newsics.com/ನ್ಯೂಸಿಕ್ಸ್
ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಹಣ್ಣುಗಳಲ್ಲಿ ಅನೇಕ ವಿಟಮಿನ್‌ಗಳು ಮತ್ತು ಖನಿಜಗಳು ಇರುತ್ತವೆ. ಈ ಹಣ್ಣುಗಳು ನಮ್ಮನ್ನು ಆರೋಗ್ಯವಂತರನ್ನಾಗಿ ಮಾಡುವುದಲ್ಲದೆ, ನಮ್ಮ ವ್ಯಕ್ತಿತ್ವದ ಬಗ್ಗೆಯೂ ಹೇಳುತ್ತವೆ. ವ್ಯಕ್ತಿಯು ಯಾವ ಹಣ್ಣನ್ನು ಇಷ್ಟ ಪಡುತ್ತಾನೆ ಎನ್ನುವ ಆಧಾರದ ಮೇಲೆ ಆತನ ಗುಣ ಸ್ವಭಾವವನ್ನು ತಿಳಿದುಕೊಳ್ಳಬಹುದು. ಇನ್ನು ಯಾವುದೇ ಒಬ್ಬ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳಲು ಇಚ್ಚಿಸಿದರೆ ಆ ವ್ಯಕ್ತಿಯ ನೆಚ್ಚಿನ ಹಣ್ಣಿನ ಬಗ್ಗೆ ತಿಳಿದುಕೊಂಡರೆ ಸಾಕು. ಆ ವ್ಯಕ್ತಿಯ ರಹಸ್ಯಗಳು ಬಹಿರಂಗಗೊಳ್ಳುತ್ತವೆ.
ಸೇಬು
ದಿನಕ್ಕೆ ಒಂದು ಸೇಬು ವೈದ್ಯರನ್ನು ದೂರವಿರಿಸುತ್ತೆ, ಆದರೆ ಇದು ನಿಮ್ಮ ವ್ಯಕ್ತಿತ್ವವನ್ನು ಸಹ ವಿವರಿಸುತ್ತೆ. ಸೇಬುಗಳನ್ನು ಇಷ್ಟಪಡುವ ಜನರು ಹೆಚ್ಚಾಗಿ ಮಹತ್ವಾಕಾಂಕ್ಷೆಯ, ದೃಢನಿಶ್ಚಯ ಮತ್ತು ಪ್ರಾಕ್ಟಿಕಲ್ ವ್ಯಕ್ತಿ ಆಗಿರುತ್ತಾರೆ. ಇವರು ತಮ್ಮ ದಿನಚರಿ ಮತ್ತು ಶಿಸ್ತಿನ ಬಗ್ಗೆ ತುಂಬಾ ಕಟ್ಟುನಿಟ್ಟಾಗಿರುತ್ತಾರೆ.
ಕಿತ್ತಳೆ: ಕಿತ್ತಳೆ ಹಣ್ಣು ಇಷ್ಟಪಡುವ ಜನರು ತಾಳ್ಮೆಯಿಂದಿರುತ್ತಾರೆ ಮತ್ತು ಅವರು ವಿಶ್ವಾಸಾರ್ಹರು ಹೌದು. ಅವರು ಸುಳ್ಳು ಹೇಳಲು ಇಷ್ಟಪಡುವುದಿಲ್ಲ. ಅವರು ತುಂಬಾ ಗಂಭೀರ ಮತ್ತು ಚಿಂತನಶೀಲರಾಗಿರುತ್ತಾರೆ.
ಬಾಳೆಹಣ್ಣು: ಬಾಳೆಹಣ್ಣು ಸಕಾರಾತ್ಮಕತೆ ಮತ್ತು ಭರವಸೆಯನ್ನು ಸಂಕೇತಿಸುತ್ತವೆ. ಹೀಗಿರುವಾಗ ನೀವು ಬಾಳೆಹಣ್ಣನ್ನು ಇಷ್ಟಪಡುವವರಾಗಿದ್ದರೆ ಅವು ನೀವು ದಯಾಳು ವ್ಯಕ್ತಿ ಎಂದು ಸೂಚಿಸುತ್ತವೆ. ನೀವು ಸ್ನೇಹಪರ ಮತ್ತು ಸಭ್ಯರಾಗಿರುತ್ತೀರಿ. ನಿಮ್ಮ ಒಳ್ಳೆಯ ಸ್ವಭಾವದವರಾದ ನಿಮ್ಮನ್ನು ಕೆಲವೊಮ್ಮೆ ಜನರು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಸಾಧ್ಯತೆ ಇರುತ್ತದೆ.
