newsics.com/ನ್ಯೂಸಿಕ್ಸ್
ಶಿವಾನಂದ್ನೀಲಣ್ಣನವರ್ಗೆ ಬಡ್ಡಿ ದುಡ್ಡು ಮಾಡೋದೊಂದೇ ವ್ಯಾಪಾರ ಅಲ್ಲ. ಸಿನಿಮಾ ಫ್ಯಾಷನ್ ಕೂಡ ಇತ್ತು. ಅದು ಯಾವ್ ಮಟ್ಟದ ಫ್ಯಾಷನ್ ಅಂದ್ರೆ, ಬಾಲಿವುಡ್ನ ಹಾಟಿ ನೀಲಿ ತಾರೆ ಅಂತಲೇ ಫೇಮಸ್ ಆಗಿದ್ದ ಸನ್ನಿ ಲಿಯೋನ್ರನ್ನ ಎಷ್ಟೇ ದುಡ್ಡು ಖರ್ಚಾದ್ರು ಪರವಾಗಿಲ್ಲ, ಕನ್ನಡದ ಸಿನಿಮಾಕ್ಕೆ ಕರೆ ತರಬೇಕು ಅನ್ನೋ ದೊಡ್ಡ ಹಟ.. ಅದು ಚಾಂಪಿಯನ್ ಅನ್ನೋ ಸಿನಿಮಾಕ್ಕಾಗಿ ಮಾಡಿದ ಶಪಥ..
2023ರಲ್ಲಿ ಇದೇ ಶಿವಾನಂದ್ ನೀಲಣ್ಣನವರ್ಕನ್ನಡದಲ್ಲಿ ಚಾಂಪಿಯನ್ ಅನ್ನೋ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದ ಸ್ಪೆಷಲ್ ಹಾಡಿನಲ್ಲಿ ನರ್ತಿಸೋಕೆ ನೀಲಿತಾರೆ ಸನ್ನಿ ಲಿಯೋನ್ರನ್ನ ಕರೆಸಿದ್ದ. ಸನ್ನಿನೋ ನೀಲಣ್ಣ ಕೊಟ್ಟ ಬಿಲ್ಡಪ್ಗೆ ಮನಸೋತು ‘ಡಿಗ್ರಿಬಿಲ್ಲಿ ನಾನು..’ ಅಂತ ಸಖತ್ ಆಗಿ ಡಾನ್ಸ್ ಮಾಡಿದ್ಲು..
ಮಾಜಿ ನೀಲಿ ತಾರೆ ಜೊತೆ ಮಾಡಿದ್ದೇನು?
ಪಡ್ಡೆ ಹುಡುಗರ ಮನದರಸಿ ಮಾಜಿ ನೀಲಿ ತಾರೆ ಸನ್ನಿ ಲಿಯೋನ್’ಚಾಂಪಿಯನ್’ ಸಿನಿಮಾದ ಸ್ಪೆಷಲ್ಹಾಡಿಗೆ ನರ್ತಿಸೋದಕ್ಕಾಗಿ ಭಾರಿ ಡಿಮ್ಯಾಂಡ್ ಮಾಡಿದ್ರು. ಅಂದೋ ಶಿವಾನಂದ್ಬಳಿ ಕೈ ತುಂಬ ದುಡ್ಡು ಓಡಾಡ್ತಿದ್ದ ಕಾಲ. ಹಿಂದೆ ಮುಂದೆ ಯೋಚ್ನೆ ಮಾಡದೇ ಸನ್ನಿಗೆ ಬರೋಬ್ಬರಿ ಒಂದು ಕೋಟಿ ರೂಪಾಯಿ ಸಂಭಾವನೆ ಕೊಟ್ಟು ಜೆಸ್ಟ್ ಒಂದೇ ಒಂದು ಹಾಡಿನಲ್ಲಿ ಡಾನ್ಸ್ ಮಾಡಿಸಿದ್ದ.
ಡ್ರ್ಯಾಗನ್’ ಗ್ಲಿಂಪ್ಸ್: ವಿಲನ್ ಆದ ಎನ್ಟಿಆರ್; ಸಖತ್ ರಾ ಆಗಿದೆ ನೀಲ್ ಸಿನಿಮಾ! ವಿಡಿಯೋ ನೋಡಿ