Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಮನೆಗೆ ಬಂದು ಬಾಲಕನಿಗೆ ಇಂಜೆಕ್ಷನ್​​ ಚುಚ್ಚಿ ಹೋದ ಮುಸುಕುಧಾರಿಗಳು
ಕರ್ನಾಟಕಪ್ರಮುಖ

ಮನೆಗೆ ಬಂದು ಬಾಲಕನಿಗೆ ಇಂಜೆಕ್ಷನ್​​ ಚುಚ್ಚಿ ಹೋದ ಮುಸುಕುಧಾರಿಗಳು

Share
2 Min Read
SHARE

newsics.com/ನ್ಯೂಸಿಕ್ಸ್

ಮನೆಯಲ್ಲಿ ಆಟವಾಡಿಕೊಂಡಿದ್ದ ಬಾಲಕನಿಗೆ ಅಪರಿಚಿತ ಮುಸುಕುಧಾರಿಗಳು ಇಂಜೆಕ್ಷನ್ ಚುಚ್ಚಿ ಪರಾರಿಯಾಗಿರುವ ಆರೋಪ ಕೇಳಿಬಂದಿದೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ನೆಲಗುಡ್ಡ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಣಿಕಂಠ ಗಾಣಿಗೇರ (11) ಎಂಬ ಬಾಲಕನಿಗೆ ಇಂಜೆಕ್ಷನ್ ಚುಚ್ಚಲಾಗಿದ್ದು, ಇದು ಸಹಜವಾಗಿ ಗ್ರಾಮೀಣ ಭಾಗದಲ್ಲಿ ಆತಂಕ ಮನೆ ಮಾಡಿದೆ. ಸದ್ಯ ಬಾಲಕನನ್ನು ಹುಬ್ಬಳ್ಳಿ ಕಿಮ್ಸ್​​ಗೆ ದಾಖಲಿಸಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

ನಡೆದಿದ್ದೇನು?
ಬೈಕ್​​ನಲ್ಲಿ ಬಂದಿದ್ದ ಇಬ್ಬರು ಅಪರಿಚಿತ ಮುಸುಕುಧಾರಿಗಳು ಮಣಿಕಂಠ ಗಾಣಿಗೇರಗೆ ಇಂಜೆಕ್ಷನ್ ಚುಚ್ಚಿ ಪರಾರಿಯಾಗಿರುವ ಆರೋಪ ಕೇಳಿಬಂದಿದೆ. ಸ್ವತಃ ಬಾಲಕ ಹೇಳುವ ಪ್ರಕಾರ, ‘ನಾನು ಮನೆಯಲ್ಲಿ ಆಟವಾಡುತ್ತಿದ್ದೆ. ಹೆತ್ತವರು ಕೆಲಸಕ್ಕೆ ಹೊಲಕ್ಕೆ ಹೋಗಿದ್ದರು. ಮಧ್ಯಾಹ್ನ ಊಟ ಮಾಡಿ ಮನೆಯಲ್ಲಿದ್ದಾಗ, ಇಬ್ಬರು ಮುಸುಕು ಹಾಕಿಕೊಂಡು ಬೈಕ್ ಮೇಲೆ ಬಂದಿದ್ದರು. ನಿಮ್ಮ ತಂದೆ-ತಾಯಿ ಎಲ್ಲಿ ಅಂತ ಕೇಳಿದರು. ನಾನು ಹೊಲಕ್ಕೆ ಹೋಗಿದ್ದಾರೆ ಅಂತ ಹೇಳಿದೆ. ಅವರಿಬ್ಬರು ಏಕಾಏಕಿ ನನ್ನ ಗಟ್ಟಿಯಾಗಿ ಹಿಡಿದರು. ನಾನು ಕಚ್ಚಲು ಮುಂದಾದೆ, ಆಗ ಬಾಯಿಯನ್ನು ಕೂಡ ಗಟ್ಟಿಯಾಗಿ ಹಿಡಿದು ನನ್ನ ಎಡಗೈಗೆ ಇಂಜೆಕ್ಷನ್ ಮಾಡಿ ಹೋದರು. ನಾನು ಸ್ವಲ್ಪ ಹೊತ್ತು ಮೂರ್ಛೆ ಹೋಗಿದ್ದೆ. ಸಂಜೆ ತಂದೆ-ತಾಯಿ ಮನೆಗೆ ಬರುತ್ತಿದ್ದಂತೆ ನಡೆದಿರುವ ಘಟನೆ ಬಗ್ಗೆ ಹೇಳಿದ್ದೇನೆ’ ಎಂದಿದ್ದಾನೆ.

