newsics.com
ರೀಲ್ಸ್‌ಗಾಗಿ ಜನರು ಅಪಾಯಕಾರಿ ಸ್ಟಂಟ್ ಮಾಡುವ ಪ್ರವೃತ್ತಿ ಗಣನೀಯವಾಗಿ ಏರಿಕೆಯಾಗಿದೆ.
ಶಾಲಾ ಬಾಲಕಿಯರಿಬ್ಬರು ರೀಲ್ಸ್‌ಗಾಗಿ ಸ್ಟಂಟ್ ಮಾಡಿದ್ದಾರೆ. ಓರ್ವ ಬಾಲಕಿಯ ಭುಜದ ಮೇಲೆ ಹತ್ತಿ ಬ್ಯಾಕ್ ಫ್ಲಿಪ್ ಪ್ರಯತ್ನಿಸಿದ್ದಾಳೆ. ಆದರೆ ಲ್ಯಾಂಡಿಂಗ್ ವೇಳೆ ಸಮಸ್ಯೆಯಾಗಿದೆ. ಪರಿಣಾಮ ಬಾಲಕಿ ಇದೀಗ ಎದ್ದು ನಿಲ್ಲದ ಪರಿಸ್ಥಿತಿಯಲ್ಲಿದ್ದಾಳೆ.
ಸಮವಸ್ತ್ರದಲ್ಲಿರುವ ಇಬ್ಬರು ಬಾಲಕಿಯರು ಹೆದ್ದಾರಿಯಲ್ಲಿ ಸ್ಟಂಟ್ ಮಾಡಲು ಮುಂದಾಗಿದ್ದಾರೆ. ಸ್ಟಂಟ್ ಮತ್ತಷ್ಟು ವೈರಲ್ ಆಗಲಿ ಎಂದು ಬಾಲಕಿಯರು ಸಾಹಸ ಪ್ರದರ್ಶನ ಮಾಡಿದ್ದಾರೆ. ರಸ್ತೆಯಲ್ಲಿ ಬಾಲಕಿ ಮತ್ತೊಬ್ಬ ಬಾಲಕಿಯ ಭುಜದ ಮೇಲೆ ಹತ್ತಿ ಬ್ಯಾಕ್ ಫ್ಲಿಪ್ ಮಾಡಿದ್ದಾಳೆ. ಎತ್ತರದಿಂದ ಬ್ಯಾಕ್ ಫ್ಲಿಪ್‌ಗೆ ಪ್ರಯತ್ನಿಸಿದ ಬಾಲಕಿ ನೆಲಕ್ಕೆ ಲ್ಯಾಂಡಿಂಗ್ ಆಗವಾಗ ಕಾಲು ಜಾರಿದೆ. ಪರಿಣಾಮ ದೊಪ್ಪನೆ ಬಿದ್ದಿದ್ದಾಳೆ.
ರಸ್ತೆಯಲ್ಲಿ ಬಿದ್ದ ರಭಸಕ್ಕೆ ಡಿಸ್ಕ್ ಮುರಿತಕ್ಕೊಳಗಾಗಿದೆ. ವಿದ್ಯಾರ್ಥಿ ಆಕೆಯನ್ನು ಎತ್ತಿ ನಿಲ್ಲಿಸುವ ಪ್ರಯತ್ನ ಮಾಡಿದರೂ ಆಕೆಗೆ ನಿಲ್ಲಲು ಸಾಧ್ಯವಾಗಿಲ್ಲ. ಇಲ್ಲಿಗೆ ಈ ರೀಲ್ಸ್ ಅಂತ್ಯಗೊಂಡಿದೆ.
ಆದರೆ ಬಾಲಕಿ ನಡೆಯಲು ಹಾಗೂ ನಿಲ್ಲಲು ಸಾಧ್ಯವಾಗದ ಕಾರಣ ಚಿಕಿತ್ಸೆ ಪಡೆಯುತ್ತಿದ್ದಾಳೆ. ಸುದೀರ್ಘ ದಿನಗಳ ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದಾರೆ. ಫೆಬ್ರವರಿಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. 17 ಲಕ್ಷಕ್ಕೂ ಹೆಚ್ಚಿನ ವೀಕ್ಷಣೆ ಪಡೆದಿದೆ.
https://www.instagram.com/reel/C3WjS77yp8P/?igsh=N2kzc3lybmtwMTQz