸ ಕಾರ್ಡ್ ಪೂರೈಕೆಯ ಗುತ್ತಿಗೆ ಕರೆಯಲು ಸಾರಿಗೆ ಇಲಾಖೆ ನಿರ್ಧರಿಸಿತ್ತು.
ಡಿಎಲ್, ಆರ್ಸಿ ಸ್ಮಾರ್ಟ್ಕಾರ್ಡ್ಗೆ ಟೆಂಡರ್ ಕರೆಯಲಾಗಿದೆ. ಈಗ ಪರಿಶೀಲನೆಯ ಹಂತದಲ್ಲಿದೆ. ಎಲ್ಲ ಪ್ರಕ್ರಿಯೆ ಇನ್ನು ಎರಡು ವಾರದಲ್ಲಿ ಮುಗಿಯಲಿದೆ. ಬಳಿಕ ಅನುಮತಿಗಾಗಿ ಸರ್ಕಾರಕ್ಕೆ ಕಳುಹಿಸಲಾಗುವುದು. ಸರ್ಕಾರದ ಅನುಮೋದನೆ ಸಿಕ್ಕ 60 ದಿನಗಳಲ್ಲಿ ಸ್ಮಾರ್ಟ್ಕಾರ್ಡ್ ವಿತರಣೆ ಆರಂಭಗೊಳ್ಳಲಿದೆ’ ಎಂದು ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಜ್ಞಾನೇಂದ್ರ ಕುಮಾರ್ ತಿಳಿಸಿದ್ದಾರೆ.
ಸ್ಮಾರ್ಟ್ ಕಾರ್ಡ್ನಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಡಿಎಲ್ ಹೊಂದಿರುವವರ ಪ್ರಾಥಮಿಕ ಮಾಹಿತಿ ಸಿಗಲಿದೆ. ಡಿಎಲ್ನಲ್ಲಿ ಕಾರ್ಡ್ದಾರರ ಹೆಸರು, ಫೋಟೊ, ವಿಳಾಸ, ಸಿಂಧುತ್ವ ಅವಧಿ, ಜನ್ಮ ದಿನಾಂಕ, ರಕ್ತದ ಗುಂಪು, ಮೊಬೈಲ್ ಸಂಖ್ಯೆ, ತುರ್ತು ಸಂಪರ್ಕ ಸಂಖ್ಯೆ ಸಹಿತ 25ಕ್ಕೂ ಹೆಚ್ಚು ಮಾಹಿತಿ ಇರಲಿದೆ.
ಮದುವೆ ಮಾತುಕತೆ ವೇಳೆ ಜಗಳ: ಯುವಕನ ಕೊಲೆ, ಯುವತಿ ಸೇರಿ 6 ಮಂದಿ ಬಂಧನ