Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಸ್ವದೇಶಿನಿರ್ಮಿತ ಮಾನವರಹಿತ ಖಾಸಗಿ ಬಾಂಬ‌ರ್ ವಿಮಾನ ಪ್ರಾಯೋಗಿಕ ಹಾರಾಟ ಯಶಸ್ವಿ
ದೇಶಪ್ರಮುಖ

ಸ್ವದೇಶಿನಿರ್ಮಿತ ಮಾನವರಹಿತ ಖಾಸಗಿ ಬಾಂಬ‌ರ್ ವಿಮಾನ ಪ್ರಾಯೋಗಿಕ ಹಾರಾಟ ಯಶಸ್ವಿ

Share
1 Min Read
SHARE

newsics.com

ಬೆಂಗಳೂರು: ಸ್ವದೇಶಿನಿರ್ಮಿತ ಮಾನವರಹಿತ ಖಾಸಗಿ ಬಾಂಬ‌ರ್ ವಿಮಾನ ಎಫ್‌ಡಬ್ಲ್ಯುಡಿ200ಬಿ ತನ್ನ ಮೊದಲ ಪ್ರಾಯೋಗಿಕ ಹಾರಾಟವನ್ನು ಯಶಸ್ವಿಯಾಗಿ ನಡೆಸಿದೆ.

ನಗರದ ಎಲೆಕ್ಟ್ರಾನಿಕ್ ಸಿಟಿಯ ಫ್ಲೈಯಿಂಗ್ ವೆಡ್ಜ್ ಡಿಫೆನ್ಸ್ ಅಂಡ್ ಏರೋಸ್ಪೇಸ್ (ಎಫ್‌ಡಬ್ಲ್ಯುಡಿಎ) ಕಂಪನಿ ಈ‌ ವಿಮಾನವನ್ನು ಅಭಿವೃದ್ಧಿಪಡಿಸಿದೆ.

ಕಂಪನಿಯ ಸಿಇಒ ಸುಹಾಸ್ ತೇಜಸ್‌ಕಂದ ಮಾತನಾಡಿ, ಮಾನವರಹಿತ ಬಾಂಬರ್‌ ವಿಮಾನವನ್ನು ಭಾರತೀಯ ಸೇನೆಗೆ ಸೇರ್ಪಡೆ ಮಾಡುವ ಬಗ್ಗೆ ಚರ್ಚೆ ನಡೆದಿದೆ ಎಂದರು.

ಈ ವಿಮಾನವು ಮಧ್ಯಮ ಎತ್ತರದಲ್ಲಿ (15000 ಅಡಿ) ದೀರ್ಘಾವಧಿ ಹಾರಾಟ ನಡೆಸುವ ವರ್ಗದಲ್ಲಿ ಬರುತ್ತದೆ. ಸರ್ವೇ ಕ್ಷಣೆಗೆ ಆಪ್ಟಿಕಲ್ ಪೇಲೋಡ್ ಹಾಗೂ ವಾಯುದಾಳಿ ಮತ್ತು ಬಾಂಬ್ ದಾಳಿಗೆ ಕ್ಷಿಪಣಿಯಂತಹ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ ಎಂದರು.

ಈ ವಿಮಾನದ ವಿನ್ಯಾಸ, ಚೌಕಟ್ಟು, ಪ್ರೊಪಲ್ಸನ್ ಸಿಸ್ಟಂ, ಕಂಟ್ರೋಲ್ ಸಿಸ್ಟಂ, ಎಲೆಕ್ಟ್ರಾನಿಕ್ಸ್‌ಗಳನ್ನು ಸಂಪೂರ್ಣ ಸ್ವದೇಶಿಯಾಗಿ ಅಭಿವೃದ್ಧಿಪಡಿಸಲಾಗಿದೆ. ಈ ಎಲ್ಲವನ್ನೂ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಕಂಪನಿಯ 1.5 ಎಕರೆ ಜಾಗದಲ್ಲಿರುವ 12 ಸಾವಿರ ಚದರಡಿಯ ಅತ್ಯಾಧುನಿಕ ಉತ್ಪಾದನಾ ಘಟಕದಲ್ಲಿ ತಯಾರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸೆಮಿ ಕಂಡಕ್ಟ‌ರ್ ಹೊರತುಪಡಿಸಿ ಸಂಪೂರ್ಣ ಸ್ವದೇಶಿ ನಿರ್ಮಿತ ಏರ್‌ಕ್ರಾಫ್ಟ್ ಇದಾಗಿದೆ. ಸದ್ಯ ಭಾರತ ಆಮದು ಮಾಡಿಕೊಳ್ಳುತ್ತಿರುವ ಡ್ರೋನ್, ಸಮರ ವಿಮಾನಗಳಿಗೆ ಹೋಲಿಸಿದರೆ ತೀರಾ ಕಡಿಮೆ ಅಂದರೆ ₹25 ಕೋಟಿ ವೆಚ್ಚದಲ್ಲಿ ಇದನ್ನು ನಿರ್ಮಿಸಿದ್ದೇವೆ ಎಂದು ತಿಳಿಸಿದರು.

