Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Giorgia Meloni ಬೆಂಕಿಯಿಂದ ಬೂದಿಯಾದ ಮನೆ, ಬೀದಿಗೆ ಬಿದ್ದ ಕುಟುಂಬ, ನೈಟ್‌ಕ್ಲಬ್‌ನ ಬಾರ್ ಕೌಂಟರ್ : ಈಗ ಇಟಲಿಯ ಮೊದಲ ಮಹಿಳಾ ಪ್ರಧಾನಿ
ದೇಶಪ್ರಮುಖವಿದೇಶ

Giorgia Meloni ಬೆಂಕಿಯಿಂದ ಬೂದಿಯಾದ ಮನೆ, ಬೀದಿಗೆ ಬಿದ್ದ ಕುಟುಂಬ, ನೈಟ್‌ಕ್ಲಬ್‌ನ ಬಾರ್ ಕೌಂಟರ್ : ಈಗ ಇಟಲಿಯ ಮೊದಲ ಮಹಿಳಾ ಪ್ರಧಾನಿ

Share
3 Min Read
SHARE

newsics.com/ನ್ಯೂಸಿಕ್ಸ್

ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ. ಇವರೀಗ ಪ್ರಧಾನಿ ಮೋದಿ ಜತೆಗಿನ ಸ್ನೇಹಮಯ ವಿಡಿಯೊ ಮತ್ತು ಫೋಟೊಗಳಿಂದಾಗಿ ಜಾಗತಿಕ ಸುದ್ದಿಯಲ್ಲಿದ್ದಾರೆ. ಈ ಸುಂದರಿಯ ನಗುಮೊಗದ ಹಿಂದೆ ಕಡು ಕಷ್ಟಗಳ, ತೀವ್ರ ನೋವಿನ ಕತೆ ಇದೆ.

ಮುರಿದುಬಿದ್ದ ಸಂಸಾರ, ನೈಟ್‌ಕ್ಲಬ್‌ನ ಬಾರ್ ಕೌಂಟರ್, ಬಾಲ್ಯದ ದುರಂತಗಳು ಹಾಗೂ ವೈಯಕ್ತಿಕ ನೋವುಗಳನ್ನೆಲ್ಲಾ ದಾಟಿಬಂದು ಅವರು ಇಟಲಿಯ ಇತಿಹಾಸದಲ್ಲೇ ಮೊದಲ ಮಹಿಳಾ ಪ್ರಧಾನ ಮಂತ್ರಿಯಾಗಿ ಅಧಿಕಾರ ಚುಕ್ಕಾಣಿ ಹಿಡಿದಿದ್ದಾರೆ. ಅವರ ಈ ಯಶೋಗಾಥೆಯ ಹಿಂದೆ ಹಲವು ಆಘಾತಕಾರಿ ಮತ್ತು ಕಠಿಣ ಹಾದಿಗಳು ಅಡಗಿವೆ.

ಮೆಲೋನಿ ಅವರ ಜೀವನದ ಹೋರಾಟ ಅವರು ಈ ಜಗತ್ತಿಗೆ ಬರುವ ಮುನ್ನವೇ ಆರಂಭವಾಗಿತ್ತು. ತಮ್ಮ ಆತ್ಮಚರಿತ್ರೆ ‘ಅಯೋ ಸೋನೋ ಜಾರ್ಜಿಯಾ’ (Io Sono Giorgia – ಐ ಆಮ್ ಜಾರ್ಜಿಯಾ) ಪುಸ್ತಕದಲ್ಲಿ ಅವರು ಈ ಬಗ್ಗೆ ಬರೆದುಕೊಂಡಿದ್ದಾರೆ. ಅವರ ತಾಯಿ ಅನ್ನಾ ಅವರು ಗರ್ಭಿಣಿಯಾಗಿದ್ದಾಗ ಆರ್ಥಿಕ ಸಮಸ್ಯೆಯಿಂದಾಗಿ ಗರ್ಭಪಾತ  ಮಾಡಿಸಿಕೊಳ್ಳಲು ನಿರ್ಧರಿಸಿದ್ದರಂತೆ. ಅದರಂತೆ ಕ್ಲಿನಿಕ್‌ಗೆ ತೆರಳಿದ್ದ ಅನ್ನಾ, ಕೊನೆಯ ಕ್ಷಣದಲ್ಲಿ ತಮ್ಮ ನಿರ್ಧಾರವನ್ನು ಬದಲಿಸಿಕೊಂಡು ಮರಳಿ ಬಂದಿದ್ದರು. ನನ್ನ ತಾಯಿಯ ಅಂದಿನ ಧೈರ್ಯದ ನಿರ್ಧಾರವೇ ನನಗೆ ಜೀವ ಭಿಕ್ಷೆ ನೀಡಿತು ಎಂದು ಮೆಲೋನಿ ಹಲವು ಬಾರಿ ನೆನಪಿಸಿಕೊಂಡಿದ್ದಾರೆ.

