newsics.com
ನಾಗ್ಪುರ: ಲಕ್ಷ್ಮೀನಗರ ಪ್ರದೇಶದ ಬೀದಿಗಳಲ್ಲಿ ಬೆತ್ತಲೆಯಾಗಿ ಓಡಾಡುತ್ತಿರುವ ದಂಪತಿಯ ವಿಡಿಯೋ ವೈರಲ್ ಆಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಜನನಿಬಿಡ ಪ್ರದೇಶವಾದ ಲಕ್ಷ್ಮೀನಗರ ಚೌಕದ ಬಳಿ ಈ ಘಟನೆ ನಡೆದಿದ್ದು, ಬೈಕ್ನಲ್ಲಿ ಬಂದ ಸ್ಥಳೀಯ ಯುವಕರು ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.
ಶನಿವಾರ ರಾತ್ರಿ 2 ಗಂಟೆಯ ಸುಮಾರಿಗೆ ಚಿತ್ರೀಕರಿಸಲಾದ ಈ ವಿಡಿಯೋದಲ್ಲಿ ಯುವಕನೊಬ್ಬ ಸಂಪೂರ್ಣ ಬೆತ್ತಲೆಯಾಗಿ ಜಗಳವಾಡುತ್ತಿರುವುದನ್ನು ತೋರಿಸುತ್ತದೆ.
ನಂತರ ಆ ವ್ಯಕ್ತಿ ಪಾದಚಾರಿ ಮಾರ್ಗದ ಬಳಿ ಇರುವ ಪಾಳುಬಿದ್ದ ಮನೆಯ ಕಡೆಗೆ ಹೋಗುತ್ತಾನೆ. ಅದೇ ವೇಳೆ ಇನ್ನೋರ್ವ ಯುವತಿ ಕೂಡ ನಗ್ನಳಾಗಿ ನಡೆಯುತ್ತಿರುವುದು ರೆಕಾರ್ಡ್ ಆಗಿದೆ. ಆ ಸಮಯದಲ್ಲಿ, ಬೀದಿಗಳಲ್ಲಿ ಹೆಚ್ಚಿನ ಜನಸಂಚಾರವಿರಲಿಲ್ಲ. ಇಬ್ಬರು ಬೈಕರ್‌ಗಳು ಈ ದೃಶ್ಯವನ್ನು ರೆಕಾರ್ಡ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಕಾಡಿನಲ್ಲಿ ಸರಪಳಿಯಿಂದ ಬಂಧಿಯಾಗಿದ್ದ ಮಹಿಳೆಯ ರಕ್ಷಣೆ: ಗಂಡನಿಂದಲೇ ಕೃತ್ಯ ಶಂಕೆ, ತನಿಖೆಗಿಳಿದ ಪೊಲೀಸರು
ಪ್ರೀತಿ ಹೆಸರಲ್ಲಿ ಬಾಯ್‌ಫ್ರೆಂಡ್ ನಿಮ್ಮನ್ನು ಬಳಸಿಕೊಳ್ಳುತ್ತಿದ್ದಾನಾ?; TRUE LOVE ಅಂದ್ರೇನು?