ಮಾವು : ಮಾವು ಇಷ್ಟಪಡುವವರು ಉನ್ನತ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ತಮ್ಮ ಮಾತಿನ ಮೂಲಕ ಇತರರನ್ನು ಸುಲಭವಾಗಿ ಆಕರ್ಷಿಸಬಲ್ಲರು. ಇವರು ಸ್ವಲ್ಪ ಹಠಮಾರಿಗಳಾದರೂ, ಬಲವಾದ ಅಭಿಪ್ರಾಯಗಳನ್ನು ಹೊಂದಿರುತ್ತಾರೆ. ಜೀವನದಲ್ಲಿ ಉನ್ನತ ಮಟ್ಟಕ್ಕೆ ಏರುತ್ತಾರೆ ಮತ್ತು ಸಂಬಂಧಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ.
ಕಲ್ಲಂಗಡಿ : ಕಲ್ಲಂಗಡಿಯನ್ನು ಇಷ್ಟಪಡುವವರು ವಿಶೇಷ ಸ್ವಭಾವದವರು. ಇವರು ಅತ್ಯಂತ ಬುದ್ಧಿವಂತರು ಮತ್ತು ಸೃಜನಶೀಲತೆಯನ್ನು ಮೈಗೂಡಿಸಿಕೊಂಡಿರುತ್ತಾರೆ. ತಮ್ಮ ಚಾಣಾಕ್ಷತನದಿಂದ ಜೀವನದಲ್ಲಿ ಉತ್ತಮ ಸ್ಥಾನವನ್ನು ಗಳಿಸುತ್ತಾರೆ.
ನಿಂಬೆಹಣ್ಣು : ನಿಂಬೆಹಣ್ಣನ್ನು ಇಷ್ಟಪಡುವವರು ಸ್ವಚ್ಛತೆಗೆ ಹೆಚ್ಚಿನ ಮೌಲ್ಯ ನೀಡುತ್ತಾರೆ. ತಮ್ಮ ಮನೆ ಮತ್ತು ಕೆಲಸದ ಸ್ಥಳವನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಲು ಬಯಸುತ್ತಾರೆ. ಇವರು ತುಂಬಾ ಪದ್ಧತಿವಂತರು ಮತ್ತು ಸೃಜನಶೀಲರಾಗಿರುತ್ತಾರೆ.
ಚೆರ್ರಿ : ಚೆರ್ರಿ ಹಣ್ಣನ್ನು ಇಷ್ಟಪಡುವವರಿಗೆ ಕಲ್ಪನಾಶಕ್ತಿ ಹೆಚ್ಚು. ಇವರು ಅಂತರ್ಮುಖಿಗಳು ಮತ್ತು ಕಡಿಮೆ ಮಾತನಾಡಲು ಬಯಸುತ್ತಾರೆ. ತುಂಬಾ ಶಾಂತ ಸ್ವಭಾವದವರಾದ ಇವರು, ತಮಗೆ ಇಷ್ಟವಾದವರೊಂದಿಗೆ ಮಾತ್ರ ತುಂಬಾ ಪ್ರೀತಿಯಿಂದ ಇರುತ್ತಾರೆ
ಪೇರಳೆ: ಪೇರಳೆ ಹಣ್ಣುಗಳನ್ನು ಇಷ್ಟಪಡುವ ಜನರು ತುಂಬಾ ಉತ್ಸಾಹಭರಿತರು. ಅವರು ಸುಲಭವಾಗಿ ಚಡಪಡಿಸುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಅವರು ಸುಲಭವಾಗಿ ಕೋಪಗೊಳ್ಳುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಮುಂಗೋಪಿ ಮತ್ತು ಉತ್ಸಾಹಭರಿತರಲ್ಲದೆ, ಅವರು ಹರ್ಷಚಿತ್ತದಿಂದ ಕೂಡಿದ ವ್ಯಕ್ತಿಗಳೂ ಹೌದು.
ದಾಳಿಂಬೆ: ದಾಳಿಂಬೆ ಇಷ್ಟಪಡುವ ಜನರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿಯನ್ನು ಹೊಂದಿರುತ್ತಾರೆ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಬಯಸುತ್ತಾರೆ. ಅಲ್ಲದೆ ಅವರು ಹೆಚ್ಚು ಸಕಾರಾತ್ಮಕ ಮನಸ್ಥಿತಿಯನ್ನು ಹೊಂದಿರುವ ವ್ಯಕ್ತಿಗಳೂ ಹೌದು. ಇವರಿಗೆ ತಾಳ್ಮೆಯೂ ಹೆಚ್ಚು.
ಅನಾನಸ್: ಅನಾನಸ್ ಇಷ್ಟಪಡುವವರು ಕುತೂಹಲ ಮತ್ತು ಹಠಾತ್ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಅವರು ಸಕಾರಾತ್ಮಕ ಮತ್ತು ಉತ್ಸಾಹಭರಿತರೂ ಹೌದು. ಅಲ್ಲದೆ ಇವರು ಸ್ವಾವಲಂಬಿ ಜೀವನವನ್ನು ನಡೆಸಲು ಇಷ್ಟಪಡುತ್ತಾರೆ.