ತಂದೆ ಫ್ರಾನ್ಸೆಸ್ಕೊ ತೆರಿಗೆ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದರು. ತಾಯಿ ಕಾದಂಬರಿಗಾರ್ತಿಯಾಗಿದ್ದರು. ಆದರೆ ಜಾರ್ಜಿಯಾಗೆ ಕೇವಲ ಒಂದು ವರ್ಷ ವಯಸ್ಸಾಗಿದ್ದಾಗ ಅವರ ತಂದೆ ಕುಟುಂಬವನ್ನು ತೊರೆದು ಬೇರೆ ಮದುವೆಯಾದರು. ಮುಂದೆ ಅವರು ಡ್ರಗ್ಸ್‌ ಸ್ಮಗ್ಲಿಂಗ್‌ ಕೇಸ್‌ನಲ್ಲಿ ಸಿಲುಕಿ ಜೈಲು ಪಾಲಾಗಿ ಸತ್ತು ಹೋದರು. ಜಾರ್ಜಿಯಾ ಅವರ ತಾಯಿ ಅನ್ನಾ ಅವರೊಬ್ಬರೇ ಇಬ್ಬರು ಹೆಣ್ಣು ಮಕ್ಕಳನ್ನು ಬೆಳೆಸಬೇಕಾಯಿತು.

 

ಶಾರುಖ್‌ ಖಾನ್‌, ಅಮಿತಾಭ್‌ ಬಚ್ಚನ್‌ನಂತಹ ಜನಪ್ರಿಯ ಸ್ಟಾರ್‌ಗಳ ಸಹಾಯವಿಲ್ಲದೆ ಜಾಗತಿಕವಾಗಿ ಪ್ರಚಾರ ಗಿಟ್ಟಿಸಿಕೊಂಡ ಮೆಲೋಡಿ ಚಾಕೊಲೇಟ್‌

ಜಾರ್ಜಿಯಾಗೆ ಆಗ ಮೂರು ವರ್ಷ. ಅವರು ಮತ್ತು ಅಕ್ಕ ಅರಿಯಾನಾ ಜತೆ ಮನೆಯಲ್ಲಿ ಆಟವಾಡುತ್ತಿದ್ದರು. ಮೇಣದಬತ್ತಿಗಳನ್ನು ಹಚ್ಚಿದ್ದರು. ತಮಾಷೆಗಾಗಿ ಆ ಮೇಣದಬತ್ತಿಗಳನ್ನು ಬೆಡ್‌ಶೀಟ್‌ಗಳು ಮತ್ತು ಆಟಿಕೆಗಳಿಂದ ಮುಚ್ಚಿಟ್ಟರು. ಇದರಿಂದಾಗಿ ಇಡೀ ಕೋಣೆಗೆ ಬೆಂಕಿ ಹೊತ್ತಿಕೊಂಡು ಮನೆ ಪೂರ್ತಿ ಭಸ್ಮವಾಯಿತು. ಕೆಲಕಾಲ, ಜಾರ್ಜಿಯಾ ಮತ್ತು ಅವರ ಅಕ್ಕ ಅಜ್ಜಿಯ ಮನೆಯಲ್ಲಿ ಇರಬೇಕಾಯಿತು. ಅದು ಅವರ ಜೀವನದ ಅತ್ಯಂತ ಕಠಿಣ ಮತ್ತು ಅಸ್ಥಿರವಾದ ಸಮಯವಾಗಿತ್ತು.

ಹದಿಹರೆಯಕ್ಕೆ ಬರುವಷ್ಟರಲ್ಲಿ ಕಾಲೇಜು ಶಿಕ್ಷಣಕ್ಕೆ ತಗಲುವ ವೆಚ್ಚವನ್ನು ಭರಿಸಲು ತಮ್ಮ ಕುಟುಂಬದ ಬಳಿ ಹಣವಿಲ್ಲ ಎಂಬ ಕಹಿ ಸತ್ಯ ಜಾರ್ಜಿಯಾಗೆ ಅರ್ಥವಾಗಿತ್ತು. ತಾಯಿ ಕಾದಂಬರಿ ಬರೆದು ಗಳಿಸುತ್ತಿದ್ದ ಅತ್ಯಲ್ಪ ಹಣ ಜೀವನಕ್ಕೇ ಸಾಕಾಗುತ್ತಿರಲಿಲ್ಲ. ಹೀಗಾಗಿ ಜಾರ್ಜಿಯಾ ಸಣ್ಣ ಪ್ರಾಯದಲ್ಲೇ ದುಡಿಯಲು ಆರಂಭಿಸಿದರು. ಅವರು ಸಿಡಿಗಳನ್ನು (CDs) ಮಾರಾಟ ಮಾಡಿದರು, ಬೇಬಿ ಸಿಟ್ಟರ್ (ಮಕ್ಕಳನ್ನು ನೋಡಿಕೊಳ್ಳುವ ಕೆಲಸ) ಆಗಿ ಕೆಲಸ ಮಾಡಿದರು. ಅಷ್ಟೇ ಅಲ್ಲದೆ, ರೋಮ್‌ನ ಪ್ರಸಿದ್ಧ ನೈಟ್‌ಕ್ಲಬ್ ಆದ ‘ಪೈಪರ್ ಕ್ಲಬ್’ನಲ್ಲಿ (Piper Club) ಬಾರ್ ಟೆಂಡರ್ (ಮದ್ಯ ಸರಬರಾಜು ಮಾಡುವ ಕೆಲಸ) ಆಗಿಯೂ ಕೆಲಸ ಮಾಡಿದರು.

