newsics.com
ಜೈಪುರ: ರಾಜಸ್ಥಾನದ ಜಲಾವರ್ ಜಿಲ್ಲೆಯಲ್ಲಿ ಮರ್ಯಾದಾ ಹತ್ಯೆಯೊಂದು ಬೆಳಕಿಗೆ ಬಂದಿದೆ.
ಶಿಮ್ಲಾ ಕುಶ್ವಾಹ್ ಎಂಬ ಮಹಿಳೆಯ ಪೋಷಕರು ಆಕೆ ಬೇರೆ ಜಾತಿಗೆ ಸೇರಿದ ರವೀಂದ್ರ ಭೀಲ್ ಅವರನ್ನು ಮದುವೆಯಾಗಲು ಆಕ್ಷೇಪ ವ್ಯಕ್ತಪಡಿಸಿದ್ದರು. 20 ವರ್ಷದ ಯುವತಿಯನ್ನು ಆಕೆಯ ತಂದೆ ಮತ್ತು ಸಹೋದರ ಅಪಹರಣ ಮಾಡಿ, ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯ ಸುಟ್ಟ ದೇಹವನ್ನು ಚಿತಾಗಾರದಿಂದ ಹೊರತೆಗೆದು, ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮಹಿಳೆಯ ಪತಿಯಿಂದ ಮಾಹಿತಿ ಪಡೆದ ನಂತರ ಪೊಲೀಸರು ಸೌರಿತ್ ಗ್ರಾಮವನ್ನು ತಲುಪುವ ವೇಳೆಗೆ ದೇಹದ ಸುಮಾರು ಶೇ. 80ರಷ್ಟು ಸುಟ್ಟುಹೋಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.