ಇನ್ನು ಪೋಷಕರು ಗ್ರಾಮದಲ್ಲಿ ಮಕ್ಕಳಿಗೆ ಯಾರಾದರೂ ಇಂಜೆಕ್ಷನ್ ಮಾಡಿದ್ದಾರಾ ಅಂತ ವಿಚಾರಿಸಿದ್ದಾರೆ. ಗ್ರಾಮದ ಬೇರೆ ಯಾವ ಮಕ್ಕಳಿಗೂ ಯಾರು ಇಂಜೆಕ್ಷನ್ ಮಾಡಿಲ್ಲ. ಇಂಜೆಕ್ಷನ್ ಮಾಡಲು ಯಾರು ಕೂಡ ಬಂದಿಲ್ಲ ಅಂತ ಗೊತ್ತಾಗಿದೆ. ಹೀಗಾಗಿ ಕೂಡಲೇ ಬಾಲಕನನ್ನು ಕುಂದಗೋಳ ಸರ್ಕಾರಿ ಆಸ್ಪತ್ರೆಗೆ ಹೆತ್ತವರು ಕರೆದುಕೊಂಡು ಹೋಗಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್​ಗೆ ಕರೆದುಕೊಂಡು ಬಂದು ದಾಖಲಿಸಿದ್ದಾರೆ.

ಬಾಲಕನಿಗೆ ಯಾರೋ ಅಪರಿಚಿತರು ಬಂದು ಇಂಜೆಕ್ಷನ್ ಮಾಡಿ ಹೋಗಿದ್ದಾರೆ ಅನ್ನೋ ಸುದ್ದಿ ನೆಲಗುಡ್ಡ ಸೇರಿದಂತೆ ಸುತ್ತಮುತ್ತಲಿನ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣ ಮಾಡಿದೆ. ಹೆತ್ತವರು ತಮ್ಮ ಮಕ್ಕಳನ್ನು ಮನೆ ಹೊರಗಡೆ ಬಿಡಲು ಭಯ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಆದರೆ ಬಾಲಕನ ಮಾತುಗಳಲ್ಲಿ ಅನೇಕ ಅನುಮಾನಗಳು ಮೂಡಿವೆ. ಬಾಲಕ ಮಣಿಕಂಠ, ತನಗೆ ಇಂಜೆಕ್ಷನ್ ಮಾಡಿದ್ದಾರೆ ಅಂತ ಸ್ಪಷ್ಟವಾಗಿ ಹೇಳುತ್ತಿದ್ದಾನೆ. ಆದರೆ ಗ್ರಾಮದಲ್ಲಿ ಇಬ್ಬರು ಬೈಕ್ ಮೇಲೆ ಬಂದು ಬಾಲಕನಿಗೆ ಇಂಜೆಕ್ಷನ್ ಮಾಡಿದ್ದನ್ನು ಬೇರೆಯವರು ನೋಡಿಲ್ಲ. ಜೊತೆಗೆ ಬೇರೆ ಯಾವ ಮಕ್ಕಳಿಗೂ ಇಂಜೆಕ್ಷನ್ ಮಾಡಿಲ್ಲ. ಬಾಲಕನ ಕೈ ಮೇಲೆ ಇಂಜೆಕ್ಷನ್ ಮಾಡಿರುವ ಯಾವುದೇ ಗುರುತುಗಳು ಕೂಡ ಸ್ಪಷ್ಟವಾಗಿ ಕಾಣುತ್ತಿಲ್ಲ. ಈ ಬಗ್ಗೆ ಆತನ ಹೆತ್ತವರು ಕೂಡ ಆತಂಕ ವ್ಯಕ್ತಪಡಿಸಿದ್ದಾರೆ.

