newsics.com
ಬೆಂಗಳೂರು: ಮುಂಗಾರಿನ ಎಫೆಕ್ಟ್ ಎಂಬಂತೆ ಬೆಂಗಳೂರು ಸೇರಿ ರಾಜ್ಯಾದ್ಯಂತ ಡೆಂಘೀ ಹರಡುವಿಕೆ ಹೆಚ್ಚಾಗಿದ್ದು, ಜನ ಕಂಗಾಲಾಗಿದ್ದಾರೆ.
ಆಸ್ಪತ್ರೆಗೆ ಎಡತಾಕುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಡೆಂಘೀ ಕೇಸ್ ಏರಿಕೆ ಬೆನ್ನಲ್ಲೇ ಪ್ಲೇಟ್ಲೆಟ್ಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ತೀವ್ರ ಕೊರತೆ ಎದುರಾಗಿದೆ.
ವ್ಯಕ್ತಿಗೆ ಡೆಂಘೀ ಬಂದರೆ ಅದು ನೇರವಾಗಿ ಆ ವ್ಯಕ್ತಿಯ ದೇಹದ ರಕ್ತದಲ್ಲಿನ ಪ್ಲೇಟ್ಲೆಟ್ ಹಾಗೂ ಬಿಳಿ ರಕ್ತ ಕಣಗಳನ್ನು ಕಡಿಮೆ ಮಾಡುತ್ತದೆ. ಡೆಂಘೀಯಿಂದ ಪಾರಾಗಬೇಕಾದರೆ, ನಮ್ಮ ದೇಹದ ರೋಗ ನಿರೋಧಕ ಶಕ್ತಿಯ ಸ್ವರೂಪವಾಗಿರುವ ಬಿಳಿ ರಕ್ತ ಕಣಗಳು ಮತ್ತು ಪ್ಲೇಟ್ಲೆಟ್ಗಳ ಸಂಖ್ಯೆಯನ್ನು ಹೆಚ್ಚಾಗಬೇಕು. ಹೀಗಾಗಿ ಡೆಂಘೀ ಪ್ರಕರಣ ಹೆಚ್ಚಾದ ಬೆನ್ನಲ್ಲೇ ಪ್ಲೇಟ್ಲೆಟ್ಗಳಿಗೆ ಬೇಡಿಕೆ ಹೆಚ್ಚಾಗಿದೆ.
ಕಳೆದ ತಿಂಗಳು ಪ್ರತಿ ಬ್ಲಡ್ ಬ್ಯಾಂಕ್‌ನಲ್ಲಿ ನಿತ್ಯ 5-10 ಯುನಿಟ್ ಪ್ಲೇಟ್ಲೆಟ್ಗಳಿಗೆ ಬೇಡಿಕೆಯಿತ್ತು. ಆದರೆ ಈಗ 50-60 ಯುನಿಟ್ನಷ್ಟು ರ‌್ಯಾಂಡಮ್ ಡೋನರ್ ಪ್ಲೇಟ್ಲೆಟ್ಗಳಿಗೆ ಬೇಡಿಕೆ ಉಂಟಾಗಿದೆ.
ಪ್ಲೇಟ್‌ಲೆಟ್ ಕೊರತೆ ನೀಗಿಸಲು ಹಲವು ಕಡೆ ರಕ್ತದಾನ ಶಿಬಿರಗಳನ್ನು ಆಯೋಜನೆ ಮಾಡಲಾಗುತ್ತಿದ್ದು, ಹಲವರಿಂದ ಪ್ಲೇಟ್ಲೆಟ್ ಪಡೆಯಲಾಗುತ್ತಿದೆ ಎಂದು ರೆಡ್ ಕ್ರಾಸ್ ಘಟಕದ ಸಿಬ್ಬಂದಿ ತಿಳಿಸಿದ್ದಾರೆ.
ಹತ್ರಾಸ್ ಕಾಲ್ತುಳಿತ: ಮೃತರ ಸಂಖ್ಯೆ 116ಕ್ಕೇರಿಕೆ, ಹೆಣಗಳ ರಾಶಿ ನೋಡಿ ಹೃದಯಾಘಾತದಿಂದ ಪೊಲೀಸ್ ಸಾವು
ಕಾಲೇಜು ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ ಖಾಸಗಿ ಕಾಲೇಜು ಫಸ್ಟ್ ಪಿಯು ವಿದ್ಯಾರ್ಥಿನಿ!