Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಅಮೆರಿಕ ಅಧ್ಯಕ್ಷೀಯ ಚುನಾವಣಾ ಕಣದಿಂದ ಹಿಂದೆ ಸರಿದ ಜೋ ಬೈಡನ್
ಪ್ರಮುಖವಿದೇಶ

ಅಮೆರಿಕ ಅಧ್ಯಕ್ಷೀಯ ಚುನಾವಣಾ ಕಣದಿಂದ ಹಿಂದೆ ಸರಿದ ಜೋ ಬೈಡನ್

Share
2 Min Read
SHARE

newsics.com

ಅಮೆರಿಕ: ಅಮೆರಿಕ ಅಧ್ಯಕ್ಷೀಯ ಚುನಾವಣಾ ಕಣದಿಂದ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಿಂದೆ ಸರಿದಿದ್ದಾರೆ.
2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಸ್ಫರ್ಧೆಯಿಂದ ಹೊರಗುಳಿಯುವುದಾಗಿ ಯುಎಸ್ ಅಧ್ಯಕ್ಷ ಜೋ ಬೈಡನ್ ಭಾನುವಾರ ಘೋಷಿಸಿದ್ದಾರೆ.
ಡೆಲವೇರ್‌ನಲ್ಲಿರುವ ತಮ್ಮ ಬೀಚ್ ಹೌಸ್‌ನಲ್ಲಿ ಕೋವಿಡ್‌ನಿಂದ ಚೇತರಿಸಿಕೊಳ್ಳುತ್ತಿರುವಂತೆಯೇ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪತ್ರವೊಂದನ್ನು ಫೋಸ್ಟ್ ಮಾಡಿರುವ 81 ವರ್ಷದ ಡೆಮಾಕ್ರಟಿಕ್ ಪಕ್ಷದ ಬೈಡನ್, ಅಧ್ಯಕ್ಷರಾಗಿ ನಿಮಗೆ ಸೇವೆ ಸಲ್ಲಿಸುವುದು ನನ್ನ ಜೀವನದ ದೊಡ್ಡ ಗೌರವವಾಗಿದೆ ಎಂದಿದ್ದಾರೆ.
ಮರು ಚುನಾವಣೆಯನ್ನು ಬಯಸುವುದು ನನ್ನ ಉದ್ದೇಶವಾಗಿದ್ದರೂ, ನನ್ನ ಪಕ್ಷ ಮತ್ತು ದೇಶದ ಹಿತದೃಷ್ಟಿಯಿಂದ ನನ್ನ ಉಳಿದ ಅವಧಿಗೆ ಅಧ್ಯಕ್ಷನಾಗಿ ನನ್ನ ಕರ್ತವ್ಯಗಳನ್ನು ಪೂರೈಸುವುದರ ಮೇಲೆ ಗಮನಹರಿಸುವುದು ಉತ್ತಮವಾಗಿದೆ ಎಂದು ಭಾವಿಸುತ್ತೇನೆ. ಈ ವಾರದ ನಂತರ ನನ್ನ ನಿರ್ಧಾರದ ಬಗ್ಗೆ ರಾಷ್ಟ್ರದೊಂದಿಗೆ ಹೆಚ್ಚು ವಿವರವಾಗಿ ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ.

ಬೈಡನ್ ನಿರ್ಧಾರದಿಂದ ಡೆಮಾಕ್ರಟಿಕ್ ಪಕ್ಷವು ಈಗ ಗೊಂದಲಕ್ಜೆ ಸಿಲುಕಿದ್ದು, ನವೆಂಬರ್ ಚುನಾವಣೆಯ ವೇಳೆಗೆ ಹೊಸ ಅಭ್ಯರ್ಥಿಯನ್ನು ಹುಡುಕಬೇಕಾಗಿದೆ. ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮುಂಚೂಣಿಯಲ್ಲಿದ್ದಾರೆ.

ಬೈಡನ್ ಅವರ ಆರೋಗ್ಯ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿತ್ತು. ಬೈಡನ್ ಚುನಾವಣೆ ಕಣದಿಂದ ಹಿಂದೆ ಸರಿಯುವಂತೆಯೂ ಒತ್ತಡ ಕೇಳಿಬರುತ್ತಿತ್ತು.

ಬೈಡನ್ ಯುಎಸ್ ಅಧ್ಯಕ್ಷೀಯ ಚುನಾವಣೆ ಇತಿಹಾಸದಲ್ಲಿ ರೇಸ್‌ನಿಂದ ತಡವಾಗಿ ಹೊರಬಂದ ಮೊದಲ ಅಧ್ಯಕ್ಷರಾಗಿದ್ದಾರೆ. ಆರೋಗ್ಯ ಮತ್ತು ಮಾನಸಿಕ ತೀಕ್ಷ್ಣತೆ ಕಳವಳದಿಂದ ತಲೆಬಾಗಿದ ಮೊದಲಿಗ ಅಧ್ಯಕ್ಷರೂ ಆಗಿದ್ದಾರೆ.

ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಜೂನ್ 27 ರಿಂದಲೇ ಚರ್ಚೆ ಆರಂಭವಾಗಿತ್ತು. ಆದರೆ, ಮೂರು ವಾರಗಳ ಬಳಿಕ ಬೈಡನ್ ತಮ್ಮ ಅಂತಿಮ ತೀರ್ಮಾನ ಕೈಗೊಂಡಿದ್ದಾರೆ.

ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಅವರ ಪಕ್ಷದಲ್ಲಿಯೇ ಒತ್ತಡ ಹೆಚ್ಚಾಗಿತ್ತು. ನಟ ಜಾರ್ಜ್ ಕ್ಲೋನಿಯಿಂದ ಹಿಡಿದು ಮಾಜಿ ಅಧ್ಯಕ್ಷ ಬರಾಕ್ ಒಮಾಮಾವರೆಗೂ ಹಲವರು ಬೈಡನ್ ಚುನಾವಣೆಗೆ ಸ್ಪರ್ಧಿಸಬಾರದು ಎಂದು ಹೇಳಿದ್ದರು.

ಅಂತಿಮವಾಗಿ ಕೋವಿಡ್‌ನಿಂದ ಚಿಕಿತ್ಸೆಗೊಳಗಾಗಿ ಪ್ರಚಾರದಿಂದ ದೂರ ಸರಿದಿದ್ದ ಅವರು ಅಮೆರಿಕ ಅಧ್ಯಕ್ಷೀಯ ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಮಾಡಿದೆ.

ಜುಲೈ 13 ರಂದು ಡೊನಾಲ್ಡ್ ಟ್ರಂಪ್ ಹತ್ಯೆ ವಿಫಲ ಯತ್ನ ನಡೆದಿತ್ತು. ಇದರ ಬೆನ್ನಲ್ಲೇ ಚುನಾವಣಾ ಕಣದಿಂದ ಹಿಂದೆ ಸರಿಯುವ ಬೈಡನ್ ನಿರ್ಧಾರ ಅಧ್ಯಕ್ಷೀಯ ಚುನಾವಣೆ ವೇಳೆಯಲ್ಲಿನ ಅಲ್ಲಿನ ರಾಜಕೀಯ ಪ್ರಕ್ಷುಬ್ಧತೆ ಪರಿಸ್ಥಿತಿಯ ಚರ್ಚೆಗೂ ಕಾರಣವಾಗಿದೆ.

ಈ ಮೂಲಕ ಬೈಡನ್ ಕೇವಲ ಒಂದೇ ವರ್ಷ ಅಮೆರಿಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಕ್ಲಬ್ ಸೇರಿದ್ದಾರೆ. ಕೊನೆಯದಾಗಿ 1968ರಲ್ಲಿ ಲಿಂಡನ್ ಜಾನ್ಸನ್ ಒಂದು ಅವಧಿ ಪೂರೈಸಿದ್ದರು. ಬೈಡನ್ ನಂತರ ಈಗ ಡೆಮಾಕ್ರಟಿಕ್ ಪಕ್ಷದಲ್ಲಿ ಕಮಲಾ ಹ್ಯಾರಿಸ್ ಮಾತ್ರ ಟ್ರಂಪ್‌ಗೆ ಸೂಕ್ತ ಎದುರಾಳಿ ಎನ್ನಲಾಗುತ್ತಿದೆ.

https://x.com/JoeBiden/status/1815087772216303933?t=ILeAP2gBOxQ06l0Gw1iQmQ&s=19

ನೋವು ನೀಡದೆ ಒಂದೇ ನಿಮಿಷದಲ್ಲಿ ಜೀವಹರಣ ಮಾಡಬಲ್ಲ ‘ಆತ್ಮಹತ್ಯೆ ಯಂತ್ರ’ ಆವಿಷ್ಕಾರ! ಶೀಘ್ರ ಕಾರ್ಯಾರಂಭ

ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್‌ನಲ್ಲಿ ಕರ್ತವ್ಯ ನಿರ್ವಹಿಸಲು ಮೈಸೂರಿನ ಯುವತಿ ಆಯ್ಕೆ

ರಾಯಭಾರ ಕಚೇರಿ ಮೇಲೆ ದಾಳಿ… ಪಾಕಿಸ್ತಾನದ ಧ್ವಜ ಸುಡಲು ಮುಂದಾದ ಅಫ್ಘನ್ಸ್!

ಮುಂದಿನ 5 ದಿನ ರಾಜ್ಯದಲ್ಲಿ ಮಳೆ ಜತೆಗೆ ಶೀತಗಾಳಿ ಬೀಸುವ ಸಾಧ್ಯತೆ; ಹಲವೆಡೆ ರೆಡ್ ಅಲರ್ಟ್

TAGGED:Joe Biden withdrew from the US presidential election
Share This Article
Facebook Twitter Copy Link Print
Previous Article ಕೊನೆಗೂ ಮದುವೆಯಾಗಲು ನಿರ್ಧರಿಸಿದ ಆ್ಯಂಕರ್ ಅನುಶ್ರೀ, ಕನಸಿನ ಹುಡುಗನನ್ನು ಹುಡುಕಿಕೊಡಿ ಎಂದ ಮಾತಿನ‌ ಮಲ್ಲಿ!
Next Article ಇಂದಿನಿಂದ ಸಂಸತ್‌ನ ಮುಂಗಾರು ಅಧಿವೇಶನ, ನಾಳೆ ಬಜೆಟ್

Popular Posts

US Iran War Updates | ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರ: 11ನೇ ರಾತ್ರಿ ಕೂಡ ವಾಯುದಾಳಿ, ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆ

2 Min Read

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read

You Might Also Like

ದೇಶಪ್ರಮುಖ

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read
ಕರ್ನಾಟಕಪ್ರಮುಖ

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read
ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?