newsics.com
ಕಲಬುರಗಿ: ಇಲ್ಲಿನ ನಗರಾಭಿವೃದ್ಧಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಇಂಜಿನಿಯರ್ ಮೃತಪಟ್ಟು 6 ತಿಂಗಳಾದ ನಂತರ ಮೃತ ಇಂಜಿನಿಯರ್ ಒಬ್ಬರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಕಲಬುರಗಿ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದ ಇಂಜಿನಿಯರ್ ಅಶೋಕ್ ಪುಟಪಾಕ್ ಅವರು ಮೃತಪಟ್ಟು 6 ತಿಂಗಳಾದರೂ ಸರ್ಕಾರಕ್ಕೆ ಮಾಹಿತಿಯೇ ಸಿಕ್ಕಿಲ್ಲ. ಇಂಜಿನಿಯರ್ ಆರು ತಿಂಗಳಿನಿಂದ ಗೈರು ಹಾಜರಾದರೂ ಯಾವುದೇ ಕ್ರಮವನ್ನೂ ಕೈಗೊಂಡಿಲ್ಲ. ಇದರ ಬದಲಾಗಿ ವಾರ್ಷಿಕ ವರ್ಗಾವಣೆ ಮಾಡುವಂತೆ ಮೃತ ಇಂಜಿನಿಯರ್ ಹೆಸರನ್ನು ಉಲ್ಲೇಖಿಸಿ ವರ್ಗಾವಣೆ ಆದೇಶ ಸಿದ್ಧಪಡಿಸಿ ಕಚೇರಿ ಮತ್ತು ಮನೆಯ ವಿಳಾಸಕ್ಕೆ ರವಾನೆ ಮಾಡಿದೆ.
ಇಂಜಿನಿಯರ್ ಅಶೋಕ್ ಪುಟಪಾಕ್ ಎನ್ನುವವರು ಕಳೆದ 6 ತಿಂಗಳ ಹಿಂದೆ ಅಂದರೆ ಜನವರಿಯಲ್ಲಿಯೇ ಮೃತಪಟ್ಟಿದ್ದಾರೆ. ಆದರೆ, ಜು.9ರಂದು ಅವರನ್ನು ನಗರಾಭಿವೃದ್ಧಿ ಇಲಾಖೆಯಿಂದ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ನಗರಾಭಿವೃದ್ಧಿ ಇಲಾಖೆಯ ಕಿರಿಯ ಎಂಜಿನಿಯರ್ ಅಶೋಕ್ ಪುಟಪಾಕ್ ಅವರನ್ನು ಕಲಬುರಗಿ ಜಿಲ್ಲೆಯ ಸೇಡಂ ಪುರಸಭೆಯಿಂದ ಕೊಡಗು ಜಿಲ್ಲೆಯ ಮಡಿಕೇರಿ ನಗರಸಭೆಯ ಕಿರಿಯ ಎಂಜಿನಿಯರ್ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರ ವಿಧಾನಸಭಾ ಕ್ಷೇತ್ರದಲ್ಲಿ ಈ ಎಡವಟ್ಟು ನಡೆದಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ: ನಾಗೇಂದ್ರ ಇಡಿ ಕಸ್ಟಡಿಗೆ, ಬಂಧನ ಭೀತಿಯಿಂದ ಶಾಸಕ ದದ್ದಲ್ ನಾಪತ್ತೆ
ಪಿಸ್ತೂಲ್ ತೋರಿಸಿ ರೈತರಿಗೆ ಬೆದರಿಕೆ ಹಾಕಿದ IAS ಅಧಿಕಾರಿ ತಾಯಿ: ಈಕೆ ದರ್ಬಾರ್ ನೋಡಿ