newsics.com
ಬೆಂಗಳೂರು: ಕಂದಾಯ ಗುಪ್ತಚರ ನಿರ್ದೇಶನಾಲಯವು ಒಣಗಿದ ಸಮುದ್ರ ಕುದುರೆಗಳ ಕಳ್ಳಸಾಗಣೆ ದಂಧೆಯನ್ನು ಭೇದಿಸಿದೆ.
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 6,626 ಸಮುದ್ರ ಕುದುರೆಗಳೊಂದಿಗೆ ತಮಿಳುನಾಡಿನ ಮೂವರನ್ನು ಬಂಧಿಸಲಾಗಿದೆ ಎಂದು ಡಿಆರ್ಐ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಆಗಸ್ಟ್ 3 ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1ರಲ್ಲಿ ಕಾರ್ಯಪ್ರವೃತ್ತರಾದ ನಗರದ ಡಿಆರ್ಐ ಅಧಿಕಾರಿಗಳು ಮೂವರು ವ್ಯಕ್ತಿಗಳನ್ನು ಬಂಧಿಸಿರುವುದಾಗಿ ಅವರು ತಿಳಿಸಿದ್ದಾರೆ.
ಖಾಸಗಿ ಸಂಸ್ಥೆಯ ವಿಮಾನದಲ್ಲಿ ಮುಂಬೈ ಮೂಲಕ ಸಿಂಗಾಪುರಕ್ಕೆ ತೆರಳುತ್ತಿದ್ದ ಶಂಕಿತರ ಸಾಮಾನು ಸರಂಜಾಮುಗಳನ್ನು ಪರಿಶೀಲಿಸಿದಾಗ 6,626 (ಒಣಗಿದ) ಸಮುದ್ರಕುದುರೆಗಳು ಪತ್ತೆಯಾಗಿವೆ.
ಭಾರತದಲ್ಲಿ ವನ್ಯಜೀವಿ (ಸಂರಕ್ಷಣೆ) ಕಾಯ್ದೆಯಡಿ ಎಲ್ಲಾ ಜಾತಿಯ ಸಮುದ್ರ ಕುದುರೆಗಳ ಮಾರಾಟ, ಖರೀದಿ ಮತ್ತು ಯಾವುದೇ ರೀತಿಯ ಬಳಕೆಯನ್ನು ನಿಷೇಧಿಸಲಾಗಿದ್ದು, ಇದು ಶಿಕ್ಷಾರ್ಹ ಅಪರಾಧವಾಗಿದೆ.
ಬಂಧಿತರು ಸಿಂಗಾಪುರಕ್ಕೆ ಸಮುದ್ರ ಕುದುರೆಗಳ ಸಾಗಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಂದು ಡಿಆರ್ ಐ ಅಧಿಕಾರಿಗಳು ತಿಳಿಸಿದ್ದಾರೆ.
ಆಗ್ನೇಯ ಏಷ್ಯಾದ ಮಾರುಕಟ್ಟೆಗಳಲ್ಲಿ ಒಣಗಿದ ಸಮುದ್ರ ಕುದುರೆಗಳಿಗೆ ಬೇಡಿಕೆ ಹೆಚ್ಚಿದೆ. ಅಲ್ಲಿ ಸಾಂಪ್ರದಾಯಿಕ ಔಷಧ, ಪಾಕಶಾಲೆ, ಅಕ್ವೇರಿಯಂಗಳಿಗೆ ಅಲಂಕಾರಿಕ ಮತ್ತಿತರ ಕಾರಣಕ್ಕೆ ಒಣಗಿದ ಸಮುದ್ರ ಕುದುರೆಗಳನ್ನು ಬಳಸಲಾಗುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಓರ್ವ ಹುಡುಗನಿಗಾಗಿ ಕ್ಲಾಸ್ನಲ್ಲೇ ಇಬ್ಬರು ಹುಡುಗಿಯರ ಹೊಡೆದಾಟ! ರಣಾಂಗಣವಾಯ್ತು ಕ್ಲಾಸ್ರೂಂ… ವಿಡಿಯೊ ವೈರಲ್
NASA ಲೇಟ್ ಮಾಡಿದ್ರೆ ಸುನಿತಾ ವಿಲಿಯಮ್ಸ್ ಪ್ರಾಣಕ್ಕೆ ಕಂಟಕ! 14 ದಿನದಲ್ಲಿ ಭೂಮಿಗೆ ಕರೆತರಲೇಬೇಕು…