ಗಂಟೆಗೆ ಗರಿಷ್ಠ 250 ಕಿ.ಮೀ. ವೇಗದಲ್ಲಿ 7 ತಾಸುಗಳ ಕಾಲ 800 ಕಿ.ಮೀ.ವರೆಗೆ ಈ ವಿಮಾನ ಹಾರಾಡಬಲ್ಲದು. ಇದರ ಹಾರಾಟಕ್ಕೆ 300 ಮೀ.ನಷ್ಟು ಕಡಿಮೆ ರನ್‌ವೇ ಸಾಕು ಎಂದು ಸುಹಾಸ್ ವಿವರಿಸಿದರು.

ಇದನ್ನು ಭಾರತೀಯ ಸೈನ್ಯವು ಸೇರ್ಪಡೆ ಮಾಡಿಕೊಂಡಲ್ಲಿ ಅಮೆರಿಕ, ಇಸ್ರೇಲ್ ಮತ್ತಿತರ ರಾಷ್ಟ್ರಗಳಿಂದ ವಿಮಾನ, ಡ್ರೋನ್ ಆಮದು ಹಾಗೂ ಹೆಚ್ಚುವರಿ ವೆಚ್ಚ ತಗ್ಗಲಿದೆ. ಈ ಸಂಬಂಧ ಮಾತುಕತೆ ನಡೆಯುತ್ತಿದೆ ಎಂದು ಅವರು ಹೇಳಿದರು.

2 ವರ್ಷದೊಳಗಿನ ಮಕ್ಕಳು ಟಿವಿ, ಫೋನ್ ನೋಡುವುದು ನಿಷೇಧ

ನೇಪಾಳದ ಹೊಸ ಕರೆನ್ಸಿ: ಭಾರತಕ್ಕೆ ಭಾರೀ ತಲೆನೋವು

ಬೆಂಗಳೂರಿಗೂ ಬಂತು ಜರ್ಮನಿ Flixbus; 33 ನಗರಗಳಿಗೆ ಬಸ್ ಸಂಚಾರ

2023 ರ ವಿಧಾನಸಭೆ ಚುನಾವಣೆ: ಕುಣಿಗಲ್ ಶಾಸಕ ರಂಗನಾಥ್ ಆಯ್ಕೆ ಅಸಿಂಧು ಕೋರಿ ಸುಪ್ರೀಂಗೆ ಬಿಜೆಪಿ ಅರ್ಜಿ,ನೋಟಿಸ್ ಜಾರಿ

TAGGED:Homegrown Unmanned Private Bomber Aircraft Test Flight Successful
Share This Article
Facebook Twitter Copy Link Print
Previous Article ಕಣ್ಣಿನ ದೃಷ್ಟಿ  ಶಾರ್ಪ್‌ಆಗಿ ಇರ್ಬೇಕು ಅಂದ್ರೆ ಈ ರೀತಿ ಮಾಡಿ
Next Article ಗಂಡನಿಗೆ ಬೇರೆ ಹೆಣ್ಣಿನೊಂದಿಗೆ ಸಂಬಂಧವಿದ್ಯಾ? ಹೀಗೆ ಪತ್ತೆ ಹಚ್ಚಿ!

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?