newsics.com
ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಬಗ್ಗೆ ನಾಸಾ ತಲೆಕೆಡಿಸಿಕೊಂಡಿದೆ. ಬಾಹ್ಯಾಕಾಶದಲ್ಲಿ ಉಳಿದುಕೊಂಡಿರುವ ಈ ಇಬ್ಬರು ಗಗನಯಾತ್ರಿಗಳನ್ನು ಭೂಮಿಗೆ ಕರೆತರಲು ಭಾರೀ ಸರ್ಕಸ್ ಮಾಡುತ್ತಿದೆ.
ಒಂದು ವಾರದ ಯೋಜನೆಯಂತೆ ಇಬ್ಬರು ಗಗನಯಾತ್ರಿಗಳು ಬಾಹ್ಯಾಕಾಶಕ್ಕೆ ತೆರಳಿದ್ದರು. ಆದರೆ ತಾಂತ್ರಿಕ ದೋಷದಿಂದ ಹಿಂತಿರುಗಲು ಸಾಧ್ಯವಾಗದೆ ಇಬ್ಬರು ಅಲ್ಲೇ ಉಳಿದಿದ್ದಾರೆ. ಸದ್ಯ ಅವರಿಬ್ಬರು ಬಾಹ್ಯಾ ಕಾಶಕ್ಕೆ ಹೋಗಿ 2 ತಿಂಗಳುಗಳೇ ಕಳೆದಿವೆ. ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಆರೋಗ್ಯದಲ್ಲಿ ವ್ಯತ್ಯಾಸ ಕಾಣುತ್ತಿದೆ.
ಇದೀಗ ಅವರನ್ನು ನಾಸಾ ಮುಂದಿನ ವರ್ಷ ಫೆಬ್ರವರಿಯಲ್ಲಿ ಭೂಮಿಗೆ ಕರೆತರುವುದಾಗಿ ತಿಳಿದಿದೆ. ಶನಿವಾರದಂದು ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು, ಎಲೋನ್ ಮಸ್ಕ್ ಸ್ಪೇಸ್ ಎಕ್ಸ್ ಕ್ರೂ ಡ್ರ್ಯಾಗನ್ ಕ್ಯಾಪ್ಸುಲ್ನಲ್ಲಿ ಹಿಂತಿರುಗಲಿದ್ದಾರೆ ಎಂದು ಹೇಳಿದೆ.
ಸದ್ಯ ಸುನೀತಾ ಮತ್ತು ಬುಚ್ ಇಬ್ಬರು ಸಂಶೋಧನೆ, ನಿರ್ವಹಣೆ ಮತ್ತು ಸಿಸ್ಟಮ್ ಪರೀಕ್ಷೆಯಲ್ಲಿ ತೊಡಗಿಸಿಕೊಂಡಿದ್ದಾರೆ. ನಾಸಾ ಅವರನ್ನು ಆದಷ್ಟು ಬೇಗ ಕರೆತರಲು ಪ್ರಯತ್ನಿಸುತ್ತಿದೆ.