newsics.com
ದೇವರ ಗರ್ಭಗುಡಿಯಲ್ಲಿ ದರ್ಶನ್ ಫೋಟೋ ಇಟ್ಟು ಪೂಜೆ ಮಾಡಿ ಅಂಧಾಭಿಮಾನ ಮೆರೆದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

ಹೌದು, ಮುಜರಾಯಿ ಇಲಾಖೆಗೆ ಸೇರಿದ ದೇಗುಲದಲ್ಲಿ ಇಂತಹ ಕೃತ್ಯ ಮಾಡಲಾಗಿದೆ. ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲ್ಲೂಕಿನ ಕುರುಗೋಡು ದೊಡ್ಡಬಸವೇಶ್ವರ ದೇಗುಲದಲ್ಲಿ ಈ ಘಟನೆ ನಡೆದಿದ್ದು, ದೊಡ್ಡಬಸವೇಶ್ವರ ದೇವರ ಪ್ರಾಣ ಮೂರ್ತಿ ಮುಂದೆ ದರ್ಶನ್ ಫೋಟೋ ಇಟ್ಟು ಪೂಜೆ ಮಾಡಲಾಗಿದೆ. ಸದ್ಯ ದೇವರ ವಿಗ್ರಹದ ಮುಂದೆ ದರ್ಶನ್ ಫೋಟೊ ಇಟ್ಟು ಅಂಧಾಭಿಮಾನ ಪ್ರದರ್ಶನ ಮಾಡಿದ್ದಕ್ಕೆ ಭಕ್ತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ
ಇನ್ನು ಈ ಸುದ್ದಿ ವ್ಯಾಪಕ ವೈರಲ್ ಆಗುತ್ತಿದ್ದಂತೆ ಯಾವುದೇ ಅನುಮತಿ ಪಡೆಯದೆ ನಟನ ಫೋಟೋ ಇಟ್ಟು ಪೂಜೆ ಮಾಡುವ ಮೂಲಕ ಭಕ್ತರ ಭಾವನೆಗೆ ಧಕ್ಕೆ ತಂದಿದ್ದಕ್ಕೆ ದೇವಸ್ಥಾನದ ಆರ್ಚಕನನ್ನು ಅಮಾನತುಗೊಳಿಸಿ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.