Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Personality Test ನಿಮ್ಮ ನೆಚ್ಚಿನ ಹಣ್ಣು ಕೂಡ ಬಹಿರಂಗಪಡಿಸುತ್ತೆ ವ್ಯಕ್ತಿತ್ವದ ಗುಟ್ಟು!
ಪ್ರಮುಖಲೈಫ್‌ಸ್ಟೈಲ್

Personality Test ನಿಮ್ಮ ನೆಚ್ಚಿನ ಹಣ್ಣು ಕೂಡ ಬಹಿರಂಗಪಡಿಸುತ್ತೆ ವ್ಯಕ್ತಿತ್ವದ ಗುಟ್ಟು!

Share
2 Min Read
SHARE

newsics.com/ನ್ಯೂಸಿಕ್ಸ್

ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಹಣ್ಣುಗಳಲ್ಲಿ ಅನೇಕ ವಿಟಮಿನ್‌ಗಳು ಮತ್ತು ಖನಿಜಗಳು ಇರುತ್ತವೆ. ಈ ಹಣ್ಣುಗಳು ನಮ್ಮನ್ನು ಆರೋಗ್ಯವಂತರನ್ನಾಗಿ ಮಾಡುವುದಲ್ಲದೆ, ನಮ್ಮ ವ್ಯಕ್ತಿತ್ವದ ಬಗ್ಗೆಯೂ ಹೇಳುತ್ತವೆ. ವ್ಯಕ್ತಿಯು ಯಾವ ಹಣ್ಣನ್ನು ಇಷ್ಟ ಪಡುತ್ತಾನೆ ಎನ್ನುವ ಆಧಾರದ ಮೇಲೆ ಆತನ ಗುಣ ಸ್ವಭಾವವನ್ನು ತಿಳಿದುಕೊಳ್ಳಬಹುದು. ಇನ್ನು ಯಾವುದೇ ಒಬ್ಬ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳಲು ಇಚ್ಚಿಸಿದರೆ ಆ ವ್ಯಕ್ತಿಯ ನೆಚ್ಚಿನ ಹಣ್ಣಿನ ಬಗ್ಗೆ ತಿಳಿದುಕೊಂಡರೆ ಸಾಕು. ಆ ವ್ಯಕ್ತಿಯ ರಹಸ್ಯಗಳು ಬಹಿರಂಗಗೊಳ್ಳುತ್ತವೆ.

ಸೇಬು

ದಿನಕ್ಕೆ ಒಂದು ಸೇಬು ವೈದ್ಯರನ್ನು ದೂರವಿರಿಸುತ್ತೆ, ಆದರೆ ಇದು ನಿಮ್ಮ ವ್ಯಕ್ತಿತ್ವವನ್ನು ಸಹ ವಿವರಿಸುತ್ತೆ. ಸೇಬುಗಳನ್ನು ಇಷ್ಟಪಡುವ ಜನರು ಹೆಚ್ಚಾಗಿ ಮಹತ್ವಾಕಾಂಕ್ಷೆಯ, ದೃಢನಿಶ್ಚಯ ಮತ್ತು ಪ್ರಾಕ್ಟಿಕಲ್ ವ್ಯಕ್ತಿ ಆಗಿರುತ್ತಾರೆ. ಇವರು ತಮ್ಮ ದಿನಚರಿ ಮತ್ತು ಶಿಸ್ತಿನ ಬಗ್ಗೆ ತುಂಬಾ ಕಟ್ಟುನಿಟ್ಟಾಗಿರುತ್ತಾರೆ.

ಕಿತ್ತಳೆ: ಕಿತ್ತಳೆ ಹಣ್ಣು ಇಷ್ಟಪಡುವ ಜನರು ತಾಳ್ಮೆಯಿಂದಿರುತ್ತಾರೆ ಮತ್ತು ಅವರು ವಿಶ್ವಾಸಾರ್ಹರು ಹೌದು. ಅವರು ಸುಳ್ಳು ಹೇಳಲು ಇಷ್ಟಪಡುವುದಿಲ್ಲ. ಅವರು ತುಂಬಾ ಗಂಭೀರ ಮತ್ತು ಚಿಂತನಶೀಲರಾಗಿರುತ್ತಾರೆ.