ವರ್ಷಗಳ ನಂತರ, ಅಂದರೆ 2013 ರಲ್ಲಿ ಈ ಬಗ್ಗೆ ಮಾತನಾಡಿದ್ದ ಮೆಲೋನಿ, ನಾನು ಸಂಸತ್ತಿನ ಒಳಗೆ ಕುಳಿತು ಕಲಿತದ್ದಕ್ಕಿಂತ ಹೆಚ್ಚಾಗಿ, ಬಾರ್ ಕೌಂಟರ್ ಹಿಂದೆ ನಿಂತು ಸಾಮಾನ್ಯ ಜನರ ಬದುಕಿನ ಕಷ್ಟಗಳನ್ನು ಕಲಿತಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು.

ಮೆಲೋನಿ ಹಂತಹಂತವಾಗಿ ರಾಜಕೀಯದಲ್ಲಿ ಬೆಳೆದರು. 2004ರಲ್ಲಿ ತಮ್ಮ 27ನೇ ವಯಸ್ಸಿನಲ್ಲಿ ‘ನ್ಯಾಷನಲ್ ಅಲಯನ್ಸ್’ ಪಕ್ಷದ ರಾಷ್ಟ್ರೀಯ ಯುವ ಘಟಕದ ಅಧ್ಯಕ್ಷರಾದರು. ಈ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳೆ ಇವರಾಗಿದ್ದರು. 2006ರಲ್ಲಿ ಸಂಸತ್ತಿಗೆ ಆಯ್ಕೆಯಾದರು. ಎರಡು ವರ್ಷಗಳ ನಂತರ, ಅಂದರೆ 2008ರಲ್ಲಿ, ಇಟಲಿಯ ಇತಿಹಾಸದಲ್ಲೇ ಅತ್ಯಂತ ಕಿರಿಯ ವಯಸ್ಸಿನ ಕ್ಯಾಬಿನೆಟ್ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.

Largest family ಈತನಿಗೆ 8 ಹೆಂಡತಿಯರು, 130 ಮಕ್ಕಳು: ಊರನ್ನೇ ಆವರಿಸಿದ ಕುಟುಂಬ!

 

 

TAGGED:a family thrown out onto the streetA house burned to ashesa nightclub bar counter: Now Italy's first female Prime Minister
Share This Article
Facebook Twitter Copy Link Print
Previous Article Largest family ಈತನಿಗೆ 8 ಹೆಂಡತಿಯರು, 130 ಮಕ್ಕಳು: ಊರನ್ನೇ ಆವರಿಸಿದ ಕುಟುಂಬ!
Next Article Personality Test ನಿಮ್ಮ ನೆಚ್ಚಿನ ಹಣ್ಣು ಕೂಡ ಬಹಿರಂಗಪಡಿಸುತ್ತೆ ವ್ಯಕ್ತಿತ್ವದ ಗುಟ್ಟು!

Popular Posts

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

You Might Also Like

ಕರ್ನಾಟಕಪ್ರಮುಖ

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read
ಕರ್ನಾಟಕಪ್ರಮುಖ

Heart attack ಹೃದಯಾಘಾತದಿಂದ ಶಾಲೆಯಲ್ಲೇ ಉಸಿರು ಚೆಲ್ಲಿದ ಒಂದನೇ ತರಗತಿ ಬಾಲಕ!

2 Min Read
ದೇಶಪ್ರಮುಖ

ಎಥೆನಾಲ್‌ ಬಳಕೆಗೆ ಕೇಂದ್ರ ಅನುಮೋದನೆ, ಇನ್ಮುಂದೆ ಪೆಟ್ರೋಲ್ ಸಿಗಲ್ವಾ?

1 Min Read
ಪ್ರಮುಖಲೈಫ್‌ಸ್ಟೈಲ್

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?