newsics.com
ಇಸ್ರೇಲ್ನಲ್ಲಿ ಮುಂದಿನ 48 ಗಂಟೆ ಕಾಲ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
ಲೆಬನಾನ್ ಮೂಲದ ಉಗ್ರಗಾಮಿ ಗುಂಪು ಹೆಜ್ಬುಲ್ಲಾ ಮತ್ತು ಇಸ್ರೇಲ್ ಎರಡೂ ಪರಸ್ಪರರ ವಿರುದ್ಧ ದೊಡ್ಡ ಪ್ರಮಾಣದ ಮಿಲಿಟರಿ ಕಾರ್ಯಾಚರಣೆಗಳನ್ನು ಘೋಷಿಸಿದ ಹಿನ್ನೆಲೆಯಲ್ಲಿ ಈ ಘೋಷಣೆ ಮಾಡಲಾಗಿದೆ.
ಇರಾನ್ ಬೆಂಬಲಿತ ಗುಂಪು ಹಿಜ್ಬುಲ್ಲಾದ ಹೇಳಿಕೆಯ ಪ್ರಕಾರ, ಪ್ರಮುಖ ಇಸ್ರೇಲಿ ಮಿಲಿಟರಿ ತಾಣಗಳನ್ನು ಗುರಿಯಾಗಿಸಿಕೊಂಡು ಹಲವು ಸ್ಫೋಟಕ ಡ್ರೋನ್ಗಳ ಕಾರ್ಯಾಚರಣೆ ಆರಂಭಿಸಲಾಗಿದೆ. ಲೆಬನಾನ್ನಿಂದ ಉತ್ತರ ಇಸ್ರೇಲ್ ಗೆ 100ಕ್ಕೂ ಹೆಚ್ಚು ರಾಕೆಟ್ಗಳನ್ನು ಹಾರಿಸಲಾಗಿದೆ ಎಂದು ಎಎಫ್ಪಿ ವರದಿ ಮಾಡಿದೆ.
ಇಸ್ರೇಲ್ ಮಿಲಿಟರಿ ಕೂಡ ಲೆಬನಾನ್ ಗುರಿಗಳ ಮೇಲೆ ಪೂರ್ವಭಾವಿ ದಾಳಿಗಳನ್ನು ಪ್ರಾರಂಭಿಸಿದೆ. ಐಡಿಎಫ್ ಭಾನುವಾರ ಮುಂಜಾನೆ ಈ ದಾಳಿಗಳನ್ನು ನಡೆಸಿದ್ದು, ಪ್ರತಿಯಾಗಿ ಇಸ್ರೇಲಿ ಭೂಪ್ರದೇಶದ ಮೇಲೆ ಭಾರೀ ಪ್ರಮಾಣದ ದಾಳಿಗೆ ಹಿಜ್ಬುಲ್ಲಾ ಮುಂದಾಗಿದೆ.
ಈ ಬೆದರಿಕೆಗಳನ್ನು ತಟಸ್ಥಗೊಳಿಸಲು ಇಸ್ರೇಲಿ ವಾಯುಪಡೆಯ ಫೈಟರ್ ಜೆಟ್ಗಳನ್ನು ನಿಯೋಜಿಸಲಾಗಿದೆ.
ಹಿಜ್ಬುಲ್ಲಾ ಮತ್ತು ಅದರ ಪ್ರಾದೇಶಿಕ ಮಿತ್ರ ಇರಾನ್ ತನ್ನ ಮಿಲಿಟರಿ ಕಮಾಂಡರ್ ಫುವಾದ್ ಶುಕರ್ ಅವರ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಲಾಗಿದೆ.
ಬೆಂಗಳೂರು ಏರ್ಪೋರ್ಟ್ ಕ್ಯಾಬ್ ಪ್ರಯಾಣ ದರ ಮತ್ತಷ್ಟು ತುಟ್ಟಿ: ಶೇ.20ರಿಂದ 40ರಷ್ಟು ಹೆಚ್ಚಳ