ಬಾಳೆಹಣ್ಣು: ಬಾಳೆಹಣ್ಣು ಸಕಾರಾತ್ಮಕತೆ ಮತ್ತು ಭರವಸೆಯನ್ನು ಸಂಕೇತಿಸುತ್ತವೆ. ಹೀಗಿರುವಾಗ ನೀವು ಬಾಳೆಹಣ್ಣನ್ನು ಇಷ್ಟಪಡುವವರಾಗಿದ್ದರೆ ಅವು ನೀವು ದಯಾಳು ವ್ಯಕ್ತಿ ಎಂದು ಸೂಚಿಸುತ್ತವೆ. ನೀವು ಸ್ನೇಹಪರ ಮತ್ತು ಸಭ್ಯರಾಗಿರುತ್ತೀರಿ. ನಿಮ್ಮ ಒಳ್ಳೆಯ ಸ್ವಭಾವದವರಾದ ನಿಮ್ಮನ್ನು ಕೆಲವೊಮ್ಮೆ ಜನರು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಸಾಧ್ಯತೆ ಇರುತ್ತದೆ.

ಮಾವು : ಮಾವು ಇಷ್ಟಪಡುವವರು ಉನ್ನತ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ತಮ್ಮ ಮಾತಿನ ಮೂಲಕ ಇತರರನ್ನು ಸುಲಭವಾಗಿ ಆಕರ್ಷಿಸಬಲ್ಲರು. ಇವರು ಸ್ವಲ್ಪ ಹಠಮಾರಿಗಳಾದರೂ, ಬಲವಾದ ಅಭಿಪ್ರಾಯಗಳನ್ನು ಹೊಂದಿರುತ್ತಾರೆ. ಜೀವನದಲ್ಲಿ ಉನ್ನತ ಮಟ್ಟಕ್ಕೆ ಏರುತ್ತಾರೆ ಮತ್ತು ಸಂಬಂಧಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ.

ಕಲ್ಲಂಗಡಿ : ಕಲ್ಲಂಗಡಿಯನ್ನು ಇಷ್ಟಪಡುವವರು ವಿಶೇಷ ಸ್ವಭಾವದವರು. ಇವರು ಅತ್ಯಂತ ಬುದ್ಧಿವಂತರು ಮತ್ತು ಸೃಜನಶೀಲತೆಯನ್ನು  ಮೈಗೂಡಿಸಿಕೊಂಡಿರುತ್ತಾರೆ. ತಮ್ಮ ಚಾಣಾಕ್ಷತನದಿಂದ ಜೀವನದಲ್ಲಿ ಉತ್ತಮ ಸ್ಥಾನವನ್ನು ಗಳಿಸುತ್ತಾರೆ.

ನಿಂಬೆಹಣ್ಣು : ನಿಂಬೆಹಣ್ಣನ್ನು ಇಷ್ಟಪಡುವವರು ಸ್ವಚ್ಛತೆಗೆ ಹೆಚ್ಚಿನ ಮೌಲ್ಯ ನೀಡುತ್ತಾರೆ. ತಮ್ಮ ಮನೆ ಮತ್ತು ಕೆಲಸದ ಸ್ಥಳವನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಲು ಬಯಸುತ್ತಾರೆ. ಇವರು ತುಂಬಾ ಪದ್ಧತಿವಂತರು ಮತ್ತು ಸೃಜನಶೀಲರಾಗಿರುತ್ತಾರೆ.

