newsics.com
ಬೆಂಗಳೂರು: ಪೊಲೀಸರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದಕ್ಕೆ ಸುಳ್ಳು ಕೇಸ್ ಹಾಕಿ ಬಂಧನ ಮಾಡಿದ್ದಾರೆ ಎಂದು ಕೆಪಿಟಿಸಿಎಲ್ ಉದ್ಯೋಗಿಯೊಬ್ಬರು ಗಂಭೀರ ಅರೋಪ ಮಾಡಿದ್ದಾರೆ.
ಪೊಲೀಸರು ಗಾಂಜಾ ಕೇಸ್ ಹಾಕಿದ್ದಾರೆ ಎಂದು ಕೆಪಿಟಿಸಿಎಲ್ ಇಂಜಿನಿಯರ್ ಆಗಿರುವ ಶಾಂತಕುಮಾರಸ್ವಾಮಿ ಎನ್ನುವವರು ಹೈಕೋರ್ಟ್ ಮೊರಹೋಗಿದ್ದು, ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠದ ಮುಂದೆ ಪೊಲೀಸರಿಂದ ತಮಗಾದ ಕಿರುಕುಳವನ್ನು ಬಿಚ್ಚಿಟ್ಟಿದ್ದಾರೆ.
ಇದನ್ನು ಆಲಿಸಿದ ಹೈಕೋರ್ಟ್, ಕಿರುಕುಳ ನೀಡದಂತೆ ಪೊಲೀಸರಿಗೆ ಹೇಳುವಂತೆ ಎಸ್ಪಿಪಿಗೆ ಸೂಚನೆ ನೀಡಿದೆ. ಅಲ್ಲದೇ ಆರೋಪ ಸತ್ಯವಾದರೆ ಸಾಗರ ಡಿವೈಎಸ್ಪಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದೂ ಎಚ್ಚರಿಕೆ ನೀಡಿದೆ.
ಮದುವೆ ರದ್ದಾಗಿದ್ದಕ್ಕೆ ದುಡ್ಡು ಕೊಡುವಂತೆ ಶಾಸಕ ಹಾಗೂ ಪೊಲೀಸರು ಬೆದರಿಕೆ ಹಾಕಿದ್ದಾರೆ. ಹೀಗಾಗಿ ಪೊಲೀಸರ ವಿರುದ್ಧ ಲೋಕಾಯುಕ್ತ ಸಂಸ್ಥೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಗಾಂಜಾ ಕೇಸ್ ಹಾಕಿ ಬಂಧಿಸಿದ್ದಾರೆ. ಅಲ್ಲದೇ ಪೊಲೀಸರು ಡೋರ್ ಕ್ಲೋಸ್ ಮಾಡಿ ಹೊಡೆದಿದ್ದಾರೆ ಎಂದು ಸಾಗರ ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ್ ವಿರುದ್ಧ ಆರೋಪ ಮಾಡಿದ್ದಾರೆ.
ಎನ್ಕೌಂಟರ್ ಮಾಡುವುದಾಗಿ ಗನ್ ಇಟ್ಟು ಬೆದರಿಸಿದ್ದಾರೆ. ಪರ್ಸ್, ಸಾಕ್ಷ್ಯವಿದ್ದ ಮೊಬೈಲ್ ಕಿತ್ತಿಟ್ಟುಕೊಂಡಿದ್ದಾರೆ. ಸಾಲದ್ದಕ್ಕೆ ರೌಡಿಶೀಟರ್ ಮಾಡಿಸಿ ಕೆಲಸದಿಂದ ಸಸ್ಪೆಂಡ್ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಕೆಪಿಟಿಸಿಎಲ್ ಇಂಜಿನಿಯರ್ ಶಾಂತಕುಮಾರಸ್ವಾಮಿ ಎಂಬುವರು ಹೈಕೋರ್ಟ್ ನ್ಯಾಯಾಧೀಶರ ಮುಂದೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ನಿರಂತರ ಅತ್ಯಾಚಾರ: ಶಾಲಾ ಬಾಲಕಿ ಈಗ 7 ತಿಂಗಳ ಗರ್ಭಿಣಿ, ಪೋಷಕರು ಕಂಗಾಲು, ಆರೋಪಿ ವಿರುದ್ಧ ಪೊಲೀಸರಿಗೆ ದೂರು