ಹೆತ್ತವರು ಹೇಳಿದ್ದಿಷ್ಟು
‘ನಮ್ಮ ಮಗ ನನಗೆ ಇಂಜೆಕ್ಷನ್ ಮಾಡಿದ್ದಾನೆ ಅಂತ ಹೇಳಿದ್ದಾನೆ. ನಾವು ಆತನಿಗೆ ಅನೇಕ ಬಾರಿ ಕೇಳಿದರು ಅದನ್ನೇ ಹೇಳಿದ್ದಾನೆ. ಹೀಗಾಗಿ ಚಿಕಿತ್ಸೆಗೆ ಕರೆದುಕೊಂಡು ಬಂದಿದ್ದೇವೆ’ ಎಂದು ಮಣಿಕಂಠ ತಾಯಿ ಸುಜಾತಾ ಹೇಳಿದ್ದಾರೆ. ಇನ್ನು ಹುಬ್ಬಳ್ಳಿ ಕಿಮ್ಸ್ ವೈದ್ಯರು, ಬಾಲಕನ ಆರೋಗ್ಯದಲ್ಲಿ ಯಾವುದೇ ಬದಲಾವಣೆಗಳು ಕಂಡುಬಂದಿಲ್ಲ. ಯಾವುದೇ ಇಂಜೆಕ್ಷನ್ ಮಾಡಿರುವ ಗುರುತುಗಳು ಸ್ಪಷ್ಟವಾಗಿ ಕಂಡಿಲ್ಲ. ಹೀಗಾಗಿ ಪರೀಕ್ಷೆ ನಡೆಸುತ್ತಿದ್ದೇವೆ ಎಂದಿದ್ದಾರೆ.

ಇನ್ನು ಬಾಲಕನಿಗೆ ಇಂಜೆಕ್ಷನ್ ಮಾಡಿರುವ ಬಗ್ಗೆ ಅಸಲಿಯತ್ತು ತಿಳಿಯುವ ನಿಟ್ಟಿನಲ್ಲಿ ಕುಂದಗೋಳ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮತ್ತೊಂದಡೆ ಹುಬ್ಬಳ್ಳಿ ಕಿಮ್ಸ್​ನಲ್ಲಿ ಬಾಲಕನ ಬ್ಲಡ್ ಟೆಸ್ಟ್, ಎಕ್ಸ್ ರೇ ಕೂಡ ಮಾಡಲಾಗುತ್ತಿದೆ. ವೈದ್ಯಕೀಯ ವರದಿ ಮತ್ತು ಪೊಲೀಸರ ತನಿಖೆ ನಂತರವೇ, ಬಾಲಕನಿಗೆ ಯಾರಾದರು ಇಂಜೆಕ್ಷನ್ ಮಾಡಿದರಾ ಅಥವಾ ಈ ಘಟನೆ ಹಿಂದೆ ಬೇರೆ ಏನಾದರೂ ಉದ್ದೇಶ ಇದೆಯಾ ಅನ್ನೋದು ಗೊತ್ತಾಗಲಿದೆ.

ಇನ್ಮುಂದೆ ಟೈರ್ ಪಂಕ್ಚರ್ ಆದ್ರೆ ಈ ಡಿವೈಸ್‌ ಅನ್ನು ಜೇಬಿನಲ್ಲೇ ಇಟ್ಟುಕೊಳ್ಳಿ

 

TAGGED:Masked men came to the house and injected the boy
Share This Article
Facebook Twitter Copy Link Print
Previous Article ಇನ್ಮುಂದೆ ಟೈರ್ ಪಂಕ್ಚರ್ ಆದ್ರೆ ಚಿಂತೆ‌ ಬೇಡ, ಈ ಡಿವೈಸ್ ಇಟ್ಕೊಂಡಿರಿ
Next Article ಮಗುವಿನ ಆರೋಗ್ಯಕ್ಕೆ ಅಪ್ಪನೂ ಕಾರಣ: ಸಂಶೋಧನೆಯಿಂದ ಬಯಲಾದ ಆಘಾತಕಾರಿ ಸತ್ಯ!

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?