ಚೆರ್ರಿ : ಚೆರ್ರಿ ಹಣ್ಣನ್ನು ಇಷ್ಟಪಡುವವರಿಗೆ ಕಲ್ಪನಾಶಕ್ತಿ  ಹೆಚ್ಚು. ಇವರು ಅಂತರ್ಮುಖಿಗಳು  ಮತ್ತು ಕಡಿಮೆ ಮಾತನಾಡಲು ಬಯಸುತ್ತಾರೆ. ತುಂಬಾ ಶಾಂತ ಸ್ವಭಾವದವರಾದ ಇವರು, ತಮಗೆ ಇಷ್ಟವಾದವರೊಂದಿಗೆ ಮಾತ್ರ ತುಂಬಾ ಪ್ರೀತಿಯಿಂದ ಇರುತ್ತಾರೆ

ಪೇರಳೆ: ಪೇರಳೆ ಹಣ್ಣುಗಳನ್ನು ಇಷ್ಟಪಡುವ ಜನರು ತುಂಬಾ ಉತ್ಸಾಹಭರಿತರು. ಅವರು ಸುಲಭವಾಗಿ ಚಡಪಡಿಸುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಅವರು ಸುಲಭವಾಗಿ ಕೋಪಗೊಳ್ಳುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಮುಂಗೋಪಿ ಮತ್ತು ಉತ್ಸಾಹಭರಿತರಲ್ಲದೆ, ಅವರು ಹರ್ಷಚಿತ್ತದಿಂದ ಕೂಡಿದ ವ್ಯಕ್ತಿಗಳೂ ಹೌದು.

ದಾಳಿಂಬೆ: ದಾಳಿಂಬೆ ಇಷ್ಟಪಡುವ ಜನರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿಯನ್ನು ಹೊಂದಿರುತ್ತಾರೆ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಬಯಸುತ್ತಾರೆ. ಅಲ್ಲದೆ ಅವರು ಹೆಚ್ಚು ಸಕಾರಾತ್ಮಕ ಮನಸ್ಥಿತಿಯನ್ನು ಹೊಂದಿರುವ ವ್ಯಕ್ತಿಗಳೂ ಹೌದು. ಇವರಿಗೆ ತಾಳ್ಮೆಯೂ ಹೆಚ್ಚು.

ಅನಾನಸ್: ಅನಾನಸ್ ಇಷ್ಟಪಡುವವರು ಕುತೂಹಲ ಮತ್ತು ಹಠಾತ್ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಅವರು ಸಕಾರಾತ್ಮಕ ಮತ್ತು ಉತ್ಸಾಹಭರಿತರೂ ಹೌದು. ಅಲ್ಲದೆ ಇವರು ಸ್ವಾವಲಂಬಿ ಜೀವನವನ್ನು ನಡೆಸಲು ಇಷ್ಟಪಡುತ್ತಾರೆ.

Giorgia Meloni ಬೆಂಕಿಯಿಂದ ಬೂದಿಯಾದ ಮನೆ, ಬೀದಿಗೆ ಬಿದ್ದ ಕುಟುಂಬ, ನೈಟ್‌ಕ್ಲಬ್‌ನ ಬಾರ್ ಕೌಂಟರ್ : ಈಗ ಇಟಲಿಯ ಮೊದಲ ಮಹಿಳಾ ಪ್ರಧಾನಿ

TAGGED:Even your favorite fruit reveals the secret of your personality!
Share This Article
Facebook Twitter Copy Link Print
Previous Article Giorgia Meloni ಬೆಂಕಿಯಿಂದ ಬೂದಿಯಾದ ಮನೆ, ಬೀದಿಗೆ ಬಿದ್ದ ಕುಟುಂಬ, ನೈಟ್‌ಕ್ಲಬ್‌ನ ಬಾರ್ ಕೌಂಟರ್ : ಈಗ ಇಟಲಿಯ ಮೊದಲ ಮಹಿಳಾ ಪ್ರಧಾನಿ
Next Article ಖಾಸಗಿ ಆಸ್ಪತ್ರೆಗಳಲ್ಲಿ ಬಡವರಿಗೆ ಉಚಿತ ಚಿಕಿತ್ಸೆ ಕಡ್ಡಾಯ : ಸುಪ್ರೀಂಕೋರ್ಟ್ ಆದೇಶ

Popular Posts

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

You Might Also Like

ಕರ್ನಾಟಕದೇಶಪ್ರಮುಖಮನರಂಜನೆ

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read
ಕರ್ನಾಟಕಪ್ರಮುಖ

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read
ಕರ್ನಾಟಕಪ್ರಮುಖಮನರಂಜನೆ

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?