newsics.com
ಬೆಂಗಳೂರು: ಬಿಬಿಎಂಪಿ ದುಬಾರಿ ನಕ್ಷೆ ಶುಲ್ಕಕ್ಕೆ ಬೇಸತ್ತು ಸಚಿವರೇ ಹೈಕೋರ್ಟ್ ಮೊರೆ ಹೋಗಿದ್ದಾರೆ.
ವಾಣಿಜ್ಯ ಕಟ್ಟಡ ನಿರ್ಮಾಣದ ನಕ್ಷೆ ಮಂಜೂರಾತಿಗೆ
ಬಿಬಿಎಂಪಿ 41.55 ಲಕ್ಷ ರೂ. ಶುಲ್ಕ ವಿಧಿಸಿದೆ. ಈ ಹಿನ್ನಲೆ ಬಿಬಿಎಂಪಿ ಡಿಮಾಂಡ್ ನೋಟಿಸ್ ಪ್ರಶ್ನಿಸಿ ಸಚಿವ ದಿನೇಶ್ ಗುಂಡೂರಾವ್ ಹಾಗೂ ಅವರ ಪತ್ನಿ ತಬಸ್ಸುಮ್ ಗುಂಡೂರಾವ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಬೆಂಗಳೂರಿನ ಆರ್.ಟಿ.ನಗರ ಮಠದಹಳ್ಳಿ ಬಳಿ ವಾಣಿಜ್ಯ ಕಟ್ಟಡ ನಿರ್ಮಾಣದ ನಕ್ಷೆ ಮಂಜೂರಾತಿಗೆ ದುಬಾರಿ ನಕ್ಷೆ ತೆರಿಗೆ ಪ್ರಶ್ನಿಸಿರುವ ದಿನೇಶ್ ಗುಂಡೂರಾವ್, ಕರ್ನಾಟಕ ಪೌರ ನಿಗಮ ತಿದ್ದುಪಡಿ ರದ್ದತಿಗೂ ಮನವಿ ಸಲ್ಲಿಸಿದ್ದಾರೆ. ನೆಲ ಬಾಡಿಗೆ, ರಿಂಗ್ ರೋಡ್ ಶುಲ್ಕ, ತ್ವರಿತ ಸಂಚಾರ ಶುಲ್ಕ, ಸ್ಲಮ್ ಅಭಿವೃದ್ದಿ ಶುಲ್ಕ, ಭದ್ರತಾ ಠೇವಣಿ, ಕೆರೆ ಜೀರ್ಣೋದ್ಧಾರ ಶುಲ್ಕ, ನೀರು ಸರಬರಾಜು ಶುಲ್ಕ, ಕಾರ್ಮಿಕರ ಸೆಸ್ ಹೀಗೆ ಹಲವು ವಿಧದ ತೆರಿಗೆಗಳು ಕಾನೂನುಬಾಹಿರವೆಂದು ಘೋಷಿಸಲು ಮನವಿ ಮಾಡಿದ್ದಾರೆ. ಈ ಹಿನ್ನಲೆ ಸರ್ಕಾರ, ಬಿಬಿಎಂಪಿಗೆ ಹೈಕೋರ್ಟ್ ನೋಟಿಸ್ ನೀಡಿದೆ.