newsics.com
ಬೆಂಗಳೂರು: ಕೇರಳದಲ್ಲಿ ನಿಫಾ ವೈರಸ್ ಗೆ 23 ವರ್ಷದ ಯುವಕ ಬಲಿಯಾಗಿದ್ದಾನೆ. ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಸೈಕಾಲಜಿ ಓದುತ್ತಿದ್ದ ಯುವಕ ಕೇರಳದಲ್ಲಿ ನಿಫಾಗೆ ಬಲಿಯಾಗಿದ್ದು, ನಗರಕ್ಕೆ ನಿಫಾ ಟೆನ್ಷನ್ ಕಾಲಿಟ್ಟಿದೆ.
ಬೆಂಗಳೂರಿನಿಂದ ಕೇರಳಕ್ಕೆ ತೆರಳಿದ್ದಾಗ ಯುವಕನಿಗೆ ನಿಫಾ ವೈರಸ್ ತಗುಲಿ, ಮೃತಪಟ್ಟಿದ್ದ. ಯುವಕನ ಸಾವಿನ ಬೆನ್ನಲ್ಲೇ ಕೇಂದ್ರ ಸರ್ಕಾರ ಹೈ ಅಲರ್ಟ್ ಆಗಿದೆ. ಕೇರಳ ಹಾಗೂ ವಿಶೇಷವಾಗಿ ಕರ್ನಾಟಕಕ್ಕೆ ಕಟ್ಟೆಚ್ಚರ ವಹಿಸಲು ಎಚ್ಚರಿಕೆ ನೀಡಿದೆ.
ಈ ಮಧ್ಯೆ ನಿಫಾಗೆ ಬಲಿಯಾದ ಯುವಕನ ಅಂತ್ಯಸಂಸ್ಕಾರಕ್ಕೆ ಕೇರಳಕ್ಕೆ ತೆರಳಿದ್ದ 15 ಸ್ನೇಹಿತರು ಬೆಂಗಳೂರಿಗೆ ಆಪತ್ತು ತಂದಿದ್ದಾರೆ. ಮೃತ ಯುವಕನ ಪ್ರಾಥಮಿಕ ಸಂಪರ್ಕಿತರಾಗಿರುವ ಸ್ನೇಹಿತರ ಟ್ರ್ಯಾಕಿಂಗ್ಗೆ ಇಳಿದ ಆರೋಗ್ಯ ಇಲಾಖೆ ನಿಫಾ ಪರೀಕ್ಷೆಗೆ ಒಳಪಡಿಸಿಲಿದೆ.