newsics.com
ಬೆಂಗಳೂರು: ಕಬಿನಿಯಿಂದ ತಮಿಳುನಾಡಿಗೆ ನಿತ್ಯ 8,000 ಕ್ಯುಸೆಕ್ ನೀರು ಬಿಡುಗಡೆ ಮಾಡಲು ಸರ್ವಪಕ್ಷ ಸಭೆಯಲ್ಲಿ ಒಮ್ಮತದ ತೀರ್ಮಾನವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಕುರಿತು ಕಾವೇರಿ ನೀರು ನಿಯಂತ್ರಣ ಸಮಿತಿ ಶಿಫಾರಸು ಹೊರಡಿಸಿರುವ ಹಿನ್ನೆಲೆಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಭಾನುವಾರ ,,ಸರ್ವಪಕ್ಷಗಳ ಸಭೆ ನಡೆಸಿ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಸಭೆಯಲ್ಲಿ ವಸ್ತುಸ್ಥಿತಿಯ ವಿವರಣೆ ಕೊಟ್ಟಿದ್ದೇವೆ. ರಾಜ್ಯ ಜಲ ವಿವಾದ ಕಾನೂನು ತಂಡದ ಮುಖ್ಯಸ್ಥ ಮೋಹನ್ ಕಾತರಕಿ, ಎಜಿ ಶಶಿಕಿರಣ್ ಶೆಟ್ಟಿಯವರು ಭಾಗವಹಿಸಿದ್ದರು. ಈಗ ಕಬಿನಿಯಿಂದ ನಿತ್ಯ 13,000 ಕ್ಯುಸೆಕ್ ನೀರು ಹೋಗುತ್ತಿದೆ. ಅದರ ಬದಲು ನಿತ್ಯ 8000 ಕ್ಯುಸೆಕ್ಸ್ ನೀರು ಬಿಡೋಣ. ಮಳೆ ಬಾರದೇ ಇದ್ದರೆ ನೀರು ಬಿಡುವ ಪ್ರಮಾಣ ಕಡಿಮೆ ಮಾಡೋಣ. ಜೊತೆಗೆ CWMAನಲ್ಲಿ ಮೇಲ್ಮನವಿ ಸಲ್ಲಿಸುವ ಬಗ್ಗೆ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ನಿತ್ಯ 1 ಟಿಎಂಸಿ ನೀರು ಬಿಡಲು ಆಗುವುದಿಲ್ಲ. 24 ತಾಸು 11,500 ಕ್ಯುಸೆಕ್ ನೀರು ಬಿಟ್ಟರೆ 1 ಟಿಎಂಸಿ ನೀರಾಗುತ್ತೆ. ಹೀಗಾಗಿ ನಿತ್ಯ 8,000 ಕ್ಯುಸೆಕ್ ನೀರು ಬಿಡಲು ತೀರ್ಮಾನ ಮಾಡಲಾಗಿದೆ. 1 ಟಿಎಂಸಿ ನೀರು ನಿತ್ಯ ಬಿಡಲು ಆಗುವುದಿಲ್ಲ. CWRCಯ ಶಿಫಾರಸನ್ನು CWMAನಲ್ಲಿ ಅಪೀಲು ಮಾಡಬೇಕು ಎಂದು ಸರ್ವಪಕ್ಷ ಸದಸ್ಯರು ಸಲಹೆ ನೀಡಿದ್ದಾರೆ.
11.7.2024ರಂದು CWRC ಜು.30 ವರೆಗೆ ನಿತ್ಯ 1 ಟಿಎಂಸಿಯಂತೆ ಒಟ್ಟು 20 ಟಿಎಂಸಿ ನೀರು ಬಿಡುಗಡೆಗೆ ಶಿಫಾರಸು ಮಾಡಿತ್ತು. ಜೂನ್ ತಿಂಗಳು ತಮಿಳುನಾಡಿಗೆ 9.14 ಟಿಎಂಸಿ ನೀರು ಬಿಡುಗಡೆ ಮಾಡಬೇಕಾಗಿತ್ತು. ಜುಲೈನಲ್ಲಿ 31.24 ಟಿಎಂಸಿ ನೀರು ಬಿಡುಗಡೆ ಮಾಡಬೇಕಾಗಿದೆ. ಒಟ್ಟು 40.43 ಟಿಎಂಸಿ ನೀರು ಬಿಡುಗಡೆ ಮಾಡಬೇಕು. ಈವರೆಗೆ ನಾವು 5 ಟಿಎಂಸಿಗೂ ಅಧಿಕ ನೀರು ಬಿಡುಗಡೆ ಮಾಡಿದ್ದೇವೆ ಎಂದು ಸಿಎಂ ಮಾಹಿತಿ ನೀಡಿದರು.
ಶೆಡ್‌ನಲ್ಲಿ ಮತ್ತೊಂದು ಮರ್ಡರ್.. ಯುವಕನನ್ನು ಮದುವೆ ಮಾಡಿಸುವುದಾಗಿ ಕರೆದು ಸುಟ್ಟು ಹಾಕಿದ ದುಷ್ಕರ್ಮಿಗಳು
ಹುಷಾರು, ನೀವೂ ತುರಿಕೆ ಗ್ಯಾಂಗ್ ಕೈಚಳಕಕ್ಕೆ ಬಲಿಯಾದೀರಿ… ವಿಡಿಯೊ ನೋಡಿ
ಲವ್ ದೋಖಾ… ನಟ ರಾಜ್ ತರುಣ್ ಪ್ರೇಯಸಿ ಲಾವಣ್ಯ ಆತ್ಮಹತ್ಯೆ ಹೈಡ್ರಾಮಾ, ನಟನ ವಿರುದ್ಧ ವಂಚನೆ ದೂರು