newsics.com
ಬೆಂಗಳೂರು: ನಾನು ಈಗ ಮದುವೆಯಾಗಲು ನಿರ್ಧರಿಸಿದ್ದೇನೆ. ಆದರೆ, ನನಗೆ ಸೂಕ್ತ ವರ ಇನ್ನೂ ಸಿಕ್ಕಿಲ್ಲ. ದಯವಿಟ್ಟು ನನ್ನ ಕನಸಿನ ಹುಡುಗನನ್ನು ಯಾರಾದರೂ ಹುಡುಕಿಕೊಡಿ. ನೀವು ಎಷ್ಟು ಬೇಗ ಹುಡುಕಿಕೊಡುತ್ತಿರೋ ಅಷ್ಟು ಬೇಗ ನಿಮಗೆ ನನ್ನ ಮದುವೆ ಊಟ ಸಿಗುತ್ತದೆ. ಇದು ಗ್ಯಾರಂಟಿ..’ ಎಂದು ಆ್ಯಂಕರ್ ಅನುಶ್ರೀ ಹೇಳಿದ್ದಾರೆ.
ತುಳು ನಾಡಿನಲ್ಲಿ ನೀಡಿದ ಸಂದರ್ಶನವೊಂದರಲ್ಲಿ ಮದುವೆಯಾಗುವ ತಮ್ಮ ನಿರ್ಧಾರವನ್ನು ಅನುಶ್ರೀ ಪ್ರಕಟಿಸಿದ್ದಾರೆ.
ಅದೆಷ್ಟೋ ಜನರು ತಮ್ಮ ಮದುವೆ, ತಮ್ಮ ಮಕ್ಕಳ-ಮೊಮ್ಮಕ್ಕಳ ಮದುವೆಗಿಂತ ಹೆಚ್ಚಾಗಿ ಅನುಶ್ರೀ ಮದುವೆಯನ್ನು ನೋಡಲು ಕಾತರದಿಂದ ಕಾಯುತ್ತಿದ್ದರು ಎನ್ನಬಹುದು. ಅಂಥವರಿಗೆ ಇದೀಗ ಶುಭ ಸುದ್ದಿ ಸಿಕ್ಕಿದೆ. ಅನುಶ್ರೀ ಮದುವೆ ಆಗಲಿದ್ದಾರೆ.
ಹೋದಲ್ಲಿ, ಬಂದಲ್ಲಿ ಕುಂತಲ್ಲಿ ನಿಂತಲ್ಲಿ ಮದುವೆ ಯಾವಾಗ ಎಂದೇ ಅನುಶ್ರೀಯವರನ್ನು ಕೇಳುತ್ತಿದ್ದರಂತೆ. ಗೊತ್ತಿಲ್ಲದ ಉತ್ತರ ಕೊಡಲಾರದೇ ಅದೆಷ್ಟೋ ಬಾರಿ ಮಾತಿನ ಮಲ್ಲಿ ಅನುಶ್ರೀಯವರೇ ಮೌನಕ್ಕೆ ಜಾರುತ್ತಿದ್ದರು.
ನಾನು ಮದುವೆ ಆಗಲಿದ್ದೇನೆ. ನನ್ನ ತಂದೆ-ತಾಯಿಯ ದಾಂಪತ್ಯದ ಕಹಿ ಅನುಭವವನ್ನು ಕಣ್ಣಾರೆ ಕಂಡಿದ್ದ ನನಗೆ ಮದುವೆ ಎಂದರೆ ನೋವು ತರುವ ಸಂಗತಿಯಾಗಿತ್ತು. ನಾನು ನನ್ನ ಮದುವೆ ಬಗ್ಗೆ ಯೋಚಿಸಿದಾಗಲೆಲ್ಲಾ ನನಗೆ ಮದುವೆ-ದಾಂಪತ್ಯ ಇವೆಲ್ಲಾ ನನಗೆ ಬೇಡವೇ ಬೇಡ. ನನ್ನ ಅಮ್ಮ-ಅಪ್ಪನ ಸಂಸಾರದ ಸುಖದ ಹಣೆಬರಹವನ್ನು ನೋಡಿದ್ದಾಗಿದೆ, ಸಾಕು’ ಎನಿಸುತ್ತಿತ್ತು.
ನನ್ನದೇ ಪೋಷಕರ ಮುರಿದುಬಿದ್ದ ಮದುವೆ ನೋಡಿದ ಮೇಲೂ ನನಗೆ ಮದುವೆ ಆಗಬೇಕೆಂಬ ಕನಸು ಕಾಣುವುದರಲ್ಲಿ ಅರ್ಥವೇ ಇಲ್ಲ ಎನ್ನಿಸುತ್ತಿತ್ತು. ಆದರೆ ಈಗ, ವರ್ಷಗಳು ಉರುಳುತ್ತಿವೆ. ನನಗೂ ವಯಸ್ಸಾಗುತ್ತಿದೆ. ಎಲ್ಲರ ಜೀವನದಲ್ಲೂ ಮದುವೆ ಕಹಿ ಘಟನೆ ಆಗಲೇಬೇಕು ಎಂದೇನಿಲ್ಲ, ಅದು ಸುಮಧುರ ಕೂಡ ಆಗಬಹುದು ಎನ್ನಿಸುತ್ತಿದೆ. ಹೀಗಾಗಿ ನಾನು ಮದುವೆಯಾಗಲು ನಿರ್ಧರಿಸಿದ್ದೇನೆ. ಮದುವೆಯೇ ಬೇಡ ಎನ್ನುತ್ತಿದ್ದವಳು ಈಗ ಮದುವೆಗೆ ಗ್ರೀನ್ ಸಿಗ್ನಲ್ ನೀಡಿಬಿಟ್ಟಿದ್ದೇನೆ.
ಆದರೆ, ಎಲ್ಲರಲ್ಲೂ ಒಂದು ವಿನಂತಿ. ‘ನನಗೆ ಇದು ಎರಡನೇ ಅಥವಾ ಮೂರನೇ ಮದುವೆ ಅಲ್ಲ. ನನಗೆ ಇನ್ನೂ ಮದುವೆ ಆಗಿಲ್ಲ’ ಎಂದು ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಕಾರಣ, ನನಗೆ ಬಹಳಷ್ಟು ಜನರು ಈಗಾಗಲೇ ಮದುವೆ ಮಾಡಿಬಿಟ್ಟಿದ್ದೀರಿ. ಒಮ್ಮೆ ನಟ ರಕ್ಷಿತ್ ಶೆಟ್ಟಿ ಜತೆ ಮದುವೆ ಮಾಡಿಸಿದ್ದೀರಿ. ಇನ್ನೊಮ್ಮೆ ನನ್ನ ಕಸಿನ್ ಗಂಡನ ಜತೆಯಲ್ಲೂ ಮದುವೆ ಆಗಿಹೋಗಿದೆಯಂತೆ. ಅದನ್ನು ನನ್ನ ಕಸಿನ್ ಕಾಲ್ ಮಾಡಿ ಹೇಳಿ ನಕ್ಕಿದ್ದಾಳೆ. ಆದರೆ, ನನಗೆ ನಿಜವಾಗಿಯೂ ಮದುವೆ ಆಗಿಲ್ಲ ಎಂದು ಅನುಶ್ರೀ ಹೇಳಿದ್ದಾರೆ.
ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್‌ನಲ್ಲಿ ಕರ್ತವ್ಯ ನಿರ್ವಹಿಸಲು ಮೈಸೂರಿನ ಯುವತಿ ಆಯ್ಕೆ