newsics.com
ದಾವಣಗೆರೆ: ಹೆರಿಗೆ ಮಾಡುವ ವೇಳೆ ಹೊಟ್ಟೆಯಲ್ಲಿದ್ದ ಮಗುವಿನ ಮರ್ಮಾಂಗವನ್ನು ಕೊಯ್ದಿದ್ದರಿಂದ ಶಿಶು ಸಾವನ್ನಪ್ಪಿರುವಂತಹ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆ ಕೊಂಡಜ್ಜಿ ರಸ್ತೆಯ ನಿವಾಸಿ ಅರ್ಜುನ್ ಎಂಬುವರ ಪತ್ನಿ ಅಮೃತಾ ಅವರು ಹೆರಿಗೆಗೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು.
ನಾರ್ಮಲ್ ಡೆಲಿವರಿ ಆಗದ ಹಿನ್ನೆಲೆ ಸಿಸೇರಿಯನ್ ಮಾಡಿ ಮಗು ತೆಗೆಯುವ ವೇಳೆ ಮಗುವಿನ ಮರ್ಮಾಂಗವನ್ನೇ ಕಟ್ ಮಾಡಿರುವಂತಹ ಬೆಚ್ಚಿ ಬೀಳಿಸುವ ಘಟನೆಯೊಂದು ನಗರದಲ್ಲಿ ನಡೆದಿದೆ.
ಮಗುವಿನ ಸ್ಥಿತಿ ಚಿಂತಾಜನಕವಾದ್ದರಿಂದ ಮಗುವನ್ನು ಬಾಪೂಜಿ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಶಿಶು ಮೃತಪಟ್ಟಿದೆ. ವೈದ್ಯರ ನಿರ್ಲಕ್ಷ್ಯ ಖಂಡಿಸಿ ಆಸ್ಪತ್ರೆ ಎದುರು ಸಂಬಂಧಿಕರು ಪ್ರತಿಭಟನೆ ಮಾಡಲಾಗಿದೆ.
ದಾವಣಗೆರೆ ಜಿಲ್ಲಾ ಆಸ್ಪತ್ರೆಯ ವೈದ್ಯ ಕಾರಣವೆಂದು ಆರೋಪಿಸಲಾಗಿದೆ. ಸದ್ಯ ಆಸ್ಪತ್ರೆ ಎದುರು ಮಗುವಿನ ಸಂಬಂಧಿಕರಿಂದ ಪ್ರತಿಭಟನೆ ಮಾಡಲಾಗಿದೆ.
ಭಾರೀ ಮಳೆ ಹಿನ್ನೆಲೆ: ಉತ್ತರ ಕನ್ನಡದ 4, ಉಡುಪಿ ಜಿಲ್ಲೆಯ 2 ತಾಲೂಕುಗಳಲ್ಲಿ ನಾಳೆ ಶಾಲಾ, ಕಾಲೇಜಿಗೆ ರಜೆ