newsics.com
ನವದೆಹಲಿ:ನಟಿ ಶೆರ್ಲಿನ್ ಚೋಪ್ರಾ ಅವರದ್ದು ವಿವಾದಾತ್ಮಕ ವ್ಯಕ್ತಿತ್ವ. ಅನೇಕ ಸಂದರ್ಭಗಳಲ್ಲಿ ಅವರು ನೆಗೆಟಿವ್ ಕಾರಣದಿಂದಲೇ ಸುದ್ದಿ ಆಗಿದ್ದಾರೆ. ಅದರಲ್ಲೂ ಸೋಷಿಯಲ್ ಮೀಡಿಯಾಗಳಲ್ಲಿ ಈಕೆಯ ಹವಾನೇ ಬೇರೆ ಬಿಡಿ.ಇದೀಗ ಈ ಶೆರ್ಲಿನ್ ಹುಡುಗನೊಬ್ಬನನ್ನು ಕಾಡಿಸಿ, ಪೀಡಿಸಿ, ಗೋಳುಹೊಯ್ದುಕೊಂಡು ಬೇಡ, ಬೇಡ ಎಂದರೂ ಮರೆಗೆ ಕರೆದೊಯ್ದು ಏನೋ ಮಾಡಿದ್ದಾಳೆ. ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ.
https://www.instagram.com/reel/C8hXMNJy1qC/?utm_source=ig_embed&utm_campaign=loading
ತನ್ನ ಮಗನ ವಯಸ್ಸಿನ ಚಿಕ್ಕ ಹುಡುಗನನ್ನು ಎಳೆದು ತಂದಿದ್ದಾಳೆ. ಈಕೆ ಎಳೆದಾಡುವುದರಿಂದ ಆತ ತುಂಬಾ ಕಿರಿ ಕಿರಿ ಅನುಭವಿಸಿದ್ದಾನೆ ಎನಿಸುತ್ತೆ. ಆತನ ಮುಖ ನೋಡಿದರೆ ಈ ನಟಿಯನ್ನು ನೋಡಿ ಇರಿಟೇಟ್ ಆದಂತಿದೆ. ಆದರೆ ಎಷ್ಟೇ ಹೇಳಿದ್ರೂ ಶೆರ್ಲಿನ್ ಅವನನ್ನು ಹಿಡಿದುಕೊಂಡಿದ್ದಾರೆ.ಆತ ಬಿಡಿ ಬಿಡಿ ಎನ್ನುತ್ತಿದ್ದಾನೆ.ಆದರೆ ಶೆರ್ಲಿನ್ ಎಳೆದುಕೊಂಡು ಬೋರ್ಡ್ ಹಿಂದೆ ಹೋಗಿ ಕಿಸ್ ಮಾಡಿದ್ದಾರೆ.ನಂತರ ಹೊರಗಡೆ ಬಂದು ಲಿಪ್ಸ್ಟಿಕ್ ಕಲೆಯನ್ನು ಒರೆಸಿದ್ದಾರೆ. ಬಳಿಕ ಆ ಹುಡುಗನಿಗೂ ತುಂಬಾ ಇರುಸುಮುರುಸು ಆದರಂತೆ ಕಾಣುತ್ತದೆ. ಅವನನ್ನು ಶೆರ್ಲಿನ್ ತಬ್ಬಿ ಮುದ್ದಾಡುತ್ತಾಳೆ.
ಈ ವಿಡಿಯೋ ನೋಡಿದ ನೆಟ್ಟಿಗರು ಹೆಣ್ಣು ಜನ್ಮಕ್ಕೇ ಕಳಂಕ ನೀನು ಎನ್ನುತ್ತಿದ್ದಾರೆ.ನಿನ್ನಂಥ ಹೆಣ್ಣುಗಳಿಂದಲೇ ಗಂಡು ಕುಲದ ಮರ್ಯಾದೆ ಹೋಗುತ್ತಿದೆ. ಹೆಣ್ಣು ಮಕ್ಕಳು ಮಾಡುವುದೆಲ್ಲಾ ಮಾಡಿ ಕೊನೆಗೆ ಗಂಡಸರದ್ದೇ ತಪ್ಪು ಎನ್ನುವುದಕ್ಕೆ ನೀನೇ ಸಾಕ್ಷಿ ಎಂದೆಲ್ಲಾ ಬೈಯುತ್ತಿದ್ದಾರೆ.