newsics.com
ಬೆಂಗಳೂರು : ಕ್ರಿಶ್ಚಿಯನ್ ಧರ್ಮದ ಉನ್ನತೀಕರಣಕ್ಕೆ 5 ಕೋಟಿ ರೂ. ಅನುದಾನ ಕೊಟ್ಟಿದ್ದೇನೆ. ಮುಂದಿನ ವರ್ಷ 5 ಕೋಟಿ ಅನುದಾನ ನೀಡುತ್ತೇನೆ ಎಂದು ಸಿಎಂ ಭರವಸೆ ನೀಡಿದರು.
ಶಿವಾಜಿನಗರದ ಸಂತ ಮೇರಿ ಜಯಂತ್ಯುತ್ಸವ ಅಂಗವಾಗಿ ನಡೆದ ಅಮ್ಮ ಮರಿಯಮ್ಮನ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಪಾಲ್ಗೊಂಡಿದ್ದರು.
ಮಾತನಾಡಿದ ಸಿಎಂ, ಪೀಟರ್ ಮಾಚಡೋ ಕ್ರಿಶ್ಚಿಯನ್ ಧರ್ಮದ ಉನ್ನತೀಕರಣದ ಪ್ರಯತ್ನಕ್ಕೆ ಸರ್ಕಾರ ಎಲ್ಲಾ ಸಹಕಾರ ನೀಡಲಿದೆ. ಕಳೆದ ವರ್ಷ 5 ಕೋಟಿ ರೂ. ಅನುದಾನ ಕೊಟ್ಟಿದ್ದೇನೆ. ಮುಂದಿನ ವರ್ಷ 5 ಕೋಟಿ ಅನುದಾನ ನೀಡುತ್ತೇನೆ ಎಂದು ಸಿಎಂ ಭರವಸೆ ನೀಡಿದರು.
ಕಳೆದ ಬಾರಿ ಕಾರ್ಯಕ್ರಮಕ್ಕೆ ಬಂದಾಗ 10 ಕೋಟಿ ರೂ. ಕೊಡುತ್ತೇನೆ ಎಂದು ಭರವಸೆ ನೀಡಿದ್ದೆ. ಅದರಂತೆ 5 ಕೋಟಿ ರೂ. ನೀಡಿದ್ದೇನೆ. ಮುಂದಿನ ವರ್ಷ ಬಜೆಟ್‌ನಲ್ಲಿ 5 ಕೋಟಿ ರೂ. ಕೊಡುತ್ತೇನೆ ಎಂದು ನುಡಿದಿದ್ದಾರೆ.