newsics.com/ನ್ಯೂಸಿಕ್ಸ್
ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ನಡುವಿನ ರಾಜತಾಂತ್ರಿಕ ಬಾಂಧವ್ಯ ಕೇವಲ ಮಾತುಕತೆಗಷ್ಟೇ ಸೀಮಿತವಾಗಿಲ್ಲ, ಅದು ಇಂಟರ್ನೆಟ್‌ನ ಅತ್ಯಂತ ದೊಡ್ಡ ಟ್ರೆಂಡ್ ಕೂಡ ಹೌದು ಎಂಬುದು ಮತ್ತೊಮ್ಮೆ ಸಾಬೀತಾಗಿದೆ ರೋಮ್‌ನಲ್ಲಿ ನಡೆದ ಉಭಯ ನಾಯಕರ ಭೇಟಿಯ ವೇಳೆ ನಡೆದ ಒಂದು ಅತ್ಯಂತ ಸರಳ ಹಾಗೂ ಕ್ಯೂಟ್ ಪ್ರಸಂಗ ಈಗ ಜಾಗತಿಕ ಮಟ್ಟದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ತಮ್ಮ ವಿದೇಶ ಪ್ರವಾಸದಲ್ಲಿ ಭಾರತದ ಕರಕುಶಲತೆ ವಸ್ತುಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಭಾರತದ ಪರಂಪರೆ, ಐತಿಹಾಸಕ ಹಿನ್ನಲೆಯ ವಸ್ತುಗಳನ್ನು ಮೋದಿ ಗಿಫ್ಟ್ ಆಗಿ ನೀಡಿದ್ದಾರೆ. ಈ ಬಾರಿ ಪ್ರಧಾನಿ ಮೋದಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿಗೆ ವಿಶೇಷ ಗಿಫ್ಟ್ ಕೊಂಡೊಯ್ದಿದ್ದರು. ಬಳಿಕ ಮೆಲೋನಿ ಭೇಟಿ ವೇಳೆ ಈ ಗಿಫ್ಟ್ ನೀಡಿದ್ದಾರೆ. ಮೆಲೋನಿಗೆ ಮೋದಿ ಮೆಲೋಡಿ ಟೋಫಿ ಗಿಫ್ಟ್ ನೀಡಿದ್ದಾರೆ. ಮೆಲೋಡಿ ಚಾಕೋಲೇಟ್‌ಗಳನ್ನು ಮೆಲೋಡಿಗೆ ಗಿಫ್ಟ್ ನೀಡಿದ್ದಾರೆ.
ಪ್ರಧಾನಿ ಮೋದಿ ನೀಡಿದ ಗಿಫ್ಟ್ ಕುರಿತು ಜಾರ್ಜಿಯಾ ಮೆಲೋನಿ ವಿಡಿಯೋ ಮಾಡಿ ಸಂಭ್ರಮಿಸಿದ್ದಾರೆ. ಈ ವಿಡಿಯೋದಲ್ಲಿ ಪ್ರಧಾನಿ ಮೋದಿ ನನಗೆ ವಿಶೇಷ ಉಡುಗೊರೆಯೊಂದನ್ನು ತಂದಿದ್ದಾರೆ. ಈ ಉಡುಗೊರೆ ವಿಶೇಷ ಹಾಗೂ ಅತ್ಯುತ್ತಮವಾಗಿದೆ ಎಂದು ಮೆಲೋನಿ ಹೇಳಿದ್ದಾರೆ. ಮೋದಿ ಜೊತೆಗೆ ನಿಂತು ಕೊಂಡ ವಿಡಿಯೋ ಮಾಡಿದ್ದಾರೆ. ವಿಶೇಷ ಅಂದರೆ ಮೋದಿ ವಿಶೇಷ ಉಡುಗೊರೆ ನನಗೆ ತಂದಿದ್ದಾರೆ ಎಂದಾಗ ಮೋದಿ, ಮೆಲೋಡಿ ಎಂದಿದ್ದಾರೆ. ಬಳಿಕ ಇಬ್ಬರ ನಗು ಈ ವಿಡಿಯೋದಲ್ಲಿ ಸೆರೆಯಾಗಿದೆ. ಇದೀಗ ಈ ವಿಡಿಯೋ ಭಾರಿ ವೈರಲ್ ಆಗಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಇಂಟರ್ನೆಟ್‌ನಲ್ಲಿ ಹಳೆಯ ‘Melodi’ (ಮೆಲೋನಿ + ಮೋದಿ) ಹ್ಯಾಶ್‌ಟ್ಯಾಗ್ ಟ್ರೆಂಡ್ ಮತ್ತೊಮ್ಮೆ ಮುಂಚೂಣಿಗೆ ಬಂದಿದೆ. ನೆಟ್ಟಿಗರು ಈ ಕ್ಷಣವನ್ನು ಇಟ್ಟುಕೊಂಡು ತರಹೇವಾರಿ ಮೀಮ್ಸ್, ಎಡಿಟ್‌ಗಳು ಮತ್ತು ತಮಾಷೆಯ ಪೋಸ್ಟ್‌ಗಳನ್ನು ಕ್ರಿಯೇಟ್ ಮಾಡುತ್ತಿದ್ದಾರೆ. ರಾಜಕೀಯದ ಗಂಭೀರತೆಯ ನಡುವೆ ಪಾಪ್ ಕಲ್ಚರ್ ಮಿಕ್ಸ್ ಆಗಿ ಇಂಟರ್ನ್ಯಾಷನಲ್ ಡಿಪ್ಲೊಮಸಿ ಈಗ ಯುವ ಪೀಳಿಗೆಗೆ ಇಷ್ಟವಾಗುವಂತೆ ಬದಲಾಗಿದೆ.
ಪ್ರಧಾನಿ ಮೋದಿ ಹಾಗೂ ಜಾರ್ಜಿಯಾ ಮೆಲೋನಿ ದ್ವಿಪಕ್ಷೀಯ ಮಾತಕತೆಯೂ ಭಾರಿ ಚರ್ಚೆಯಾಗುತ್ತಿದೆ. ಮೆಲೋನಿ ಜೊತೆಗೆ ಡಿನ್ನರ್ ಸವಿದ ಮೋದಿ, ಬಳಿಕ ಐತಿಹಾಸಿಕ ಕೊಲೊಸಿಯಂಗೆ ಭೇಟಿ ನೀಡಿದ್ದಾರೆ. ಭಾರತ ಹಾಗೂ ಇಟಲಿ ನಡುವಿನ ಸಂಬಂಧ, ವ್ಯಾಪಾರ ವಹಿವಾಟು ಸೇರಿದಂತೆ ಹಲವು ದ್ವಿಪಕ್ಷೀಯ ವ್ಯವಹಾರಗಳ ಕುರಿತು ಚರ್ಚಿಸಿದ್ದಾರೆ. ರೋಮ್‌ನ ಹಲವು ಐತಿಹಾಸಿಕ ತಾಣಗಳಲ್ಲಿ ಮೋದಿ ಹಾಗೂ ಮೆಲೋನಿ ಭೇಟಿ ಹಾಗೂ ನಡೆಸಿದ ಮಾತುಕತೆ ಫೋಟೋಗಳು ವೈರಲ್ ಆಗಿದೆ.