newsics.com
ಪಾಟ್ನಾ: ನವಾಡದ ರಾಜೌಲಿ ಪ್ರದೇಶದ ನಿವಾಸಿಯಾಗಿರೋ ಸಂತೋಷ್ ಲೋಹರ್ಗೆ ವಿಷಕಾರಿ ಹಾವೊಂದು ಕಚ್ಚಿದೆ. ಆದರೆ ಅದಕ್ಕೆ ಆಕ್ರೋಶಗೊಂಡ ವ್ಯಕ್ತಿ ಮಾಡಿದ್ದೇ ಅಚ್ಚರಿಯ ಸಂಗತಿ.
ಕಾರ್ಮಿಕ ಸಂತೋಷ್ ಲೋಹರ್ ಎಂಬಾತನಿಗೆ ಬೇಸ್ ಕ್ಯಾಂಪ್‌ನಲ್ಲಿ ಮಲಗಿದ್ದಾಗ ವಿಷಕಾರಿ ಹಾವು ಕಚ್ಚಿದೆ. ಇದನ್ನು ಕಂಡು ಗಾಬರಿಯಾಗದೆ, ಸಿಟ್ಟಿಗೆದ್ದ ಸಂತೋಷ್ ಕಬ್ಬಿಣದ ಸಲಾಕೆಯಿಂದ ಹಾವನ್ನು ಹಿಡಿದು ಒಂದಲ್ಲ ಎರಡಲ್ಲಾ ಬರೋಬ್ಬರಿ ಮೂರು ಬಾರಿ ಆ ವಿಷಪೂರಿತ ಹಾವನ್ನು ಕಚ್ಚಿದ್ದಾನೆ ಬಳಿಕ ಅದನ್ನು ಕೊಂದು ಹಾಕಿದ್ದಾನೆ.
ಪ್ರತಿಕ್ರಿಯೆ ನೀಡಿದ ಸಂತೋಷ್ ಲೋಹರ್, ನಮ್ಮ ಹಳ್ಳಿಯಲ್ಲಿ ಹಾವು ಕಚ್ಚಿದರೆ, ವಿಷವನ್ನು ತಟಸ್ಥಗೊಳಿಸಲು ನೀವು ಅದಕ್ಕೆ ಎರಡು ಬಾರಿ ಕಚ್ಚಬೇಕು ಎಂಬ ನಂಬಿಕೆ ಇದೆ. ಹೀಗಾಗಿ ನಾನು ಅದಕ್ಕೆ ಕಚ್ಚಿದೆ ಎಂದು ಹೇಳಿದ್ದಾರೆ. ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ರೈಲ್ವೇ ಅಧಿಕಾರಿಗಳು ಭೇಟಿ ಕೊಟ್ಟು ಸಂತೋಷ್ ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ.